ಲೈಂಗಿಕ ಹಗರಣದ ವಿಡಿಯೋ ಅಸಲಿ ಎಂದು ವರದಿ ಬಂದಿದ್ದರೂ, ಕಾಮುಕ ಅಧಿಕಾರಿಯನ್ನು ರಕ್ಷಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ನ್ಯಾಯದ ಮೇಲೆ ನಂಬಿಕೆ ಇಲ್ಲದಂತಾಗಿದೆ. ಪೊಲೀಸ್ ಮಹಾನಿರ್ದೇಶಕ (DGP) ಶ್ರೇಣಿಯ ಅಧಿಕಾರಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಾಗ, ಅದನ್ನು ಗಂಭೀರವಾಗಿ ಪರಿಗಣಿಸಬೇಕಾದ ರಾಜ್ಯ ಸರ್ಕಾರ, ಅವರ ಅಮಾನತು ಆದೇಶವನ್ನೇ ಹಿಂಪಡೆದು ರೆಡ್ ಕಾರ್ಪೆಟ್ ಸ್ವಾಗತ ನೀಡಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಕಿಡಿ ಕಾರಿದ್ದಾರೆ.
ಸಿಎಂ @siddaramaiah ನವರೇ ಹಾಗೂ ಗೃಹ ಸಚಿವ @DrParameshwara ಅವರೇ, ನಿಮ್ಮ ಸರ್ಕಾರದ ಈ ನಡೆಯ ಹಿಂದಿನ ಮರ್ಮವೇನು? ಸಾಕ್ಷಿ ಇದ್ದರೂ ಸಲಾಮು ಹೊಡೆಯುತಿರುವುದೇಕೆ? ವಿಡಿಯೋ ಅಸಲಿ ಎಂದು ತಮ್ಮ ಸರ್ಕಾರವೇ ನೇಮಿಸಿದ ಸಮಿತಿ ವರದಿ ನೀಡಿದ ಮೇಲೂ ಆರೋಪಿತ ಅಧಿಕಾರಿಗೆ ಕ್ಲೀನ್ ಚಿಟ್ ಕೊಡುವ ಧಾವಂತವೇಕೆ ಎಂದು ಪ್ರಶ್ನಿಸಿದ್ದಾರೆ.
ಹೆಣ್ಣು ಮಕ್ಕಳ ಮಾನಕ್ಕಿಂತಲೂ ಭ್ರಷ್ಟ ಅಧಿಕಾರಿಗಳ ರಕ್ಷಣೆಯೇ ಕಾಂಗ್ರೆಸ್ ಸರ್ಕಾರಕ್ಕೆ ಮುಖ್ಯವಾಯಿತೇ?
ಲೈಂಗಿಕ ಹಗರಣದ ವಿಡಿಯೋ ಅಸಲಿ ಎಂದು ವರದಿ ಬಂದಿದ್ದರೂ, ಕಾಮುಕ ಅಧಿಕಾರಿಯನ್ನು ರಕ್ಷಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ನ್ಯಾಯದ ಮೇಲೆ ನಂಬಿಕೆ ಇಲ್ಲದಂತಾಗಿದೆ. ಪೊಲೀಸ್ ಮಹಾನಿರ್ದೇಶಕ (DGP) ಶ್ರೇಣಿಯ ಅಧಿಕಾರಿಯೊಬ್ಬರ ಮೇಲೆ ಲೈಂಗಿಕ… pic.twitter.com/zzHyYMp3uw
— R. Ashoka (@RAshokaBJP) May 7, 2026
ಕಾನೂನಿಗಿಂತ ವ್ಯಕ್ತಿ ದೊಡ್ಡವರೇ? ನಿವೃತ್ತಿಯ ಹೊಸ್ತಿಲಲ್ಲಿರುವ ಅಧಿಕಾರಿಗೆ ಇಷ್ಟು ಆತುರವಾಗಿ ‘ರಿಲೀಫ್’ ನೀಡುವ ಮೂಲಕ ನೀವು ಸಂತ್ರಸ್ತ ಮಹಿಳೆಯರಿಗೆ ಯಾವ ಸಂದೇಶ ನೀಡುತ್ತಿದ್ದೀರಿ? ಇದೇನಾ ಕಾಂಗ್ರೆಸ್ ಪಕ್ಷದ ನೈತಿಕತೆ? ಮಹಿಳಾ ಸಬಲೀಕರಣದ ಬಗ್ಗೆ ಗಂಟೆಗಟ್ಟಲೆ ಭಾಷಣ ಮಾಡುವ ನಿಮ್ಮ @INCKarnataka ನಾಯಕರಿಗೆ, ಈ ನಿರ್ಧಾರದಿಂದ ಮಹಿಳೆಯರಿಗೆ ಮಾಡುತ್ತಿರುವ ಅವಮಾನ ಕಾಣುತ್ತಿಲ್ಲವೇ ಎಂದು ಕೇಳಿದ್ದಾರೆ.
ಒಬ್ಬ ಅಧಿಕಾರಿಯನ್ನ ರಕ್ಷಿಸಲು ಕಾನೂನನ್ನೇ ಗಾಳಿಗೆ ತೂರುತ್ತಿರುವ ಈ ಸರ್ಕಾರಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಕಾಮುಕರಿಗೆ ರಕ್ಷಣೆ ನೀಡುವ ಈ ವಿಕೃತ ಮನಸ್ಥಿತಿಯನ್ನು ಕರ್ನಾಟಕದ ಜನತೆ ಕ್ಷಮಿಸುವುದಿಲ್ಲ. ಅಧಿಕಾರಕ್ಕೆ ಕುತ್ತು ಬರುವ ಭಯವೋ ಅಥವಾ ಒಳಗುಟ್ಟಿನ ರಕ್ಷಣೆಯೋ? ಕಾಂಗ್ರೆಸ್ ಸರ್ಕಾರ ಉತ್ತರ ನೀಡಲಿ ಎಂದಿದ್ದಾರೆ.


