Wednesday, September 23, 2026
Menu

ಪ್ರಿಯಕರನೊಂದಿಗೆ ಸೇರಿ ಅಪ್ಪ, ಅಮ್ಮ, ತಂಗಿಯನ್ನು ಹಣಕ್ಕಾಗಿ ಕೊಲೆಗೈದಿದ್ದ ಶ್ವೇತಾ

ಕೆಆರ್‌ಪುರಂನಲ್ಲಿ ಶ್ವೇತಾ ಎಂಬಾಕೆ ಪ್ರಿಯಕರನೊಂದಿಗೆ ಸೇರಿ ತಂದೆ, ತಾಯಿ, ತಂಗಿಯನ್ನು ಕೊಲೆ ಮಾಡಿರುವ ಪ್ರಕರಣ ಸಂಬಂಧ ಪೊಲೀಸರು 2085 ಪುಟಗಳ ಜಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ಹಣದ ವಿಚಾರಕ್ಕಾಗಿಯೇ ಶ್ವೇತಾ ಮತ್ತು ಆಕೆಯ ಪ್ರಿಯಕರ ಕೆನೆತ್‌ ಈ ಕೊಲೆ ಮಾಡಿರುವುದು ಚಾರ್ಜ್‌ಶೀಟ್‌ನಲ್ಲಿ ಬಯಲಾಗಿದೆ.

47 ನೇ ಎಸಿಜೆಎಂ ಕೋರ್ಟ್‌ನಲ್ಲಿ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಪೊಲೀಸರು ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಅಪ್ಪ-ಅಮ್ಮ ಪದೇ ಪದೆ ಹಣ ಕೇಳುತ್ತಾರೆ ಎಂಬುದು ಒಂದು ಕಾರಣ, ತಾಯಿ ಹೆಸರಲ್ಲಿ ಬ್ಯಾಂಕ್‌ ಸಾಲ ಪಡೆದು ಪ್ರಿಯಕರ ಕೆನೆತ್‌ಗೆ ಕೊಟ್ಟಿರುವುದರಿಂದ ಅವರನ್ನು ಕೊಲೆ ಮಾಡಿದ ಬಳಿಕ ಸಾಲ ತೀರಿಸುವ ಕಷ್ಟ ಇಲ್ಲ ಎಂಬುದು ಮತ್ತೊಂದು ಕಾರಣ, ಕೊಲೆ ಬಳಿಕ ಅಪ್ಪ- ಅಮ್ಮನ ಮನೆ ಮಾಡಿ ಹಣ ಮಾಡಿಕೊಳ್ಲೂವುದು ಮಗದೊಂದು ಕಾರಣ ಎಂಬುದನ್ನು ಪೊಲೀಸರು ಆರೋಪ ಪಟ್ಟಿಯಲ್ಲಿ ವಿವರಿಸಿದ್ದಾರೆ. ಸಾಕಷ್ಟು ಸಾಕ್ಷಿಗಳನ್ನು ಕೂಡ ಮಂಡಿಸಿದ್ದಾರೆ.

ಅಪ್ಪ , ಅಮ್ಮ, ತಂಗಿಯೇ ಇಲ್ಲದಿದ್ದರೆ ಯಾವುದೇ ತೊಂದರೆಇಲ್ಲದೆ ಆರಾಮವಾಗಿ ಇರಬಹುದು ಎಂಬ ಲೆಕ್ಕಾಚಾರದಲ್ಲಿ ಈ ಜೋಡಿ ಮೂವರನ್ನು ಕೊಲೆ ಮಾಡಿದೆ. ಯುವತಿಯಿಂದ ಸ್ಟಾರ್ಟ್‌ಅಪ್‌ ಮಾಡುವುದಕ್ಕೆಂದು
ಆರೋಪಿ ಕೆನೆತ್ ಐವತ್ತು ಲಕ್ಷ ಪಡೆದಿದ್ದ. ಇದಕ್ಕಾಗಿ ಶ್ವೇತಾ ತಾಯಿ ಹೆಸರಲ್ಲಿ ಸಾಲ ಪಡೆದಿದ್ದಳು. ಕೊಲೆಯ ನಂತರ ಅಪ್ಪ-ಅಮ್ಮ ವಾಸ ಮಾಡುತ್ತಿದ್ದ ಮನೆ ಮಾರಲು ಮುಂದಾಗಿದ್ದರು. ಆ ಹಣದಿಂದ ಪಾಂಡಿಚೆರಿ ಹೋಗಿ ಅಲ್ಲಿ ಐಡೆಂಟಿಟಿ ಬದಲಾವಣೆ ಮಾಡಿಕೊಂಡು ಬದುಕುವ ಯೋಜನೆ ರೂಪಿಸಿದ್ದರು ಎಂದು ತಿಳಿದು ಬಂದಿದೆ.

ಕೊಲೆ ಮಾಡಲು ಯುವತಿಯನ್ನು ಒಪ್ಪಿಸಿದ್ದ ಕೆನೆತ್‌ ಮೃತದೇಹ ಸಾಗಿಸಲು ಕೂಡ ಮಾಸ್ಟರ್ ಪ್ಲಾನ್‌ ಮಾಡಿದ್ದ, ಅಸಿಡ್ ನಲ್ಲಿ ಮೊದಲು ಸುಟ್ಟು ನಂತರ ತಂದೂರು ಡ್ರಮ್ ನಲ್ಲಿ ಹಾಕಿ ಸಂಪೂರ್ಣ ಬೂದಿ ಮಾಡಲು ಪ್ಲಾನ್ ರೂಪಿಸಿದ್ದರು ಎಂಬುದು ಪೊಲೀಸ್‌ ತನಿಖೆಯಲ್ಲಿ ಗೊತ್ತಾಗಿದೆ.

Related Posts

Leave a Reply

Your email address will not be published. Required fields are marked *