Menu

ಕೊಡಚಾದ್ರಿಗೆ ಟ್ರಕ್ಕಿಂಗ್‌ ಹೋಗಿದ್ದ ಬಾಮಾ ಹರೀಶ್‌ ಪುತ್ರ ಉಲ್ಲಾಸ್‌ ಹೃದಯಾಘಾತಕ್ಕೆ ಬಲಿ

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ಕರ್ನಾಟಕ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಬಾಮಾ ಹರೀಶ್​​ ಪುತ್ರ ಉಲ್ಲಾಸ್ (28) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಉಲ್ಲಾಸ್ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಡಚಾದ್ರಿ ಗಿರಿಗೆ ಟ್ರಕ್ಕಿಂಗ್‌ಗೆ ತೆರಳಿದ್ದಾಗ ಹಠಾತ್ ಹೃದಯಾಘಾತಕ್ಕೆ ಒಳಗಾಗಿದ್ದು  ನಗರ ಆಸ್ಪತ್ರೆಗೆ ಕರೆತರುತ್ತಿದ್ದಾಗಲೇ  ಮಾರ್ಗಮಧ್ಯೆ ಅಸು ನೀಗಿದ್ದಾರೆ.

ಮೃತ ಉಲ್ಲಾಸ್ ಅವರ ಮದುವೆ ಡಿಸೆಂಬ‌ರ್ ತಿಂಗಳಲ್ಲಿ ನಿಗದಿಯಾಗಿದ್ದು, ಚಂದನಾ ಗೌಡ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.  ಕೊಡಚಾದ್ರಿ ಬೆಟ್ಟಕ್ಕೆ ಗೆಳೆಯನೊಂದಿಗೆ ಶನಿವಾರ  ಬೆಳಗ್ಗೆ 6 ಗಂಟೆಗೆ ಪ್ಯಾಕೇಜ್‌’ನಲ್ಲಿ ಚಾರಣಕ್ಕಾಗಿ ಬಂದಿದ್ದು 10 ಗಂಟೆ ವೇಳೆಗೆ ಉಲ್ಲಾಸ್ ಅವರಿಗೆ ಆ ವೇಳೆ ಹೃದಯಾಘಾತ ಸಂಭವಿಸಿದೆ.

ಶಾಲೆಯಲ್ಲೇ ಹೃದಯಾಘಾತದಿಂದ ಶಿಕ್ಷಕ ನಿಧನ

ಮಸ್ಕಿ ತಾಲೂಕಿನ ಮೆದಿಕಿನಾಳ ಗ್ರಾಮದ ಶಾಲೆಯಲ್ಲಿದ್ದಾಗ ಎದೆನೋವು ಕಾಣಿಸಿಕೊಂಡು ಯುವ ಅತಿಥಿ ಶಿಕ್ಷಕರೊಬ್ಬರು ಮೃತಪಟ್ಟಿದ್ದಾರೆ. ನಾಗರಬೆಂಚಿ ಗ್ರಾಮದ 29 ವರ್ಷದ ವೀರನಗೌಡ ಪಾಟೀಲ್ ಮೃತಪಟ್ಟಿರುವ ಶಿಕ್ಷಕ.

ಮೆದಿಕಿನಾಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿದ್ದ ವೀರನಗೌಡ ಪಾಟೀಲ್ ಊಟದ ನಂತರ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಮಸ್ಕಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಅಸು ನೀಗಿದ್ದಾರೆ.

Related Posts

Leave a Reply

Your email address will not be published. Required fields are marked *