Wednesday, October 28, 2026
Menu

ಒಣಗಿದ ಬಟ್ಟೆ ತರುವಾಗ ಕಾಲು ಜಾರಿ 4ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು

ಉದಯಕಾಲ ನ್ಯೂಸ್, ಬೆಂಗಳೂರು: ಒಣಗಲು ಹಾಕಿದ್ದ ಬಟ್ಟೆಗಳನ್ನು ತೆಗೆದುಕೊಂಡು ಬರಲು ತೆರಳಿದ್ದ ಮಹಿಳೆಯೊಬ್ಬರು ಆಕಸ್ಮಿಕವಾಗಿ ನಾಲ್ಕನೇ ಮಹಡಿಯಿಂದ ಕಾಲುಜಾರಿ ಕೆಳಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬೆಂಗಳೂರು ಹೊರವಲಯದ ಆನೇಕಲ್ (Anekal) ಪಟ್ಟಣದ ಸಿಪಾಯಿಗಲ್ಲಿಯಲ್ಲಿ ನಡೆದಿದೆ.

ಮೃತರನ್ನು ಭುವನೇಶ್ವರಿ (49) ಎಂದು ಗುರುತಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ತೀವ್ರ ಖಿನ್ನತೆಗೆ (Depression) ಒಳಗಾಗಿದ್ದ ಅವರು ಮಾನಸಿಕ ಅಸ್ವಸ್ಥರಾಗಿ ಬಳಲುತ್ತಿದ್ದರು ಎನ್ನಲಾಗಿದೆ. ಎಂದಿನಂತೆ ಸಂಜೆ ವೇಳೆ ಮನೆಯ ಮಹಡಿಯ ಮೇಲ್ಭಾಗದಲ್ಲಿ ಒಣಗಲು ಹಾಕಿದ್ದ ಬಟ್ಟೆಗಳನ್ನು ತೆಗೆದುಕೊಳ್ಳಲು ಭುವನೇಶ್ವರಿ ತೆರಳಿದ್ದರು. ಈ ವೇಳೆ ಅಚಾನಕ್ಕಾಗಿ ಕಾಲು ಜಾರಿ ಅಥವಾ ಮಾನಸಿಕ ಅಸ್ಥಿರತೆಯಿಂದಾಗಿ ಅವರು ಕಟ್ಟಡದ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ.

ಎತ್ತರದ ಕಟ್ಟಡದಿಂದ ಕೆಳಗೆ ಬಿದ್ದ ತೀವ್ರ ರಭಸಕ್ಕೆ ಭುವನೇಶ್ವರಿ ಸ್ಥಳದಲ್ಲೇ ಭೀಕರವಾಗಿ ಸಾವನ್ನಪ್ಪಿದ್ದಾರೆ. ಘಟನೆಯಿಂದಾಗಿ ಸ್ಥಳದಲ್ಲಿ ಸಾರ್ವಜನಿಕರ ಆತಂಕ ಹಾಗೂ ಶೋಕಮೂಡಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮೃತ ಮಹಿಳೆಯ ದೇಹವನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆನೇಕಲ್ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ದುರ್ಘಟನೆಗೆ ಸಂಬಂಧಿಸಿದಂತೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.

#Anekal #BengaluruNews #TragicAccident #AnekalPolice #UdayakalaNews #CurrentAffairs #KarnatakaNews #AccidentalDeath

Related Posts

Leave a Reply

Your email address will not be published. Required fields are marked *