Tuesday, November 10, 2026
Menu

ಲಾಸ್‌ ಏಂಜಲೀಸ್‌ನಲ್ಲಿ ಕಾಳ್ಗಿಚ್ಚು ಆರ್ಭಟಕ್ಕೆ ಐವರು ಬಲಿ

ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಭೀಕರ ಕಾಳ್ಗಿಚ್ಚು ಕಾ ಣಿಸಿಕೊಂಡಿದ್ದು, ಐವರು ಬಲಿಯಾಗಿದ್ದಾರೆ. ಐದು ಎಕರೆ ಪ್ರದೇಶದಲ್ಲಿ ಕಾಳ್ಗಿಚ್ಚು ಆವರಿಸಿದ್ದು, ಪ್ರಾಣಿ, ಪಕ್ಷಿಗಳು ಬೆಂಕಿಗೆ ಆಹುತಿಯಾಗಿವೆ. ಇಡೀ ಪ್ರದೇಶ ಬೆಂಕಿ ಮತ್ತು  ದಟ್ಟ ಹೊಗೆಯಿಂದ ಆವೃತವಾಗಿದೆ.

ಲಾಸ್‌ ಏಂಜಲೀಸ್‌ ಪಕ್ಕದ ಪೆಸಿಫಿಕ್‌ ಪ್ಯಾಲಿಸೈಡ್ಸ್‌ ಹಾಗೂ ಪ್ಯಾಸಡೀನಾ ಈಟನ್‌ ಕೆಯಾನ್‌ ಪ್ರದೇಶಗಳು ಹೊತ್ತಿ ಉರಿಯುತ್ತಿವೆ. ಬೆಟ್ಟ ಗುಡ್ಡಗಳಲ್ಲಿ ಬೆಂಕಿಯ ಕೆನ್ನಾಲಿಗೆ ಆವರಿಸಿ ಕೆಂಬಣ್ಣ ಹೊಂದಿದೆ.

ಲಾಸ್‌ ಏಂಜಲೀಸ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಬಿರುಗಾಳಿಯಿಂದ ಎದ್ದಿರುವ ಈ ಕಾಳ್ಗಿಚ್ಚು ನಂದಿಸುವ ಪ್ರಯತ್ನ ಇನ್ನೂ ಮುಂದುವರಿದಿದೆ. ಇಲ್ಲಿನ ಮನೆ ಬಿಟ್ಟು ಓಡಿ ಹೋಗಿದ್ದಾರೆ.

Related Posts

Leave a Reply

Your email address will not be published. Required fields are marked *