ಪೆಟ್ರೋಲ್, ಡಿಸೇಲ್ ದರ ಲೀಟರ್ಗೆ ಮತ್ತೆ 90 ಪೈಸೆ ಏರಿಕೆ
ದೇಶಾದ್ಯಂತ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರ ಪ್ರತಿ ಲೀಟರ್ಗೆ ಸರಾಸರಿ 90 ಪೈಸೆ ಏರಿಕೆ ಮಾಡಿದ್ದು, ಒಂದೇ ವಾರದಲ್ಲಿ ಎರಡನೇ ಬಾರಿ ತೈಲ ಬೆಲೆ ಏರಿಕೆಯಾಗಿ ಗ್ರಾಹಕರನ್ನು ಕಂಗೆಡಿಸಿದೆ. ಬೆಂಗಳೂರಿನಲ್ಲಿ ಮಂಗಳವಾರ ಡೀಸೆಲ್ ದರದಲ್ಲಿ ಪ್ರತಿ ಲೀಟರ್ಗೆ 94 ಪೈಸೆ ಏರಿಕೆಯಾಗಿದೆ. ನಾಲ್ಕು ದಿನಗಳ ಹಿಂದೆ 106.17 ರೂ. ಇದ್ದ ಪೆಟ್ರೋಲ್ ದರ 107.16 ರೂ. ಹಾಗೂ 94.10 ರೂ. ಇದ್ದ ಡೀಸೆಲ್ ದರ 95.03 ರೂ. ಗೆ
ದೇಶದ ಆರ್ಥಿಕ ಬಿಕ್ಕಟ್ಟು ನಿವಾರಣೆ, ಉತ್ತಮ ಮಳೆಗಾಗಿ ತಿಮ್ಮಪ್ಪನ ಬಳಿ ಪ್ರಾರ್ಥನೆ: ಡಿಕೆ ಶಿವಕುಮಾರ್
ದೇಶವು ಆರ್ಥಿಕ ಬಿಕ್ಕಟ್ಟಿನಿಂದ ಬಳಲಬಾರದು. ಎಲ್ಲರಿಗೂ ಶಕ್ತಿ, ಉತ್ತಮ ಆರೋಗ್ಯ ಲಭಿಸಲಿ. ರಾಜ್ಯದಲ್ಲಿ ಉತ್ತಮ ಮಳೆ ಬರಲಿ ಎಂದು ಭಗವಂತ ವೆಂಕಟೇಶ್ವರನ ಬಳಿ ಪ್ರಾರ್ಥಿಸಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ತಿರುಮಲದಲ್ಲಿ ರ ಶ್ರೀ ವೆಂಕಟೇಶ್ವರ
ಭಾರತದ ಬಲಿಷ್ಠ ಆರ್ಥಿಕತೆ ಕುಸಿತ ಯಾರಿಂದ ಆಯ್ತು ಅನ್ನೋದನ್ನು ಮೋದಿ ಹೇಳಲಿ: ಡಿಕೆ ಸುರೇಶ್
“ಸಮೃದ್ಧ, ಶಕ್ತಿಯುತ ಇಡೀ ವಿಶ್ವದಲ್ಲೇ ಬಲಿಷ್ಠವಾದ ಆರ್ಥಿಕ ವ್ಯವಸ್ಥೆ ಹಾಳಾಗಿದೆ ಅಂದರೆ ಅದಕ್ಕೆ ಪ್ರಧಾನ ಮಂತ್ರಿಗಳೇ ಕಾರಣ. ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಎಂದು ಸ್ಪಷ್ಟನೆ ನೀಡಬೇಕು ಹಾಗೂ ಈ ದೇಶದ ಜನರ ಕ್ಷಮೆ ಯಾಚನೆ ಮಾಡಬೇಕು” ಎಂದು ಬಮುಲ್ ಅಧ್ಯಕ್ಷರಾದ
ಎಸಿ ಆನ್ ಮಾಡಿ ವಿಂಡೋ, ಡೋರ್ ಮುಚ್ಚಿ ಕಾರಿನಲ್ಲಿ ಮಲಗಿದ್ದ ಚಾಲಕ ಸಾವು
ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನೆಲಗೆದರಹಳ್ಳಿ ಬಳಿ ಕಾರಿನ ಗ್ಲಾಸ್ ಏರಿಸಿ ಎಸಿ ಆನ್ ಮಾಡಿ ಮಲಗಿದ್ದ ಖಾಸಗಿ ಕಂಪನಿಯ ಕ್ಯಾಬ್ ಚಾಲಕರೊಬ್ಬರು ಕಾರಿನೊಳಗೆ ಮೃತಪಟ್ಟಿದ್ದಾರೆ. ಟಿ ದಾಸರಹಳ್ಳಿ ನಿವಾಸಿ ಸುನಿತ ಹೆಚ್.ಬಿ. (38) ಹೀಗೆ ದಾರುಣವಾಗಿ ಮೃತಪಟ್ಟವರು. ಖಾಸಗಿ
ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಬಜೆಟ್ ಸಂವಿಧಾನಕ್ಕೆ ವಿರುದ್ಧ
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಅಲ್ಪಸಂಖ್ಯಾತರ ಸಭೆಯಲ್ಲಿ ಪ್ರತ್ಯೇಕ ಬಜೆಟ್ ಮಂಡಿಸಬೇಕೆಂಬ ಬೇಡಿಕೆ ಕೇಳಿ ಬಂದಿದೆ. ಇದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಬಜೆಟ್ನಲ್ಲಿ ವಿಶೇಷ ಅನುದಾನವನ್ನು ಮಾತ್ರ ಘೋಷಿಸಬಹುದು. ದಾವಣಗೆರೆ ಉಪ ಚುನಾವಣೆ ನಡೆದ ಮೇಲೆ ಮುಸ್ಲಿಮರು ತಮ್ಮ ಹಕ್ಕಿಗೆ ಹೋರಾಟ ಹಾದಿ ಹಿಡಿರುವುದು
ಕೋಟಿ ರೂ. ವರದಕ್ಷಿಣೆ, ಫಾರ್ಚುನರ್ ಕಾರು, ಕೋಟಿ ರೂ. ವೆಚ್ಚದಲ್ಲಿ ಮದುವೆ: 14 ತಿಂಗಳಲ್ಲಿ ಮಗಳು ಸುಸೈಡ್
ಒಂದು ಕೋಟಿ ರೂಪಾಯಿ ವರದಕ್ಷಿಣೆ, ಫಾರ್ಚುನರ್ ಕಾರು ಜೊತೆಗೆ ಕೋಟಿ ರೂಪಾಯಿ ವೆಚ್ಚದಲ್ಲಿ ಮದುವೆ, 14 ತಿಂಗಳಲ್ಲಿ ಮಗಳ ಆತ್ಮಹತ್ಯೆ ಇದು ಗ್ರೇಟರ್ ನೋಯ್ಡಾದ ಜಲ್ಪುರ ವಲಯದಲ್ಲಿ ನಡೆದ ದುರಂತ ಕಥೆ. ಮದುವೆಯಾದ 14 ತಿಂಗಳಿಗೆ ಬದುಕು ಭಾರವಾಗಿ 24 ವರ್ಷದ
ಕೇರಳದಲ್ಲೂ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ, ಆಶಾ ಕಾರ್ಯಕರ್ತೆಯರ ವೇತನ 12 ಸಾವಿರ ರೂ.ಗೆ ಏರಿಕೆ
ಕೇರಳ ಮುಖ್ಯಮಂತ್ರಿಯಾಗಿ ವಿಡಿ ಸತೀಶನ್ ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಮೊದಲ ಸಂಪುಟ ಸಭೆಯಲ್ಲೇ ಯುಡಿಎಫ್ ಸರ್ಕಾರವು ಎರಡು ಪ್ರಮುಖ ಚುನಾವಣಾ ಭರವಸೆಗಳನ್ನು ಜಾರಿಗೊಳಿಸಿದೆ. ಕೇರಳದ ಆರಿಗೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮತ್ತು ಆಶಾ ಕಾರ್ಯಕರ್ತರ ಗೌರವಧನ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ.
ದುಬಾರೆಯಲ್ಲಿ ಸಾಕಾನೆಗಳ ಕಾದಾಟಕ್ಕೆ ಪ್ರವಾಸಿ ಮಹಿಳೆ ಬಲಿ
ಕುಶಾಲನಗರದಲ್ಲಿರುವ ದುಬಾರೆ ಶಿಬಿರದಲ್ಲಿ ಸಾಕಾನೆಗಳ ಮಧ್ಯೆ ನಡೆದ ಕಾದಾಟಕ್ಕೆ ಪ್ರವಾಸಿ ಮಹಿಳೆ ಬಲಿಯಾಗಿರುವ ದಾರುಣ ಘಟನೆಯೊಂದು ನಡೆದಿದೆ. ಚೆನ್ನೈನ ಜಿನ್ಮು (33) ಮೃತಪಟ್ಟ ಮಹಿಳೆ. ಸೋಮವಾರ (ಇಂದು) ಬೆಳಗ್ಗೆ ಮಹಿಳೆ ಹಾಗೂ ಪತಿ ಜೋಯಲ್ ದುಬಾರೆ ಸಾಕಾನೆ ಶಿಬಿರಕ್ಕೆ ಬಂದಿದ್ದರು. ಸಾಕಾನೆಗಳೊಂದಿಗೆ
ಶಾಂತಿ ಒಪ್ಪಂದಕ್ಕೆ ಬರದಿದ್ದರೆ ಏನೂ ಉಳಿಯಲ್ಲ, ಯುರೇನಿಯಂ ನಮಗೆ ಕೊಡಿ: ಇರಾನ್ಗೆ ಟ್ರಂಪ್ ವಾರ್ನ್
ಇರಾನ್ ಶಾಂತಿ ಒಪ್ಪಂದಕ್ಕೆ ಬರದಿದ್ದರೆ ಏನೂ ಉಳಿಯುವುದಿಲ್ಲ, ನಿಮ್ಮಲ್ಲಿರುವ ಯುರೇನಿಯಂ ನಮಗೆ ಕೊಡಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾರ್ನ್ ಮಾಡಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿದ್ದು, ಸಂಘರ್ಷ ಮುಂದುವರಿಯುತ್ತಿರುವಂತೆ ಟ್ರಂಪ್ ಸಾಮಾಜಿಕ ಜಾಲತಾಣ ‘ಟ್ರೂತ್ ಸೋಶಿಯಲ್’ನಲ್ಲಿ
ಕೆಲಸ ಮಾಡದಿದ್ರೆ ಸಾರಿಗೆ ನೌಕರರಿಗೆ ವೇತನವೂ ಇಲ್ಲ: ಕೆಎಸ್ಸಾರ್ಟಿಸಿ
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಒಕ್ಕೂಟಗಳು ಸಿದ್ಧತೆ ನಡೆಸುತ್ತಿರುವಂತೆಯೇ ಕೆಎಸ್ಸಾರ್ಟಿಸಿ ಕೆಲಸವಿಲ್ಲದಿದ್ದರೆ ವೇತನವಿಲ್ಲ ಎಂಬ ನಿಯಮವನ್ನು ತಕ್ಷಣದಿಂದ ಜಾರಿಗೊಳಿಸಿ ಆದೇಶ ಹೊರಡಿಸುವ ಮೂಲಕ ನೌಕರರಿಗೆ ಬಿಸಿ ಮುಟ್ಟಿಸಿದೆ. ಸಾರಿಗೆ ನೌಕರರ ಸಂಘಟನೆಗಳು ವೇತನ ಪರಿಷ್ಕರಣೆ, ಸೇವಾ ಶರತ್ತುಗಳ ಸುಧಾರಣೆ ಸೇರಿದಂತೆ




