Saturday, September 26, 2026
Menu

ಮೋದಿ, ಅಂಬಾನಿಯ ಡೀಪ್‌ಫೇಕ್‌ ವೀಡಿಯೊ: ಎಂಟು ಲಕ್ಷ ರೂ. ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ

ನಾನಾ ಬಗೆಯಲ್ಲಿ ಆನ್‌ಲೈನ್‌ ವಂಚನೆಗಳು ನಡೆಯುವುದು ಮುಂದುವರಿದಿದ್ದು, ಈಗ ಡೀಪ್‌ಫೇಕ್‌ ವೀಡಿಯೊಗಳನ್ನು ಬಳಸಿ ಜನರನ್ನು ನಂಬಿಸಿ ವಂಚಿಸುವ ಜಾಲ ಸಕ್ರಿಯವಾಗಿದೆ. ಇಂಥ ಜಾಲಕ್ಕೆ ಬಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರು ೭.೬೬ ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಪ್ರಧಾನಿ ಮೋದಿ, ಸಚಿವೆ ನಿರ್ಮಲಾ ಸೀತಾರಾಮನ್‌, ಉದ್ಯಮಿಗಳಾ ಸುಧಾಮೂರ್ತಿ, ಅನಂತ್‌ ಅಂಬಾನಿ ಅವರ ಡೀಪ್‌ ಫೇಕ್‌ ವೀಡಿಯೊಗಳನ್ನು ನೋಡಿ ನಂಬಿದ ಬೆಂಗಳೂರು ನಿವಾಸಿಯೊಬ್ಬರು ಹೂಡಿಕೆ ಮಾಡಲು ಮುಂದಾಗಿ 7.66 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಮಹಾಲಕ್ಷ್ಮಿ ಲೇಔಟ್‌ನ 39 ವರ್ಷದ ವ್ಯಕ್ತಿಗೆ ಜುಲೈ 10ರಂದು ಫೇಸ್‌ಬುಕ್‌ನಲ್ಲಿ ಈ ವೀಡಿಯೊಗಳು ಕಾಣಿಸಿಕೊಂಡಿದ್ದವು. ಮೋದಿ ಸೇರಿದಂತೆ ಇತರರು ಆನ್‌ಲೈನ್ ಹೂಡಿಕೆಯನ್ನು ಪ್ರಚಾರ ಮಾಡುತ್ತಿರುವಂತೆ ವೀಡಿಯೊಗಳಲ್ಲಿ ತೋರಿಸಲಾಗಿತ್ತು. ವೀಡಿಯೊದಲ್ಲಿದ್ದ ಲಿಂಕ್‌ ಕ್ಲಿಕ್ ಮಾಡಿದ ವ್ಯಕ್ತಿ ಹೂಡಿಕೆ ಆರಂಭಿಸಲು 22,000 ರೂಪಾಯಿ ವರ್ಗಾಯಿಸಿದ್ದರು. ನಂತರ ಯುಕೆ +44 ಕಂಟ್ರಿ ಕೋಡ್ ಹೊಂದಿದ್ದ ಐದು ಅಪರಿಚಿತ ಮೊಬೈಲ್ ಸಂಖ್ಯೆಗಳ ಮೂಲಕ ಅವರಿಗೆ ಕರೆಗಳು ಬಂದಿವೆ. ಕರೆ ಮಾಡಿದವರು ‘ಒನ್​​ ಟು ಮಾರ್ಕೆಟ್ಸ್​​’ ಕಂಪನಿಯ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡು ಫಾರೆಕ್ಸ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಹೇಳಿದ್ದರು.

ವಂಚಕರು ಸಂತ್ರಸ್ತ ವ್ಯಕ್ತಿಯ ಹೆಸರಿನಲ್ಲಿ ನಕಲಿ ಫಾರೆಕ್ಸ್ ಖಾತೆಯೊಂದನ್ನು ತೆರೆದಿದ್ದರು. ಜುಲೈ 10ರಿಂದ ಜುಲೈ 22ರವರೆಗೆ ವಿವಿಧ ವಹಿವಾಟುಗಳ ಮೂಲಕ ಆರೋಪಿಗಳು ನೀಡಿದ ಬ್ಯಾಂಕ್ ಖಾತೆಗಳಿಗೆ ವ್ಯಕ್ತಿ 7.6 ಲಕ್ಷ ರೂಪಾಯಿ ವರ್ಗಾಯಿಸಿದ್ದರು. ಹೂಡಿಕೆಯಿಂದ ಲಾಭ ಬರುತ್ತಿದೆ ಎಂಬ ನಂಬಿಕೆಯಲ್ಲಿದ್ದ ವ್ಯಕ್ತಿ ಹಣ ಹಿಂಪಡೆಯಲು ಮುಂದಾದಾಗ ವಂಚಕರು ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದಾರೆ. ಕೆಲವು ಸಮಯ ಕಾದ ಬಳಿಕ ವ್ಯಕ್ತಿ ಪೊಲೀಸರನ್ನು ಸಂಪರ್ಕಿಸಿದ್ದು ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ.

Related Posts

Leave a Reply

Your email address will not be published. Required fields are marked *