Menu

ಜನವರಿಯಲ್ಲೂ 124 ಅಡಿ ನೀರು: ಕೆಆರ್‌ಎಸ್‌ ಡ್ಯಾಂ ಹೊಸ ದಾಖಲೆ

ಮೈಸೂರು ಮತ್ತು ಬೆಂಗಳೂರಿಗರ ಜೀವನಾಡಿ ಶ್ರೀರಂಗಪಟ್ಟಣದಲ್ಲಿರುವ ಕೃಷ್ಣರಾಜಸಾಗರ ಜಲಾಶಯ ಹೊಸ ಇತಿಹಾಸ ದಾಖಲಿಸಿದೆ. ಜನವರಿಯಲ್ಲಿ ಕೂಡ ಜಲಾಶಯದಲ್ಲಿ ಗರಿಷ್ಠ 124 ಅಡಿ ನೀರು ಸಂಗ್ರಹವಿರುವುದು ವಿಶೇಷ. ಕಳೆದ 156 ದಿನಗಳಿಂದ ನಿರಂತರವಾಗಿ 124 ಅಡಿ ನೀರು ಇದೆ. ಇದು ರೈತರು ಸೇರಿದಂತೆ ಜನರಿಗೆ ಸಂತೋಷ ತರುವ ವಿಚಾರ.

ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಬೇಸಿಗೆ ಬೆಳೆ ಬೆಳೆಯಲು ರೈತರಿಗೆ ನೀರೊದಗಿಸುವ ನಿರ್ಧಾರ ಮಾಡಿದೆ. ಕಾವೇರಿ ಕಣಿವೆಯಲ್ಲಿ ವ್ಯಾಪಕ ಮಳೆಯಾಗಿ ಅಣೆಕಟ್ಟು ಭರ್ತಿಯಾಗಿ ಪ್ರಸಕ್ತ ವರ್ಷ ತಮಿಳುನಾಡಿಗೆ ಬಿಡಬೇಕಾದ ನೀರಿಗಿಂತ ಹೆಚ್ಚಿನ ಪ್ರಮಾಣದ ನೀರು ಹರಿದಿದೆ.

ಜಲಾಶಯದಲ್ಲಿ 124.30 ಅಡಿವರೆಗೆ ನೀರಿದ್ದು, 48.754 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಗರಿಷ್ಠ 124.80 ಅಡಿ ಎತ್ತರವುಳ್ಳ ಅಣೆಕಟ್ಟೆಯು ಗರಿಷ್ಠ 49.452 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಡ್ಯಾಂ ಕಟ್ಟಿದಾಗಿನಿಂದ ಈ ವರ್ಷ ದಾಖಲೆ ನಿರ್ಮಾಣವಾಗಿದೆ. ಸತತ 156 ದಿನ ಕೆಆರ್‌ಎಸ್‌ನಲ್ಲಿ ಯಾವ ವರ್ಷವೂ ಗರಿಷ್ಟ ಮಟ್ಟದ ನೀರಿರಲಿಲ್ಲ,  ಇದೇ ಮೊದಲು.

Related Posts

Leave a Reply

Your email address will not be published. Required fields are marked *