ಉದಯಕಾಲ ನ್ಯೂಸ್, ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ನಿರಂತರ ವಿದ್ಯಾರ್ಥಿ ಪ್ರತಿಭಟನೆಗಳು ಹಾಗೂ ಪ್ರತಿಭಟನೆಗಳ ಬಗ್ಗೆ ಯುವ ಸಮೂಹ ಆಸಕ್ತಿ ತೋರುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿರುವ ದೆಹಲಿ ಹೈಕೋರ್ಟ್, ವಿದ್ಯಾರ್ಥಿಗಳ ಮುಂಚೂಣಿಯಲ್ಲಿ ಆರಂಭವಾಗುವ ಪ್ರತಿಭಟನೆಗಳು ಕೆಲವೊಮ್ಮೆ ಹಿಂಸಾಚಾರ, ಬೆಂಕಿ ಹಚ್ಚುವುದು ಮತ್ತು ದರೋಡೆಯಂತಹ ಅಹಿತಕರ ಘಟನೆಗಳಿಗೆ ತಿರುಗುವ ಗಂಭೀರ ಅಪಾಯವಿರುತ್ತದೆ ಎಂದು ಎಚ್ಚರಿಸಿದೆ. ಸಿಜೆಪಿ (CJP) ನಾಯಕರ ಬಂಧನ ಹಾಗೂ ಪ್ರತಿಭಟನೆಗೆ ಸಂಬಂಧಿಸಿದ ಹತ್ಯೆಯ ಕೊಂಡಿಗಳು ಮತ್ತು ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಮಹತ್ವದ ಅವಲೋಕನವನ್ನು ಮಾಡಿದೆ
ವಿದೇಶಿ ನಿದರ್ಶನಗಳ ಉಲ್ಲೇಖ ನೀಡಿದ ಕೋರ್ಟ್
ವಿಚಾರಣೆ ವೇಳೆ ಫ್ರಾನ್ಸ್,ಅಲ್ಬೇನಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ ನಡೆದ ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಗಳನ್ನು ಉಲ್ಲೇಖಿಸಿದ ಹೈಕೋರ್ಟ್, ನಮ್ಮ ದೇಶದ ಹೊರಗೂ ನಡೆಯುತ್ತಿರುವ ಪ್ರತಿಭಟನೆಗಳನ್ನು ನೋಡುತ್ತಿದ್ದೇವೆ. ವಿದ್ಯಾರ್ಥಿ ಪ್ರತಿಭಟನೆಯಾಗಿ ಆರಂಭವಾದದ್ದು ಮುಂದೆ ಹೇಗೆಲ್ಲಾ ಮುಂದೆ ಕಾಳ್ಗಿಚ್ಚಾಗಿ ಮಾರಕ ರೀತಿಯ ಲೂಟಿ ಅಪರಾಧ ಚಟುವಟಿಕೆಗಳಿಗೆ ತಿರುಗುತ್ತದೆ ಎಂಬುದನ್ನು ಗಮನಿಸಬೇಕಿದೆ. ಅದಕ್ಕಾಗಿಯೇ ಯಾವುದೇ ಪ್ರತಿಭಟನೆಗೂ ಪೊಲೀಸ್ ಅನುಮತಿ ಕಡ್ಡಾಯ. ಇದು ಕೇವಲ ನಿಮ್ಮನ್ನು ತಡೆಯುವುದಕ್ಕಲ್ಲ, ಬದಲಾಗಿ ಅನ್ಯ ಕಿಡಿಗೇಡಿಗಳು ಬಂದು ನಿಮ್ಮ ಒಳ್ಳೆಯ ಹೆಸರಿಗೆ ಕಳಂಕ ತರುವುದನ್ನು ತಡೆಯಲೂ ಹೌದು ಎಂದು ಅಭಿಪ್ರಾಯಪಟ್ಟಿದೆ.
ಪ್ರತಿಭಟನೆಯ ಹೆಸರಿನಲ್ಲಿ ಬ್ಯಾರಿಕೇಡ್‌ಗಳನ್ನು ಮುರಿಯುವುದು ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ನಾಶ, ಶಾಂತಿ ಭಂಗಪಡಿಸುವ ಚಟುವಟಿಕೆಗಳನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಮುನ್ನೆಚ್ಚರಿಕೆ ಹಾಗೂ ಅನುಮತಿಯ ಪ್ರಾಮುಖ್ಯತೆಯನ್ನು ಎತ್ತಿಹಿಡಿದಿದೆ.
#DelhiHighCourt #StudentProtest #LawAndOrder #UdayakalaNews #CJPLeaders #NationalNews


