ಡೈರಿಯೇತರ ಪನೀರ್ ತಯಾರಿಕೆ, ಸಂಸ್ಕರಣೆ, ಸಂಗ್ರಹಣೆ, ವಿತರಣೆ, ಸಗಟು ಮತ್ತು ಚಿಲ್ಲರೆ ಮಾರಾಟಕ್ಕೆ ಮಹಾರಾಷ್ಟ್ರ ಸರ್ಕಾರ ಒಂದು ವರ್ಷದ ನಿಷೇಧ ಹೇರಿದ್ದು, ನಿಯಮ ಉಲ್ಲಂಘಿಸಿ ಮಾರಾಟ ಮಾಡಿದರೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಸಾರ್ವಜನಿಕ ಆರೋಗ್ಯದ ಕಾಳಜಿ ಹಾಗೂ ಆಹಾರ ಸುರಕ್ಷತಾ ನಿಯಮಗಳ ವ್ಯಾಪಕ ಉಲ್ಲಂಘನೆಯ ಹಿನ್ನೆಲೆಯಲ್ಲಿ ಡೈರಿ ಹೊರತಾದ ಪನೀರ್ ತಯಾರಿಕೆ ಮತ್ತು ಮಾರಾಟಕ್ಕೆ ನಿಷೇಧ ಹೇರಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ಈ ಆದೇಶ ಉಲ್ಲಂಘಿಸಿದಲ್ಲಿ ಜೀವಾವಧಿ ಶಿಕ್ಷೆ ಹಾಗೂ ಗರಿಷ್ಠ 10 ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ. ಛತ್ತೀಸ್‌ಗಢದ ಬಳಿಕ ಹೀಗೆ ಪನೀರ್ ನಿಷೇಧಿಸಿದ ದೇಶದ ಎರಡನೇ ರಾಜ್ಯ ಮಹಾರಾಷ್ಟ್ರ.
ಹಲವು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕ್ಯಾಟರಿಂಗ್ ಸಂಸ್ಥೆಗಳು ಹಾಗೂ ಇತರ ಆಹಾರ ಸಂಸ್ಥೆಗಳು ಡೈರಿ ಪನೀರ್ ಬದಲಿಗೆ ಬೇರೆ ಪನೀರ್ ಬಳಸುತ್ತಿದ್ದರೂ ಮೆನು, ಬಿಲ್‌ಗಳು ಅಥವಾ ಪ್ರದರ್ಶನ ಫಲಕಗಳಲ್ಲಿ ಗ್ರಾಹಕರಿಗೆ ಈ ಟೈರಿಯೇತರ ಪನೀರ್ ಎಂದರೆ ಹಾಲಿನ ಕೊಬ್ಬಿನ ಬದಲಿಗೆ ಸಸ್ಯಜನ್ಯ ಎಣ್ಣೆಗಳು, ಪಿಷ್ಟ, ಎಮಲ್ಸಿಫೈಯರ್‌ಗಳು ಹಾಗೂ ಇತರ ಸಾಮಗ್ರಿ ಸೇರಿಸಿ ತಯಾರಿಸುವ ಉತ್ಪನ್ನ. ಡೈರಿ ಪನೀರ್‌ಗಿಂತ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದು, ಪ್ರೋಟೀನ್ ಪ್ರಮಾಣ ಕಡಿಮೆ ಇರುತ್ತದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಇಂತಹ ನಿಷೇಧ ಆದೇಶಗಳನ್ನು ಗರಿಷ್ಠ ಒಂದು ವರ್ಷದ ಅವಧಿಗೆ ಜಾರಿಗೊಳಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಗ್ರಾಹಕರಿಗೆ ಮಾಹಿತಿ ನೀಡದೆ ಡೈರಿ ಪನೀರ್ ಎಂದು ಬೇರೆಯದನ್ನು ನೀಡುವುದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಅನ್ಯಾಯದ ವ್ಯಾಪಾರ. ಅಂತಹ ಪ್ರಕರಣಗಳಲ್ಲಿ ದಂಡ ಕ್ರಮ ಕೈಗೊಳ್ಳಲಾಗುವುದು ಎಂದು ಎಫ್‌ಡಿಎ ಎಚ್ಚರಿಸಿದೆ.


