ಮಂಡ್ಯದ ನೆಹರು ನಗರದಲ್ಲಿ ಒಂದೇ ಕುಟುಂಬದ ಮೂವರು ನಿಗೂಢವಾಗಿ ಮೃತಪಟ್ಟಿದ್ದು, ತಂದೆ ನೇಣಿ ಬಿಗಿದುಕೊಂಡಿದ್ದರೆ, ತಾಯಿ ಮತ್ತು ಮಗ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಪ್ರಭಾಕರ್ (ತಂದೆ), ಜ್ಯೋತಿ (ತಾಯಿ) ಮತ್ತು ಸಂತೋಷ್ (ಪುತ್ರ) ಎಂದು ಗುರುತಿಸಲಾಗಿದೆ.
ಜ್ಯೋತಿ ಮತ್ತು ಅವರ ಪುತ್ರ ಸಂತೋಷ್ ಮೃತಪಟ್ಟ ಸ್ಥಿತಿಯಲ್ಲಿ ಮನೆಯಲ್ಲಿ ಪತ್ತೆಯಾದ ಬಳಿಕ ಪ್ರಭಾಕರ್ ತಮ್ಮ ಬಟ್ಟೆ ಅಂಗಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜ್ಯೋತಿ ಮತ್ತು ಸಂತೋಷ್ ಅವರು ವಿಷ ಸೇವಿಸಿ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ. ಪ್ರಭಾಕರ್ ಸಣ್ಣ ಬಟ್ಟೆ ಅಂಗಡಿ ನಡೆಸುತ್ತಿದ್ದರು.
ಸಾಮಾನ್ಯವಾಗಿ ಶಾಂತ ಸ್ವಭಾವದವರಾಗಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಪತ್ನಿ ಮತ್ತು ಮಗನ ಸಾವಿನ ಆಘಾತವನ್ನು ಸಹಿಸಲಾರದೇ ಪ್ರಭಾಕರ್ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಅಥವಾ ಬೇರೆಕಾರಣ ಇರಬಹುದೇ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಮೊಬೈಲ್ ಫೋನ್, ಮನೆಯಲ್ಲಿನ ಪತ್ರಗಳು, ಕುಟುಂಬದ ಹಣಕಾಸಿನ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


