Menu

ಬಿಡದಿ ತ್ಯಾಜ್ಯ. ವಿದ್ಯುತ್ ಸ್ಥಾವರದಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ: ಕೆಪಿಸಿಎಲ್

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಬಿಡದಿಯಲ್ಲಿ ಸ್ಥಾಪಿಸಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕವು ಮಾಲಿನ್ಯ ನಿಯಂತ್ರಣ ಮಂಡಳಿಯ ಎಲ್ಲಾ ನಿಯಮಗಳನ್ನು ಪಾಲಿಸುತ್ತಿದ್ದು, ಘಟಕದಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ. ಪರಿಸರ ಮಾಲಿನ್ಯಕಾರಕಗಳನ್ನು ಮೇಲ್ವಿಚಾರಣೆ ಮಾಡುವಲ್ಲಿ ಸ್ಥಾವರ ವಿಫಲವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಕ್ಕೆ ಸಲ್ಲಿಸಿದೆ ಎನ್ನಲಾದ ವರದಿಗೆ ಸಂಬಂಧಿಸಿದಂತೆ ‘ದಿ ಫ್ರೈಡೇಸ್‌ಫಾರ್‌ಫ್ಯೂಚರ್-ಕರ್ನಾಟಕ’ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಗೆ

ಸರ್ಕಾರಿ, ಖಾಸಗಿ ಕಟ್ಟಡಗಳ ಬಳಿ ಬೀದಿನಾಯಿಗೆ ಕಡಿವಾಣ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಬಸ್ ನಿಲ್ದಾಣ,  ರೈಲ್ವೆ ನಿಲ್ದಾಣ, ಕ್ರೀಡಾ ಸಂಕೀರ್ಣ ಮುಂತಾದ ಕಡೆಗಳಲ್ಲಿರುವ ಬೀದಿನಾಯಿಗಳನ್ನು ಪುನರ್ ವಸತಿ ಕೇಂದ್ರಕ್ಕೆ ರವಾನಿಸಿ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ವಿಕ್ರಂ ನಾಥ್, ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಮತ್ತು ನ್ಯಾಯಮೂರ್ತಿ

ಅಹಮದಾಬಾದ್‌ ವಿಮಾನ ದುರಂತ: ಯಾರನ್ನೂ ಹೊಣೆ ಮಾಡದೆ ಭವಿಷ್ಯದಲ್ಲಿ ಇಂಥ ದುರಂತ ತಡೆಗೆ ಕ್ರಮ ವಹಿಸಿ ಎಂದ ಸುಪ್ರೀಂ

ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಪೈಲಟ್ ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಕಾರಣವಲ್ಲ, ಇದೊಂದು ಅಪಘಾತವಾಗಿದ್ದು, ಪೈಲಟ್ ಅನ್ನು ಹೊಣೆ ಮಾಡಬಾರದು, ಇಲ್ಲಿ ಯಾರನ್ನೂ ಹೊಣೆ ಮಾಡದೆ ಭವಿಷ್ಯದಲ್ಲಿ ಇಂತಹ ಅಪಘಾತಗಳನ್ನು ತಡೆಗಟ್ಟಲು ಕ್ರಮವಹಿಸಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಈ

ಸ್ಥಳೀಯ ಭಾಷೆ ಗೊತ್ತಿರುವವರನ್ನೇ ಬ್ಯಾಂಕ್‌ಗಳು ನೇಮಕ ಮಾಡಿಕೊಳ್ಳಬೇಕು: ಸಚಿವೆ ನಿರ್ಮಲಾ

ಬ್ಯಾಂಕ್‌ಗಳು ಸ್ಥಳೀಯ ಭಾಷೆ ಬಲ್ಲವರನ್ನೇ ನೇಮಕ ಮಾಡಿಕೊಳ್ಳಬೇಕು ಮತ್ತು ಸ್ಥಳೀಯ ಭಾಷಾ ಜ್ಞಾನದ ಆಧಾರದಲ್ಲೇ ಅವರ ವೃತ್ತಿಪರತೆ ಅಳೆಯಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಸ್ಥಳೀಯ ಭಾಷೆಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ನೇಮಕಾತಿ ಹಾಗೂ ಮಾನವ ಸಂಪನ್ಮೂಲ ನೀತಿಗಳಲ್ಲಿ

ಝೊಮ್ಯಾಟೊ, ಬ್ಲಿಂಕ್ ಇಟ್ ರಾಷ್ಟ್ರವ್ಯಾಪಿ ಅಭಿಯಾನ ಆರಂಭ

ಬೆಂಗಳೂರು: ಎಟರ್ನಲ್ ಸಂಸ್ಥೆಗಳಾದ – ಭಾರತದ ಆಹಾರ ಆರ್ಡರಿಂಗ್ ಮತ್ತು ಡೆಲಿವರಿ ಪ್ಲಾಟ್ಫಾಮ್ ಝೊಮ್ಯಾಟೊ ಮತ್ತು ತ್ವರಿತ ವಾಣಿಜ್ಯ ಪ್ಲಾಟ್ಫಾರ್ಮ್ -ಬ್ಲಿಂಕ್ ಇಟ್, ಹಕ್ದರ್ಶಕ್ ಜೊತೆಗಿನ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಮೊದಲ ಸಲ ಸರ್ಕಾರೀ ಯೋಜನೆ ಸೌಲಭ್ಯ ಶಿಬಿರದ ಸರಣಿಯನ್ನು ಆಯೋಜಿಸಿದವು. ಡೆಲಿವರಿ

ನಾವು ರೈತರ ಪರ, ರೈತರ ಬೇಡಿಕೆ ಈಡೇರಿಕೆಯಲ್ಲಿ ಕೇಂದ್ರದ ಜವಾಬ್ದಾರಿ ಪ್ರಮುಖ, ಕಾರ್ಖಾನೆಗಳ ಜವಾಬ್ದಾರಿಯೂ ಇವೆ: ಸಿಎಂ 

ನಾವು ರೈತರ ಪರವಾಗಿ ನಿಲ್ಲುತ್ತೇವೆ. ರೈತರ ಸಮಸ್ಯೆ ಬಗೆಹರಿಸಲು ಸಕ್ಕರೆ ಕಾರ್ಖಾನೆಗಳ ಮಾಲೀಕರೂ ಸಿದ್ದರಿರಬೇಕು. ಕಾರ್ಖಾನೆ ಮಾಲೀಕರ ಸಮಸ್ಯೆಗಳಲ್ಲಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆಯೂ ಪರಿಶೀಲಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆ ಕುರಿತಾಗಿ  ವಿಧಾನಸೌಧ

ತುಮಕೂರು ವಿವಿಯ ‘ಜ್ಞಾನಸಿರಿʼ ಕ್ಯಾಂಪಸ್‌ ಲೋಕಾರ್ಪಣೆಗೊಳಿಸಿದ ರಾಜ್ಯಪಾಲ ಗೆಹ್ಲೋಟ್‌

ರಾಜ್ಯಪಾಲ  ಥಾವರ್ ಚಂದ್ ಗೆಹ್ಲೋಟ್ ಅವರು  ತುಮಕೂರು ಜಿಲ್ಲೆಯ ಬೀದರಕಟ್ಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ತುಮಕೂರು ವಿಶ್ವವಿದ್ಯಾಲಯದ ‘ಜ್ಞಾನಸಿರಿ ಕ್ಯಾಂಪಸ್ ಹಾಗೂ ವಿವಿಧ ಕಟ್ಟಡಗಳನ್ನು’ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು “ಜ್ಞಾನಸಿರಿ” ಎಂಬ ಹೆಸರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಮಾಜವನ್ನು

ನಾಗರಹೊಳೆ, ಬಂಡೀಪುರ ಸಫಾರಿ, ಚಾರಣ ಇಂದಿನಿಂದಲೇ ಬಂದ್: ಸಚಿವ ಈಶ್ವರ್ ಖಂಡ್ರೆ ಸೂಚನೆ

ಬೀದರ್: ನಾಗರಹೊಳೆ ಮತ್ತು ಬಂಡೀಪುರ ಸಫಾರಿಯನ್ನು ಹಾಗೂ ಮಾನವ-ವನ್ಯಜೀವಿ ಸಂಘರ್ಷ ಇರುವ ಪ್ರದೇಶದಲ್ಲಿ ಚಾರಣವನ್ನು ಇಂದಿನಿಂದಲೇ ಬಂದ್ ಮಾಡಿ, ಸಿಬ್ಬಂದಿಯನ್ನು ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ. ಪ್ರಧಾನ ಮುಖ್ಯ

ರನ್ಯಾ ರಾವ್ ವಿರುದ್ಧ ಡಿಆರ್‌ಐ ದೋಷಾರೋಪ ಪಟ್ಟಿ ಸಲ್ಲಿಕೆಗೆ ಸಿದ್ಧತೆ

ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ತನಿಖೆ ನಡೆಸುತ್ತಿದ್ದ ಡಿಆರ್‌ಐ ದೋಷಾರೋಪ ಪಟ್ಟಿ ಸಲ್ಲಿಕೆಗೆ ತಯಾರಿ ನಡೆಸಿದೆ. 123 ಕೋಟಿ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿರುವ ಪ್ರಕರಣ ಇದಾಗಿದೆ. ಪ್ರಕರಣದ ಐದು ಆರೋಪಿಗಳಿಗೂ ಶೋಕಾಸ್ ನೋಟಿಸ್ ನೀಡಿದ್ದ ಡಿಆರ್‌ಐ ರನ್ಯಾ

ಆಸ್ತಿ ವಿವರ ಸಲ್ಲಿಸದ 5 ಸಚಿವರು 12 ಶಾಸಕರ ಪಟ್ಟಿ ಬಿಡುಗಡೆ

ಬೆಂಗಳೂರು:ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 22(1) ಮತ್ತು (2)ರ ಪ್ರಕಾರ ವಿಧಾನಸಭೆ, ವಿಧಾನಪರಿಷತ್ ಸದಸ್ಯರು ಪ್ರತಿ ವರ್ಷ ಜೂನ್ 30ರೊಳಗೆ ತಮ್ಮ ಹಾಗೂ ಕುಟುಂಬದ ಸದಸ್ಯರ ಆಸ್ತಿ ವಿವರವನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಬೇಕಾಗಿದೆ. ಆಸ್ತಿ ವಿವರವನ್ನು ನಿಗದಿತ ನಮೂನೆಯಲ್ಲಿ ಇದುವರೆಗೂ ರಾಜ್ಯದ