Menu

ಕಲಬುರಗಿ ಮಹಾನಗರ ಪಾಲಿಕೆ  ಮತ್ತೆ ಕಾಂಗ್ರೆಸ್‌ಗೆ

ತೀವ್ರ  ಜಿದ್ದಾಜಿದ್ದಿನಿಂದ ಕೂಡಿದ್ದ ಕಲಬುರಗಿ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯ‌ರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ  ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಮೇಲುಗೈ ಸಾಧಿಸಿದೆ.

ಕಾಂಗ್ರೆಸ್ ಪಕ್ಷದ ಪಾಲಿಕೆ 21ನೇ ವಾರ್ಡ್ ನ ಸದಸ್ಯ ಅಜ್ಜಲ್ ಅಹಮದ್ ಗೋಳಾ ನೂತನ ಮೇಯರ್ ಆಗಿ ಹಾಗೂ 20ನೇ ವಾರ್ಡನ ಸದಸ್ಯೆ ಫರ್ಹಾನಾ ಖುಸ್ರೋ ಜಹಗೀರ್ದಾರ್ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಅಜ್ಜಲ್ ಅಹಮದ್ ಗೋಳಾ ಅವರು ಮೇಯರ್ ಸ್ಥಾನಕ್ಕೆ ಹಾಗೂ ಫರ್ಹಾನಾ ಖುಸ್ರೋ ಜಹಗೀರ್ದಾರ್ ಅವರು ಉಪ ಮೇಯರ್ ಸ್ಥಾನಕ್ಕೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಪ್ರಾದೇಶಿಕ ಆಯುಕ್ತರಾದ ಜಾಹೀರಾ ನಶೀಮ್ ಅವರ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ಅಜಲ್‌ ಅಹಮದ್ ಗೋಳಾ ಹಾಗೂ ಫರ್ಹಾನಾ ಖುಸ್ರೋ ಜಹಗೀರ್ದಾರ್ ಅವರು ತಲಾ 35 ಮತಗಳನ್ನು ಪಡೆಯುವ ಮೂಲಕ ಮೇಯರ್ ಮತ್ತು ಉಪ
ಮೇಯರ್ ಆಗಿ ಆಯ್ಕೆಯಾದರು.

ಈ ಮೂಲಕ ಮಹಾನಗರ ಪಾಲಿಕೆಯ 24ನೇ ಮೇಯರ್, ಉಪಮೇಯರ್ ಆಗಿ ಅಧಿಕಾರದ ಗದ್ದುಗೆ ಏರಿದ್ದಾರೆ. ಬಿಜೆಪಿ ಅಭ್ಯರ್ಥಿ 29 ಮತಗಳನ್ನು ಪಡೆಯುವ ಮೂಲಕ ಪರಾಭವಗೊಂಡರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ, ಸಂಭ್ರಮಿಸಿದರು

Related Posts

Leave a Reply

Your email address will not be published. Required fields are marked *