Tuesday, September 29, 2026
Menu

ಚಿಕ್ಕಬಳ್ಳಾಪುರ ಎಸ್‌ಎಂಎಸ್‌ಐಎಂಎಸ್‌ಆರ್‌ನಲ್ಲಿ ನಾಲ್ಕು ಸೂಪರ್ ಸ್ಪೆಷಾಲಿಟಿ ವಿಭಾಗ ಉದ್ಘಾಟಿಸಿದ ಸದ್ಗುರು ಶ್ರೀ ಮಧುಸೂದನ ಸಾಯಿ

ತಮ್ಮ 47ನೇ ಜನ್ಮದಿನದ ಅಂಗವಾಗಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು  ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿರುವ   ‘ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ’ದಲ್ಲಿ (ಎಸ್‌ಎಂಎಸ್‌ಐಎಂಎಸ್‌ಆರ್) ನಾಲ್ಕು ನೂತನ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ವಿಭಾಗಗಳನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ‘ಮೈ ಹ್ಯಾಪಿ ಹೆಲ್ತ್ ಮೊಬೈಲ್ ಆ್ಯಪ್‌ ಲೋಕಾರ್ಪಣೆ ಮಾಡಲಾಯಿತು. ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್‌ನ ನೂತನ ವೆಬ್‌ಸೈಟ್,

ಭಾರತದಲ್ಲಿ ಡೆಂಗ್ಯೂ ಲಸಿಕೆಗೆ ಅನುಮೋದನೆ

ದೇಶದಲ್ಲಿ ಡೆಂಗ್ಯೂ ಜ್ವರದ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.  ಜಪಾನಿನ ಪ್ರಖ್ಯಾತ ಔಷಧ ತಯಾರಿಕಾ ಕಂಪನಿ ಟಕೆಡಾ ಅಭಿವೃದ್ಧಿಪಡಿಸಿರುವ ಕ್ಯೂಡೆಂಗಾ (QDENGA) ಲಸಿಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅಧಿಕೃತವಾಗಿ ಅನುಮೋದನೆ ನೀಡಿದೆ. ಇದು ಭಾರತದಲ್ಲಿ

ಕೊಡಚಾದ್ರಿಗೆ ಹೋಗಿದ್ದ ಬೆಂಗಳೂರಿನ ಯುವಕ ಹೃದಯಾಘಾತಕ್ಕೆ ಬಲಿ

ಕೊಡಚಾದ್ರಿ ಪ್ರವಾಸಕ್ಕೆಂದು ಹೋಗಿದ್ದ  ಯಲಹಂಕದ ಶ್ರೀಕಾಂತ್ ಎಂಬ 28 ವರ್ಷದ ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೊಡಚಾದ್ರಿ ಶಿಖರ ವೀಕ್ಷಿಸಲೆಂದು ಸ್ನೇಹಿತರೊಂದಿಗೆ ಬಂದಿದ್ದ ಶ್ರೀಕಾಂತ್​ ಶುಕ್ರವಾರ ರಾತ್ರಿ ಸಂಪೆಕಟ್ಟೆ ಪ್ರದೇಶದಲ್ಲಿ ಕಟ್ಟಿನಹೊಳೆ ಸಮೀಪ ಸ್ನೇಹಿತರ ಮನೆಯಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಸ್ನೇಹಿತರ ಮನೆಯಲ್ಲಿ ರಾತ್ರಿ

ಶಾಲೆಯಲ್ಲಿ ಕುಸಿದು ಐದನೇ ತರಗತಿ ವಿದ್ಯಾರ್ಥಿ ಸಾವು

ಬೆಂಗಳೂರು ಬನ್ನೇರುಘಟ್ಟ ರಸ್ತೆಯ ವಿವರ್ಸ್ ಕಾಲೋನಿಯಲ್ಲಿರುವ ನ್ಯೂ ಬ್ಲಾಸಮ್ ಶಾಲೆಯಲ್ಲಿ 12 ವರ್ಷದ ಬಾಲಕನೊಬ್ಬ ತರಗತಿ ಕೊಠಡಿಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಅರ್ಹಾನ್ ಪಾಷಾ (12) ಮೃತಪಟ್ಟ ವಿದ್ಯಾರ್ಥಿ. ನ್ಯೂ ಬ್ಲಾಸಮ್ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ. ತರಗತಿಯಲ್ಲಿದ್ದ

ರಾಜ್ಯದಲ್ಲೂ ಕೋವಿಡ್‌ ಪಾಸಿಟಿವ್‌ ಹೆಚ್ಚಳ

ಆಂಧ್ರಪ್ರದೇಶದ ಬಳಿಕ ಕರ್ನಾಟಕದಲ್ಲೂ ಕೋವಿಡ್‌ ಪಾಸಿಟಿವ್‌ ಪ್ರಕರಣಗಳಲ್ಲಿ ಏರಿಕೆಯಾಗಿದೆ, ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯದ ಪರಿಸ್ಥಿತಿ ಸದ್ಯಕ್ಕೆ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಕರ್ನಾಟಕದಲ್ಲಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಹೆಚ್ಚಿನವು ಗಂಭೀರ ಸ್ವರೂಪ ಹೊಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರದಲ್ಲಿ COVID ಅಲರ್ಟ್‌: ಇಬ್ಬರು ಸೋಂಕಿಗೆ ಬಲಿ, ಎಂಟು ಸಕ್ರಿಯ ಪ್ರಕರಣ ಪತ್ತೆ

ಆಂಧ್ರಪ್ರದೇಶದಲ್ಲಿ ಮತ್ತೆ ಕೋವಿಡ್ ವಕ್ಕರಿಸಿಕೊಂಡಿದ್ದು, ವೈಎಸ್ಆರ್ ಕಡಪ ಜಿಲ್ಲೆಯಲ್ಲಿ ಇತ್ತೀಚೆಗೆ ಎಂಟು ಸಕ್ರಿಯ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಿದೆ. ರಾಜಂಪೇಟೆ ಮೂಲದ 52 ವರ್ಷದ ವ್ಯಕ್ತಿಯೊಬ್ಬರಿಗೆ ಜ್ವರ ಮತ್ತು

ಡಿಜಿಟಲ್ ಯುಗದಲ್ಲಿ ಯಾಕೆ ಹೆಚ್ಚುತ್ತಿದೆ ಬಂಜೆತನ

ಇಂದಿನ ಡಿಜಿಟಲ್ ಯುಗದಲ್ಲಿ ಸಾಫ್ಟ್‌ ವೇರ್ ಹಾಗೂ ಮಾಹಿತಿ ತಂತ್ರಜ್ಞಾನ (ಐಟಿ) ವಲಯದ ಉದ್ಯೋಗಿಗಳನ್ನು  ಗಂಭೀರ ಆರೋಗ್ಯ ಸಮಸ್ಯೆ ಕಾಡತೊಡಗಿದೆ. ಕಂಪ್ಯೂಟರ್, ಲ್ಯಾಪ್‌ ಟಾಪ್ ಹಾಗೂ ಸ್ಮಾರ್ಟ್‌ ಫೋನ್‌ ಗಳ ಅತಿಬಳಕೆ ಐಟಿ ಉದ್ಯೋಗಿಗಳಲ್ಲಿ ಸಂತಾನಹೀನತೆ ಅಥವಾ ಬಂಜೆತನದ ಸಮಸ್ಯೆಯನ್ನು ತಂದೊಡ್ಡುತ್ತಿರುವುದು

ಐವಿಎಫ್, ಸರೊಗಸಿ ಚಿಕಿತ್ಸಾ ಕೇಂದ್ರಗಳಿಗೆ ಹೊಸ ನಿಯಮ

ಸಂತಾನೋತ್ಪತ್ತಿ ತಂತ್ರಜ್ಞಾನ ಹಾಗೂ ಐವಿಎಫ್ ಕೇಂದ್ರ, ವೀರ್ಯ ಬ್ಯಾಂಕುಗಳು ಪ್ರತಿ ಐದು ವರ್ಷಗಳಿಗೊಮ್ಮೆ ಹಾಗೂ ಸರೊಗಸಿ ಚಿಕಿತ್ಸಾ ಕೇಂದ್ರಗಳು ಪ್ರತಿ ಮೂರು ವರ್ಷಗಳಿಗೊಮ್ಮೆ ತಮ್ಮ ಪರವಾನಗಿ ಅಥವಾ ನೋಂದಣಿ ಪ್ರಮಾಣಪತ್ರವನ್ನು ಕಡ್ಡಾಯವಾಗಿ ನವೀಕರಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ.

ಕೊಡಚಾದ್ರಿಗೆ ಟ್ರಕ್ಕಿಂಗ್‌ ಹೋಗಿದ್ದ ಬಾಮಾ ಹರೀಶ್‌ ಪುತ್ರ ಉಲ್ಲಾಸ್‌ ಹೃದಯಾಘಾತಕ್ಕೆ ಬಲಿ

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ಕರ್ನಾಟಕ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಬಾಮಾ ಹರೀಶ್​​ ಪುತ್ರ ಉಲ್ಲಾಸ್ (28) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಉಲ್ಲಾಸ್ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಡಚಾದ್ರಿ ಗಿರಿಗೆ ಟ್ರಕ್ಕಿಂಗ್‌ಗೆ ತೆರಳಿದ್ದಾಗ ಹಠಾತ್ ಹೃದಯಾಘಾತಕ್ಕೆ ಒಳಗಾಗಿದ್ದು  ನಗರ

ದೇವದುರ್ಗದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್‌ಸ್ಟೇಬಲ್ ಕುಸಿದು ಸಾವು

ರಾಯಚೂರು ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ೩೭ ವರ್ಷದ ಪೊಲೀಸ್ ಕಾನ್ಸ್‌ಸ್ಟೇಬಲ್ ರೇಣುಕಾ ರಾಜ್ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಕುಸಿದು ಮೃತಪಟ್ಟಿದ್ದಾರೆ. ಅವರು ಮೊಹರಂ ಹಬ್ಬದ ಭದ್ರತೆಗೆ ನಿಯೋಜನೆಗೊಂಡಿದ್ದು, ಕರ್ತವ್ಯದಲ್ಲಿದ್ದಾಗ ತೀವ್ರ ಎದೆನೋವು ಹಾಗೂ ಎಡೆಗೈ ಸೆಳೆತ ಕಾಣಿಸಿಕೊಂಡಿತ್ತು. ಅಸ್ವಸ್ಥಗೊಂಡ ಅವರನ್ನು