Saturday, September 26, 2026
Menu

ಹಾನಗಲ್‌ನಲ್ಲಿ ಆಸ್ತಿ ವಿಚಾರಕ್ಕೆ ತಾಯಿ, ಮಗನ ಕೊಲೆ

ಆಸ್ತಿ ವಿಚಾರಕ್ಕೆ ತಾಯಿ ಮತ್ತು ಮಗನನ್ನು ಕೊಲೆ ಮಾಡಿರುವ ಘಟನೆ ಹಾನಗಲ್‌ ತಾಲೂಕಿನ ಕುಸನೂರು ಗ್ರಾಮದಲ್ಲಿ ನಡೆದಿದೆ. ಪ್ರೇಮಕ್ಕ ಬಡಿಗೇರ (55) ಹಾಗೂ ಮಗ ಅವಿನಾಶ್ ಬಡಿಗೇರ (38) ಕೊಲೆಯಾದವರು.

ತಿರಕಯ್ಯ ಹೊಸಮಠ ಹಾಗೂ ಬಸವರಾಜ ಹೊಸಮಠ ಕೊಲೆ ಆರೋಪಿಗಳು. ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ತಾಯಿ ಮತ್ತು ಮಗ ಕೆಲವು ವರ್ಷಗಳ ಹಿಂದೆ ಮನೆ, ಜಾಗ ಖರೀದಿಸಿದ್ದರು. ಖರೀದಿಸಿದ ನಂತರವೂ ಆಸ್ತಿ ಅವರ ಹೆಸರಿಗೆ ವರ್ಗಾವಣೆ ಮಾಡಿರಲಿಲ್ಲ. ಕಾನೂನು ಹೋರಾಟ ನಡೆಸಿ ಪ್ರೇಮಕ್ಕ ಬಡಿಗೇರ ತನ್ನ ಜಾಗ ಮತ್ತು ಮನೆಯನ್ನು ವಶಕ್ಕೆ ಪಡೆದುಕೊಂಡಿದ್ದರು.

ಇದರಿಂದ ಆಕ್ರೋಶಗೊಂಡಿದ್ದ ಆರೋಪಿಗಳು ತಾಯಿ ಮತ್ತು ಮಗನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕಲ್ಲಿನಿಂದ ಜಜ್ಜಿದ್ದಾರೆ. ಸ್ಥಳಕ್ಕೆ ಆಡೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Related Posts

Leave a Reply

Your email address will not be published. Required fields are marked *