ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಅಸಭ್ಯ ಕಾಮೆಂಟ್: 5 ಯೂಟ್ಯೂಬ್ ಚಾನೆಲ್ ವಿರುದ್ಧ ಎಫ್‌ಐಆರ್
ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಅಸಭ್ಯವಾಗಿ ಕಾಮೆಂಟ್ ಮಾಡಿದ್ದ ಐದು ಯೂಟ್ಯೂಬ್ ಚಾನೆಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಿಜಯಲಕ್ಷ್ಮಿ ಬಗ್ಗೆ ಯೂಟ್ಯೂಬ್ ಚಾನೆಲ್‌ವೊಂದು ಕಾರ್ಯಕ್ರಮ ಮಾಡಿತ್ತು. ಈ ಕಾರ್ಯಕ್ರಮದ ವಿಡಿಯೋಗೆ ಕೆಲವರು ವಿಜಯಲಕ್ಷ್ಮಿ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದರು. ಈ ಸಂಬಂಧ ವ್ಯಕ್ತಿಯೊಬ್ಬರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಮಹಿಳಾ ಆಯೋಗವು ಪೊಲೀಸ್ ಕಮೀಷನರ್‌ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು. ದೂರು ಪರಿಶೀಲನೆ ನಡೆಸಿದ
ಚಿಕ್ಕಬಳ್ಳಾಪುರದಲ್ಲಿ ಆಫ್ರಿಕನ್ ಹಂದಿ ಜ್ವರ ದೃಢ: ಹಂದಿ ಸಾಗಾಟ ನಿಷೇಧ
ಚಿಕ್ಕಬಳ್ಳಾಪುರ: ಆಫ್ರಿಕನ್ ಹಂದಿ ಜ್ವರ ಕರ್ನಾಟಕದಲ್ಲಿ ಮೊದಲ ಬಾರಿ ಕಾಣಿಸಿಕೊಂಡಿದ್ದು, ಚಿಕ್ಕಬಳ್ಳಾಪುರ ಚಿಂತಾಮಣಿ ತಾಲೂಕಿನ ಹೆಬ್ಬರಿ ಗ್ರಾಮದಲ್ಲಿರುವ ಫಾರ್ಮ್ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದೆ. ಹಂದಿ ಸಾಗಾಟ ನಿಷೇಧಿಸಲಾಗಿದೆ. ಆಗಸ್ಟ್ 19ರಿಂದ 10 ದಿನಗಳ ಅಂತರದಲ್ಲಿ ಚಿಕ್ಕಬಳ್ಳಾಪುರದಲ್ಲಿ ಆಫ್ರಿಕನ್ ಹಂದಿ
ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ರಾಜೀನಾಮೆ
ಮುಂಬೈ: ಭಾರತ ತಂಡದ ವಿಶ್ವಕಪ್ ಹೀರೋ ಆಲ್ ರೌಂಡರ್ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜೀವ್ ಶುಕ್ಲ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವದ ಸಮಸ್ಯೆ ಹಿನ್ನೆಲೆಯಲ್ಲಿ 70 ವರ್ಷದ ರೋಜರ್
ಅಭಿಮಾನ್ ಸ್ಟುಡಿಯೋ ಜಾಗ ಮುಟ್ಟುಗೋಲಿಗೆ ಡಿಸಿಗೆ ಅರಣ್ಯ ಇಲಾಖೆ ಪತ್ರ
ಇತ್ತೀಚೆಗೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ಕನ್ನಡದ ಮೇರುನಟ ಸಾಹಸಸಿಂಹ ಡಾ. ವಿಷ್ಣುವರ್ಧನ್ ಸಮಾಧಿ ಧ್ವಂಸ ಮಾಡಲಾಗಿತ್ತು. ಈ ಕಾರಣಕ್ಕೆ ವಿವಾದದ ಕೇಂದ್ರಬಿಂದುವಾಗಿದ್ದ ಅಭಿಮಾನ್ ಸ್ಟುಡಿಯೊ ಇರುವ ಜಾಗವನ್ನು ಸರ್ಕಾರ ವಶಪಡಿಸಿಕೊಳ್ಳುವಂತೆ ಅರಣ್ಯ ಇಲಾಖೆಯು ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ಪತ್ರ ಬರೆದಿದೆ. ಬೆಂಗಳೂರು ದಕ್ಷಿಣ
ನಾಡಹಬ್ಬ ದಸರಾ ಸಂಭ್ರಮ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಆರ್. ಅಶೋಕ ಐದು ಪ್ರಶ್ನೆಗಳು
ನಾಡಹಬ್ಬ ದಸರಾ ಸಂಭ್ರಮಕ್ಕೆ ವಿವಾದದ ಮಸಿ ಬಳಿದಿರುವ ಸಿಎಂ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ನನ್ನ 5 ಪ್ರಶ್ನೆಗಳನ್ನು ಕೇಳುತ್ತಿರುವುದಾಗಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದು, ಆ ಪ್ರಶ್ನೆಗಳು ಹೀಗಿವೆ, *ಇಷ್ಟಕ್ಕೂ ಬಾನು ಮುಷ್ತಾಕ್ ಅವರ ಕೈಯಲ್ಲಿ
ಸಹ ಚಾಲಕನಿಗೆ ಬಸ್ ಕೊಟ್ಟ ಚಾಲಕ ಹೃದಯಾಘಾತಕ್ಕೆ ಬಲಿ
ಇಂದೋರ್‌ನಿಂದ ರಾಜಸ್ಥಾನ ಕಡೆಗೆ ಬಸ್ ಚಲಾಯಿಸುತ್ತಿದ್ದ ಚಾಲಕರೊಬ್ಬರು ಸಹಚಾಲಕನಿಗೆ ಬಸ್ ಚಾಲನೆ ಮಾಡುವುದಕ್ಕೆ ಕೊಟ್ಟ ಸ್ವಲ್ಪ ಹೊತ್ತಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಾಲಕ ಸತೀಶ್ ರಾವ್ ಅವರಿಗೆ ರಾಜಸ್ಥಾನದ ಪಾಲಿ ತಲುಪುವಾಗ ಅನಾರೋಗ್ಯ ಕಾಡುತ್ತಿದೆ ಎಂದು ಅನಿಸಲಾರಂಭಿಸಿದೆ. ತಕ್ಷಣ ಬಸ್ ಅನ್ನು ಓಡಿಸುವಂತೆ
ಸುಜಾತ ಭಟ್‌ಗೆ ಎಸ್‌ಐಟಿ ಭದ್ರತೆ ಒದಗಿಸಬೇಕು, ಮಹಿಳೆಯರ ಘನತೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ: ಮಹಿಳಾ ಆಯೋಗ
ಮಹಿಳೆಯರ ಘನತೆಗೆ ಯಾರೇ ಧಕ್ಕೆ ತಂದರೂ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಎಚ್ಚರಿಕೆ ನೀಡಿದ್ದಾರೆ. ಅನನ್ಯಾ ಭಟ್ ಅವರ ತಾಯಿ ‘ಪದೇ ಪದೆ ಪ್ರಶ್ನೆ ಮಾಡಿದರೆ ನಾನು ನೇಣು
ಭರ್ತಿಯಾಗುತ್ತಿವೆ ಕಬಿನಿ, ತಾರಕ ಜಲಾಶಯ: ನದಿಪಾತ್ರದ ಜನರಿಗೆ ಸ್ಥಳಾಂತರ ಸೂಚನೆ
ಮೈಸೂರಿನಲ್ಲಿ ಕಬಿನಿ ಹಾಗೂ ತಾರಕ ಜಲಾಶಯಗಳು ಭರ್ತಿಯಾಗಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಕೇರಳದ ವಯನಾಡುವಿನಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ, ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಹೊರ ಹರಿವು ಹೆಚ್ಚಾಗುತ್ತಿದೆ. ಹೀಗಾಗಿ ನದಿ ಪಾತ್ರದ
ರುದ್ರಪ್ರಯಾಗದಲ್ಲಿ ಭೀಕರ ಮಳೆ: ಹಲವರು ನಾಪತ್ತೆ, ಅವಶೇಷಗಳಡಿ ಸಿಲುಕಿರುವ ಭೀತಿ
ಉತ್ತರಾಖಂಡದ ರುದ್ರಪ್ರಯಾಗ ಮತ್ತು ಚಮೋಲಿ ಜಿಲ್ಲೆಗಳ ಹಲವೆಡೆ ಮೇಘಸ್ಫೋಟ ಸಂಭವಿಸಿ, ಹಲವಾರು ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಲ್ಲದೆ ಎರಡರಿಂದ ಮೂರು ಕುಟುಂಬ ನಾಪತ್ತೆಯಾಗಿವೆ. ಅವಶೇಷಗಳಡಿ ಸಿಲುಕಿ ದಂಪತಿ ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿವೆ, ರಸ್ತೆಗಳು ಬಂದ್ ಆಗಿವೆ. ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿದೆ. 200
ಡಾ. ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ಗುರು ಕೋರಣ್ಯ
ಡಾ. ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ನೇತೃತ್ವದಲ್ಲಿ ದೇಗುಲಮಠದಿಂದ ಕನಕಪುರ ನಗರದಲ್ಲಿ ಎರಡು ದಿನ ನಡೆದ ಗುರು ಕೋರಣ್ಯದಲ್ಲಿ ಶ್ರೀ ದೇಗುಲ ಮಠದ ಕಿರಿಯ ಶ್ರೀ ಚನ್ನಬಸವ ಮಹಾಸ್ವಾಮಿಗಳು ಹಾಗೂ ತೋಟಹಳ್ಳಿ ಮಠದ ಶ್ರೀ ಬಸವಪ್ರಭು ಮಹಾಸ್ವಾಮಿಗಳು ಮತ್ತು ಮರಳವಾಡಿ ಮಠದ




