Menu

ವಿಧಾನಸೌಧ ಪ್ರವೇಶಕ್ಕೆ 150 ರೂ. ದುಬಾರಿಯೆಂದು ಸ್ಪೀಕರ್‌ ಖಾದರ್‌ ಆಕ್ಷೇಪ

ವಿಧಾನಸೌಧ ಪ್ರವೇಶಕ್ಕೆ ಸಾರ್ವಜನಿಕರಿಗೆ ಶುಲ್ಕ ನಿಗದಿ ಮಾಡಲು ಸರ್ಕಾರ ನಿರ್ಧರಿಸಿದ್ದಂತೆ ಪ್ರವಾಸೋದ್ಯಮ ಇಲಾಖೆ ವಿಧಾನಸೌಧಕ್ಕೆ ಗೈಡೆಡ್ ಟೂರ್​ಗೆ ಪ್ರತಿ ವ್ಯಕ್ತಿಗೆ ತಲಾ 150 ರೂ. ನಿಗದಿ ಪಡಿಸುವ ಪ್ರಸ್ತಾವನೆಯನ್ನು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದೆ. ಇಷ್ಟು ದುಬಾರಿ ಪ್ರವೇಶ ಶುಲ್ಕಕ್ಕೆ ಸ್ಪೀಕರ್ ಯು.ಟಿ. ಖಾದರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರವಾಸೋದ್ಯಮ ಇಲಾಖೆ ಗೈಡೆಡ್ ಟೂರ್ನಡಿ ಪ್ರವಾಸಿಗರಿಗೆ ತಲಾ 150ರೂ. ಪ್ರವೇಶ ಶುಲ್ಕ ವಿಧಿಸುವ ಪ್ರಸ್ತಾಪವನ್ನು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿ​ಗೆ ಸಲ್ಲಿಸಿದೆ.

ಉಕ್ಕು ಆಮದು ಮೇಲೆ ಶೇ.12 ಸುರಕ್ಷತಾ ಸುಂಕ ವಿಧಿಸಿದ ಕೇಂದ್ರ 

ದೇಶೀಯ ಉಕ್ಕು ಉದ್ಯಮದ ಹಿತರಕ್ಷಣೆ ನಿಟ್ಟಿನಲ್ಲಿ ಕೇಂದ್ರದ ನರೇಂದ್ರ ಮೋದಿ ಅವರ ಸರಕಾರ ರಕ್ಷಣಾತ್ಮಕ ಕ್ರಮ ಕೈಗೊಂಡಿದ್ದು ,  ಉಕ್ಕು ಆಮದಿನ ಮೇಲೆ ಕೇಂದ್ರವು ಶೇ.12ರಷ್ಟು ಸುರಕ್ಷತಾ ಸುಂಕವನ್ನು ವಿಧಿಸಿದೆ. ಈ ನಿಟ್ಟಿನಲ್ಲಿ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ

ರಾಷ್ಟ್ರಪತಿ ಹಾಗೂ ಸುಪ್ರೀಂಕೋರ್ಟ್‌ಗಳಲ್ಲಿ ಯಾರು ಮೇಲು

ಶಾಸಕಾಂಗ ಮತ್ತು ಕಾರ್ಯಾಂಗವು ತನ್ನ ವಿಧಿಬದ್ಧ ಕರ್ತವ್ಯವೆಸಗಲು ವಿಫಲವಾದಾಗ, ಅನ್ಯಾಯಕ್ಕೊಳಗಾದವನ ಪರವಾಗಿ ಕಂಪ್ಲೀಟ್ ಜಸ್ಟೀಸ್ ಅಡಿ ಸುಪ್ರೀಂಕೋರ್ಟ್, ಆರ್ಟಿಕಲ್ ೧೪೨ ಅಸ್ತ್ರವನ್ನು ಬಳಸುವುದರಲ್ಲಿ ತಪ್ಪೇನಿದೆ? ಕಳೆದ ವಾರದಲ್ಲಿ ದೇಶದ ಸರ್ವೋನ್ನತ ನ್ಯಾಯಪೀಠವಾದ ಸುಪ್ರೀಂಕೋರ್ಟ್ ನೀಡಿದ ಎರಡು ಪ್ರಮುಖ ಆದೇಶಗಳು ಎಲ್ಲರ ಗಮನ

ರಸ್ತೆ ಅಪಘಾತದಲ್ಲಿ ಮೃತರ ವಯಸ್ಕ ಮಕ್ಕಳಿಗೆ ಪರಿಹಾರ ನಿರಾಕರಣೆ ಸಲ್ಲದು: ಹೈಕೋರ್ಟ್‌

ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಪತ್ನಿ ಮಾತ್ರವಲ್ಲದೆ ವಯಸ್ಕ ಮಕ್ಕಳು ಕೂಡ ಪರಿಹಾರಕ್ಕೆ ಅರ್ಹರಾಗಿರುತ್ತಾರೆ ಎಂದು ಹೈಕೋರ್ಟ್‌ ಆದೇಶ ಪ್ರಕಟಿಸಿದೆ. ವಯಸ್ಕರೆಂಬ ಕಾರಣ ನೀಡಿ ಮೃತರ ಮಕ್ಕಳಿಗೆ ಪರಿಹಾರ ನೀಡುವುದಕ್ಕೆ ನಿರಾಕರಿಸಿದ್ದ ನ್ಯಾಯಾಧಿಕರಣದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ

ಕೆಕೆಆರ್ ಗೆ ತವರಿನಲ್ಲಿಯೇ ಸೋಲುಣಿಸಿದ ಗುಜರಾತ್ ಟೈಟಾನ್ಸ್

ಕೋಲ್ಕತಾ: ಆರಂಭಿಕರ ಸಿಡಿಲಬ್ಬರದ ಅರ್ಧಶತಕ ಹಾಗೂ ಸಾಯಿ ಸುದರ್ಶನ್ ಮಾರಕ ದಾಳಿ ಸಹಾಯದಿಂದ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಅದರದ್ದೇ ನೆಲದಲ್ಲಿ 39 ರನ್ ಗಳಿಂದ ಮಣಿಸಿದೆ. ಈಡನ್ ಗಾರ್ಡನ್ ಮೈದಾನದಲ್ಲಿ ಸೋಮವಾರ

ಪಿಂಚಣಿದಾರರ ಲೈಫ್‌ ಸರ್ಟಿಫಿಕೇಟ್‌ಗೆ ಕೆಪಿಟಿಸಿಎಲ್‌ನಿಂದ ತಂತ್ರಾಂಶ

ಬೆಂಗಳೂರು: ಪಿಂಚಣಿ ಪಡೆಯಲು ಅವಶ್ಯವಿರುವ ‘ಜೀವನ ಪ್ರಮಾಣ ಪತ್ರ’ ಪರಿಶೀಲನೆ ಮತ್ತು ಪ್ರಮಾಣೀಕರಿಸುವ ತಂತ್ರಾಂಶವನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಬಿಡುಗಡೆ ಮಾಡಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ ನಿಗಮದ

‘ಜನಿವಾರ’ ಪ್ರಕರಣಕ್ಕೆ ಕೇಂದ್ರದ ಪರೀಕ್ಷಾ ಪ್ರಾಧಿಕಾರಗಳ ನೀತಿ ಕಾರಣ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಜನಿವಾರ ಪ್ರಕರಣದಂತಹ ಘಟನೆ ನಡೆಯಲು ಕೇಂದ್ರ ಸರಕಾರದ ಪರೀಕ್ಷಾ ಪ್ರಾಧಿಕಾರಗಳ ನೀತಿಗಳು ಕಾರಣ. ಹೀಗಾಗಿ, ಇಂತಹ ನೀತಿಗಳ ಸಡಿಲಿಕೆಗೆ ಕೇಂದ್ರಕ್ಕೆ ಮನವಿ ಮಾಡಿಕೊಳ್ಳಬೇಕು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸಲಹೆ ನೀಡಿದ್ದಾರೆ. ಉನ್ನತ ಶಿಕ್ಷಣ ಸಚಿವರಿಗೆ

ಶಾಸಕರ ಅಮಾನತು ಕೂಡಲೇ ರದ್ದುಗೊಳಿಸಲು ಬಿಜೆಪಿ ನಿಯೋಗ ಒತ್ತಾಯ

ಬೆಂಗಳೂರು: ರಾಜ್ಯ ಬಿಜೆಪಿ ನಿಯೋಗವು ವಿಧಾನಸೌಧದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ 18 ಬಿಜೆಪಿ ಶಾಸಕರ ಅಮಾನತು ಕೂಡಲೇ ರದ್ದುಗೊಳಿಸುವಂತೆ ಒತ್ತಾಯಿಸಿ ಸೋಮವಾರ ಮನವಿ ಸಲ್ಲಿಸಿದೆ. ಕಳೆದ ಮಾರ್ಚ್ 21 ರಂದು ಹನಿಟ್ರ್ಯಾಪ್ ಪ್ರಸ್ತಾಪದ ವೇಳೆ, ಸ್ಪೀಕರ್ ಕುರ್ಚಿಗೆ

ರಾಜ್ಯ ಹೈಕೋರ್ಟ್ ನ ನಾಲ್ವರು ಜಡ್ಜ್ ಗಳ ವರ್ಗಾವಣೆ

ಬೆಂಗಳೂರು: ಸುಪ್ರೀಂ ಕೋರ್ಟ್‌ ಕೊಲಿಜಿಯಂ ನಿರ್ದೇಶನದಂತೆ ಕರ್ನಾಟಕ ಹೈಕೋರ್ಟ್‌ ನಾಲ್ವರು ನ್ಯಾಯಾಧೀಶರು ಸೇರಿದಂತೆ ವಿವಿಧ ರಾಜ್ಯದ ಹೈಕೋರ್ಟ್‌ಗಳ ಹಲವು ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ಹಾಗೆಯೇ ಇತರ ರಾಜ್ಯಗಳಿಂದ ಇಬ್ಬರು ನ್ಯಾಯಾಧೀಶರನ್ನು ಕರ್ನಾಟಕಕ್ಕೆ ವರ್ಗಾಯಿಸಲಾಗಿದೆ. ಏಪ್ರಿಲ್ 15 ಹಾಗೂ 19ರಂದು ನಡೆಸಲಾದ ಸುಪ್ರೀಂ

ಬಿಎಸ್ ವೈ ವಿರುದ್ಧದ ಡಿನೋಟೀಫಿಕೇಷನ್ ಪ್ರಕರಣ ಸುಪ್ರೀಂ ವಿಸ್ತ್ರತ ಪೀಠಕ್ಕೆ ವರ್ಗಾವಣೆ

ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಡಿನೋಟೀಫಿಕೇಷನ್ ಪ್ರಕರಣದ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ವಿಸ್ತ್ರತ ಪೀಠಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ನ್ಯಾ.ಜೆ.ಬಿ. ಪರ್ದಿವಾಲಾ, ಮನೋಜ್ ಮಿಶ್ರಾ ಪೀಠ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ಬಿಎಸ್‌ವೈ ವಿರುದ್ಧದ ಡಿನೋಟಿಫಿಕೇಷನ್