Menu

ಲ್ಯಾಪ್ರೊಸ್ಕೋಪಿಕ್ ಟ್ಯೂಬೆಕ್ಟಮಿ: ಮಹಿಳೆ ಸಾವು ಪ್ರಕರಣದಲ್ಲಿ ವೈದ್ಯರ ವಿರುದ್ಧ ಎಫ್‌ಐಆರ್‌

ಲ್ಯಾಪ್ರೊಸ್ಕೋಪಿಕ್ ಟ್ಯೂಬೆಕ್ಟಮಿ ಶಸ್ತ್ರಚಿಕಿತ್ಸೆ ಬಳಿಕ 21 ವರ್ಷದ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ವೈದ್ಯರ ವಿರುದ್ಧ ನಿರ್ಲಕ್ಷ್ಯತನ ಆರೋಪದಡಿ ಕೇಸ್‌ ದಾಖಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಉಂಟಾದ ಗಂಭೀರ ಸಮಸ್ಯೆಗಳಿಂದಾಗಿ ಮಹಿಳೆ ಮೃತಪಟ್ಟಿದ್ದಾರೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮೃತ ಮಹಿಳೆಯ ಪತಿ ನೀಡಿದ ದೂರಿನ ಆಧಾರದಲ್ಲಿ ಮೊದಲಿಗೆ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿತ್ತು. ಈ ಸಾವು ವೈದ್ಯಕೀಯ ನಿರ್ಲಕ್ಷ್ಯದಿಂದ ಸಂಭವಿಸಿರಬಹುದು ಎಂದು ವೈದ್ಯಕೀಯ ಶಿಕ್ಷಣ

ಪೋಕ್ಸೋ: ಖಾಸಗಿ ಆಸ್ಪತ್ರೆಗಳಿಗೆ ಮಾರ್ಗಸೂಚಿ

ಪೋಕ್ಸೋ ಕಾಯ್ದೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಬಾಲ ಗರ್ಭಿಣಿ ಪ್ರಕರಣದ ಕುರಿತು ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟ ಮಾಡಿದೆ. ಕಡ್ಡಾಯವಾಗಿ ವರದಿ ಮತ್ತು ಕ್ರಮದ ಬಗ್ಗೆ ಮಾರ್ಗಸೂಚಿ ಪ್ರಕಟ ಮಾಡಿದ್ದು, ಎಲ್ಲಾ ಆಸ್ಪತ್ರೆಗಳು ಈ ನಿಯಮಗಳನ್ನು ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ಗರ್ಭಧಾರಣೆಗೆ ಯೋಚಿಸುತ್ತಿರುವ ಪ್ರತಿಯೊಬ್ಬ ದಂಪತಿ ತಿಳಿಯಲೇಬೇಕಾದ ಮಾಹಿತಿ

ಭಾರತದಲ್ಲಿ ಅನೇಕ ಮಂದಿ ಒಂದು ಹೊಸ ಸವಾಲು ಎದುರಿಸುವ ಹಂತದಲ್ಲಿದ್ದಾರೆ. ಅದೇನೆಂದರೆ ಹ್ಯೂಮನ್ ಪ್ಯಾಪಿಲೋಮವೈರಸ್ (ಹೆಚ್‌ಪಿವಿ) ಸೋಂಕು. ಬಹಳಷ್ಟು ಮಂದಿ ಈ ಸೋಂಕು ಹೊಂದುವ ಅಪಾಯ ಎದುರಿಸುತ್ತಿದ್ದಾರೆ. ಹೆಚ್ಚಿನ ಪ್ರಕರಣಗಳು ಪತ್ತೆಯಾಗದೆ ಅಥವಾ ಚಿಕಿತ್ಸೆ ಪಡೆಯದ ಹಂತದಲ್ಲಿವೆ. ಅಂದಾಜಿನ ಪ್ರಕಾರ, 15

ಅಗತ್ಯ ಔಷಧಗಳ ದರ ಏಪ್ರಿಲ್‌ 1ರಿಂದ ಶೇ 0.6ರಷ್ಟು ಏರಿಕೆ

ಕೇಂದ್ರ ಸರ್ಕಾರವು ಅಗತ್ಯ ಔಷಧಗಳ ಬೆಲೆ ಪರಿಷ್ಕರಣೆ ಪ್ರಕಟಿಸಿ ಈ ವರ್ಷ ಶೇಕಡ 0.6ರಷ್ಟು ದರ ಹೆಚ್ಚಳಕ್ಕೆ ಅವಕಾಶ ನೀಡಿದೆ. ಅಗತ್ಯ ಔಷಧಗಳ ಪಟ್ಟಿಯಲ್ಲಿರುವ 1000ಕ್ಕೂ ಹೆಚ್ಚು ಔಷಧಗಳಿಗೆ ಪರಿಷ್ಕೃತ ದರ ಅನ್ವಯವಾಗಲಿದೆ. ನೋವು ನಿವಾರಕಗಳು, ಆಂಟಿಬಯಾಟಿಕ್ಸ್, ಸೋಂಕು ನಿವಾರಕಗಳು, ಮಧುಮೇಹ

ಲಿವರ್‌ ದಾನ ಮಾಡಿ ಅಮ್ಮನ ಉಳಿಸಿಕೊಂಡ ಮಗ ಚೇತರಿಸಿಕೊಳ್ಳದೆ ಸಾವು

ತಾಯಿಯ ಜೀವ ಉಳಿಸುವುದಕ್ಕೆಂದು ಮಗ ಆಕೆಗೆ ಲಿವರ್‌ ದಾನ ಮಾಡಿದ ಬಳಿಕ ಮೃತಟ್ಟಿರುವ ಹೃದಯವಿದ್ರಾವಕ ಘಟನೆಯೊಂದು ಪಾಕಿಸ್ತಾನದಲ್ಲಿ ನಡೆದಿದ್ದು, ಭಾರೀ ವೈರಲ್‌ ಆಗಿದೆ. ಅಮ್ಮನಿಗಾಗಿ ಲಿವರ್‌ ದಾನಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾದ ಯುವಕ ಚೇತರಿಸಿಕೊಳ್ಳದೆ ಪ್ರಾಣ ಹೋಗಿದೆ. ಮಗನ ಸಾವಿನ ಆಘಾತವನ್ನು ಸಹಿಸಲಾಗದೆ

ಹಾಸನದಲ್ಲಿ ಪಾಠ ಮಾಡುತ್ತಿದ್ದಾಗಲೇ ಶಿಕ್ಷಕ ಕುಸಿದು ಸಾವು

ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾಗಲೇ ಮುಖ್ಯಶಿಕ್ಷಕರು ಹೃದಯಾಘಾತದಿಂದ ಮೃತಪಟ್ಟ ದುರ್ಘಟನೆ ಅರಕಲಗೂಡು ತಾಲೂಕಿನ ಕೆಬ್ಬೆಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಕೆಬ್ಬೆಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೇರಳಾಪುರ ಗ್ರಾಮದ ಸತೀಶ್ (53) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ

ಅಪರೂಪದ ಕಾಯಿಲೆಗಳಿಂದ ಬಳಲುವವರು ಆತ್ಮವಿಶ್ವಾಸ ಕಳೆದುಕೊಳ್ಳದಿರಿ, ಹಣದ ಚಿಂತೆ ಬಿಡಿ: ಡಿಸಿಎಂ

“ಹಿಮೋಫಿಲಿಯಾ ಹಾಗೂ ಇತರ ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಜೊತೆ ಕಾಂಗ್ರೆಸ್ ಸರ್ಕಾರ ನಿಲ್ಲುತ್ತದೆ. ಹಣದ ಬಗ್ಗೆ ಚಿಂತೆ ಮಾಡಬೇಡಿ. ಆದರೆ ಯಾರೂ ಸಹ ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ” ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಧೈರ್ಯ ತುಂಬಿದ್ದಾರೆ. ಆರೋಗ್ಯ ಮತ್ತು ಕುಟುಂಬ

ಸಿಂಧನೂರು ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವು: ಕುಟುಂಬದ ಪ್ರತಿಭಟನೆ

ಸಿಂಧನೂರಿನಲ್ಲಿರುವ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ  ಹೆರಿಗೆ ವೇಳೆ ನವಜಾತ ಶಿಶು  ಮೃತಪಟ್ಟಿದ್ದು, ಮಗು ಸಾವಿಗೆ ಆಸ್ಪತ್ರೆ ವೈದ್ಯರು ಸಿಬ್ಬಂದಿ ಕಾರಣ ಎಂದು ಕುಟುಂಬಸ್ಥರು ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರೌ ಡಕುಂದ ಗ್ರಾಮದ ಅಮರೇಶ ಹಿರೇಮಠ್  ಅವರ ಪತ್ನಿ  ಚಂದ್ರಿಕಾ  ಅವರ ಹೆರಿಗೆ

ಸಿಂದಗಿ ಸರ್ಕಾರಿ ಆಸ್ಪತ್ರೆಯಲ್ಲಿ ಶಿಶು, ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

ಸಿಂದಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮತ್ತು ನವಜಾತ ಶಿಶು ಮೃತಪಟ್ಟಿರುವುದಾಗಿ ಆರೋಪ ಕೇಳಿಬಂದಿದೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಗರ್ಭಿಣಿಗೆ ನರ್ಸ್​ಗಳೇ ಹೆರಿಗೆ ಮಾಡಿಸಿದ್ದರು. ಈ ವೇಳೆ ಶಿಶು ಮೃತಪಟ್ಟಿದ್ದು, ಬಾಣಂತಿ ತೀವ್ರ ರಕ್ತಸ್ರಾವದಿಂದ ಅಸು ನೀಗಿರುವುದಾಗಿ ಕುಟುಂಬಸ್ಥರು

ಹಲ್ಲಿನ ಚಿಕಿತ್ಸೆಗೆಂದು ಜೇವರ್ಗಿಯ ಆಸ್ಪತ್ರೆಗೆ ಬಂದಿದ್ದ ಮಹಿಳೆ ಕೋಮಾಗೆ

ಹಲ್ಲಿನ ಸಮಸ್ಯೆಗೆ ಚಿಕಿತ್ಸೆ ಪಡೆಯಲೆಂದು ಖಾಸಗಿ ಆಸ್ಪತ್ರೆಗೆ ಹೋಗಿರುವ ಮಹಿಳೆ ಕೋಮಾ ಸ್ಥಿತಿ ತಲುಪಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ನಡೆದಿದೆ. ವೈದ್ಯರ ಯಡವಟ್ಟು ಈ ಸ್ಥಿತಿಗೆ ಕಾರಣವೆಂದು ಕುಟುಂಬ ಹೇಳಿದರೆ, ವೈದ್ಯರ ತಪ್ಪಿಲ್ಲ ಎಂದು ಆಸ್ಪತ್ರೆಯವರು ಹೇಳುತ್ತಿದ್ದಾರೆ. ಜೇವರ್ಗಿ