ಕನಕಪುರ ನಗರದ ಮಹದೇಶ್ವರ ಬಡಾವಣೆಯಲ್ಲಿ ಎರಡು ದಿನಗಳ ಹಿಂದೆ ವೈದ್ಯರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಎರಡು ದಿನಗಳ ಬಳಿಕ ಅವರ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಮಹಿಳೆ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನವೋದಯ ಆಸ್ಪತ್ರೆಯ ನರ್ಸ್ ಸರಸ್ವತಿ (45) ಆತ್ಮಹತ್ಯೆ ಮಾಡಿಕೊಂಡ ನರ್ಸ್, ಎರಡು ದಿನಗಳ ಹಿಂದೆ ಕೌಟುಂಬಿಕ ಕಲಹದಿಂದ ಕನಕಪುರ ನವೋದಯ ಆಸ್ಪತ್ರೆ ವೈದ್ಯ ಚೇತನ್ ಟೆಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಡಾ.ಚೇತನ್ ಅವರ ಆಸ್ಪತ್ರೆಯಲ್ಲಿ ಕೆಲವು ವರ್ಷಗಳಿಂದ ನರ್ಸ್ ಸರಸ್ವತಿ ಕೆಲಸ ಮಾಡಿಕೊಂಡಿದ್ದರು.
ಎರಡು ದಿನಗಳ ಹಿಂದೆ ವೈದ್ಯರ ಮನೆಯಲ್ಲಿ ಜಗಳ ನಡೆದಿತ್ತು, ಬಳಿಕ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಎರಡು ದಿನದ ನಂತರ ನರ್ಸ್ ಆತ್ಮಹತ್ಯೆ ಮಾಡಿಕೊಂಡುರುವುದು ಹಲವು ಅನುಮಾನಗಳು, ಚರ್ಚೆಗಳಿಗೆ ಕಾರಣ ವಾಗಿದೆ. ವೈದ್ಯ ಮತ್ತು ನರ್ಸ್ ಮಧ್ಯೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


