Menu

ಮನೆಯೊಳಗೆ ನುಗ್ಗಿ ಯೂಟ್ಯೂಬರ್‌ನ ಹತ್ಯೆ

ಯೂಟ್ಯೂಬರ್ ಒಬ್ಬರನ್ನು ಮನೆಯೊಳಗೆ ಕೊಲೆ ಮಾಡಿರುವ ಘಟನೆ ಹೈದರಾಬಾದ್‌ನ ಗೋಲ್ಕೊಂಡ ಪ್ರದೇಶದಲ್ಲಿ ನಡೆದಿದೆ.  ಶೈಕ್ ಮಹಬೂಬ್ ಅಲಿಯಾಸ್ ಚಾಂಡಿ ಮಸೂದ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಗೋಲ್ಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ಕುಮಾರ್‌ವಾಡಿಯಲ್ಲಿ ಕೃತ್ಯ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಸೂದ್ ಮಸೀದಿಯಿಂದ ಮನೆಗೆ ಮರಳಿದಾಗ ಜನರ ಗುಂಪೊಂದು ಹಿಂಬಾಲಿಸುತ್ತಿರುವುದನ್ನು ಗಮನಿಸಿದ್ದರು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ. ದಾಳಿಕೋರರು ಅವರ ಮನೆಯೊಳಗೆ ನುಗ್ಗಿ ಹಲವು ಬಾರಿ ಇರಿದಿದ್ದಾರೆ.
ಕೊಲೆಯ ಪ್ರಮುಖ ಆರೋಪಿ ಶೇಕ್ ಸೊಹೈಲ್, ಮಸೂದ್‌ನ ಪತ್ನಿಯ ಸಹೋದರ. ಅಫು ಮತ್ತು ಜಬೀರ್ ಸಹಚರರು ಎಂದು ಪೊಲೀಸರು ತಿಳಿಸಿದ್ದಾರೆ. ಅರೋಪಿಗಳು ಹಲ್ಲೆಗೆ ಕಬ್ಬಿಣದ ರಾಡ್‌ಗಳು ಮತ್ತು ಜಿಮ್ ಉಪಕರಣಗಳನ್ನು ಬಳಸಿದ್ದಾರೆ.

ಕೌಟುಂಬಿಕ ಕಲಹಗಳೇ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮಸೂದ್ ಒಂದೂವರೆ ವರ್ಷದ ಹಿಂದೆ ಕುಟುಂಬ ಸದಸ್ಯರ ವಿರೋಧದ ನಡುವೆ ಪ್ರೇಮ ವಿವಾಹವಾಗಿದ್ದು, ಒಂದು ಮಗುವಿದೆ.
ಪೊಲೀಸರು ತನಿಖೆ ಮುಂದುವರಿಸಿದ್ದಾರೆಂದು ಎಂದು ಹೆಚ್ಚುವರಿ ಡಿಸಿಪಿ ಕೃಷ್ಣ ಗೌಡ್ ಹೇಳಿದ್ದಾರೆ.

ಗುಂಡು ಹಾರಿಸಿ ಜಿಮ್‌ ಮಾಲೀಕನ ಹತ್ಯೆ

ಹರಿಯಾಣದಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರು ಬೈಕ್‌ನಲ್ಲಿ ಬಂದು ಜಿಮ್‌ ಮಾಲೀಕನೊಬ್ಬನನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಕಪಿಲ್ ಕೊಲೆಯಾದ ವ್ಯಕ್ತಿ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ತಾವೇ ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದೆ.

ಹನ್ಸಿಯ ಫವ್ವಾರಾ ಚೌಕ್ ಬಳಿ ಘಟನೆ ನಡೆದಿದೆ. ಕಪಿಲ್ ಜಿಮ್ ಬಳಿ ಯುವಕ, ಯುವತಿಯರಿಗೆ ತರಬೇತಿ ನೀಡುತ್ತಿದ್ದಾಗ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದ ಕಿಡಿಗೇಡಿಗಳು ಗುಂಡು ಹಾರಿಸಿದ್ದಾರೆ. ತಲೆಗೆ ಗುಂಡು ತಾಗಿ ತೀವ್ರವಾಗಿ ಗಾಯಗೊಂಡಿದ್ದ ಕಪಿಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Related Posts

Leave a Reply

Your email address will not be published. Required fields are marked *