Menu

ಅಕ್ರಮ ಆಸ್ತಿ ಗಳಿಕೆ: ರಾಯಚೂರಿನಲ್ಲಿ ಲೋಕಾಯುಕ್ತ ದಾಳಿ

ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಕೃಷ್ಣ ಭಾಗ್ಯ ಜಲ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಬಸನಗೌಡ ಅವರಿಗೆ ಸೇರಿದ ನಾನಾ ಆಸ್ತಿಗಳ ಮೇಲೆ ಕರ್ನಾಟಕ ಲೋಕಾಯುಕ್ತ ಏಕಕಾಲದಲ್ಲಿ ದಾಳಿ ನಡೆಸಿದೆ.

ಚಿಕ್ಕಹೊನ್ನಕುಣಿ ಪ್ರದೇಶದಲ್ಲಿರುವ ಅವರ ಕಚೇರಿ, ನಿವಾಸ ಹಾಗೂ ಪತ್ನಿ ಮತ್ತು ಸಂಬಂಧಿಕರಿಗೆ ಸೇರಿದ ಆಸ್ತಿಗಳ ಶೋಧ ನಡೆಸಿ, ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ರಾಯಚೂರು ನಗರದ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿರುವ ಬಸನಗೌಡ ಅವರ ನಿವಾಸದ ಮೇಲೂ ದಾಳಿ ನಡೆದಿದೆ. ಯಕ್ಲಾಸ್ಪುರ ಗ್ರಾಮದಲ್ಲಿರುವಸಹೋದರ ಶಿವನಗೌಡ ಅವರಿಗೆ ಸೇರಿದ ‘ಸೆಲೆಬ್ರಿಟಿ ಗಾರ್ಡನ್’ ನಿವಾಸದಲ್ಲೂ ಶೋಧ ನಡೆಸಲಾಗಿದೆ. ಸಹೋದರರಾದ ದೊಡ್ಡನಗೌಡ ಮತ್ತು ಶರಂಗೌಡ ಅವರ ಮನೆಗಳ ಮೇಲೂ ದಾಳಿ ನಡೆದಿದೆ.

ಬಸನಗೌಡ ಅವರ ಪತ್ನಿ ಅನಿತಾ ಶೆಟ್ಟಿ ಅವರ ಹೆಸರಿನಲ್ಲಿ ಬೈಪಾಸ್ ರಸ್ತೆಯಲ್ಲಿರುವ ‘ಶ್ರೀ ಫಿಲ್ಲಿಂಗ್ ನಯಾರಾ ಪೆಟ್ರೋಲ್ ಬಂಕ್’ ಮೇಲೂ ಲೋಕಾಯುಕ್ತ ದಾಳಿ ನಡೆಸಿದೆ. ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಗೋದಾಮು, ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ಯಕ್ಲಾಸ್ಪುರ ಸಮೀಪದ ಕುಟುಂಬದ ಫಾರ್ಮ್‌ಹೌಸ್‌ನಲ್ಲಿಯೂ ಶೋಧ ಕಾರ್ಯ ನಡೆಸಲಾಗಿದೆ. ಉಪ ಪೊಲೀಸ್ ಅಧೀಕ್ಷಕರು ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್‌ಗಳ ನೇತೃತ್ವದ ಹಲವು ತಂಡಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ.

Related Posts

Leave a Reply

Your email address will not be published. Required fields are marked *