Menu

ಬಾಗಲಕೋಟೆ ಉಪಚುನಾವಣೆ: ಕಾಂಗ್ರೆಸ್‌ನ ಉಮೇಶ್ ಮೇಟಿ ಗೆಲುವು

ಹೆಚ್​​.ವೈ. ಮೇಟಿ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಉಮೇಶ್ ಮೇಟಿ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರವನ್ನು ಮರಳಿ ಕಾಂಗ್ರೆಸ್​ ತೆಕ್ಕೆಗೆ ಪಡೆದುಕೊಂಡಿದೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಸೋಲು ಕಂಡಿದ್ದಾರೆ.

ಮೇಟಿ ನಿಧನದ ಹಿನ್ನೆಲೆ ಅವರ ಕುಟುಂಬಕ್ಕೇ ಟಿಕೆಟ್​​ ನೀಡಲು ನಿರ್ಧರಿಸಿಕಾಂಗ್ರೆಸ್,​​ ಮೇಟಿ ಪುತ್ರ ಉಮೇಶ್​​​​ರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಬಿಜೆಪಿಯ ವೀರಣ್ಣ ಚರಂತಿಮಠ್​​ಗೆ ಒಟ್ಟು 76,075 ಮತ, ಕಾಂಗ್ರೆಸ್​​ ಅಭ್ಯರ್ಥಿ ಉಮೇಶ್​​ ಮೇಟಿ ಪರ 97,941 ಮತ ಲಭಿಸಿವೆ. 21,866 ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯ ಗಳಿಸಿದಂತಾಗಿದೆ.

ಹಿಂದಿನ ಚುನಾವಣೆಗಳಲ್ಲಿ ಬಾಗಲಕೋಟೆ ಕ್ಷೇತದಲ್ಲಿ ಆಭ್ಯರ್ಥಿಗಳು ಪಡೆದಿದ್ದ ಲೀಡ್ ದಾಖಲೆಯನ್ನು ಉಮೇಶ್​​ ಮೇಟಿ ಮುರಿದಿದ್ದಾರೆ. 2018ರಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ 15,934 ಮತಗಳ ಅಂತರದ ಗೆಲುವೇ ಕ್ಷೇತ್ರದಲ್ಲಿ ಈವರೆಗಿನ ಅತಿದೊಡ್ಡ ಮತಗಳ ಅಂತರವಾಗಿತ್ತು.

ಬಾಗಲಕೋಟೆ ಉಪಚುನಾವಣೆಯಲ್ಲಿ ಉಮೇಶ್ ಮೇಟಿ ಜಯಭೇರಿ ಸಂಬಂಧ ಸಹೋದರ ಮಲ್ಲಿಕಾರ್ಜುನ ಮೇಟಿ ಜೊತೆ ಸಂತಸ ಹಂಚಿಕೊಂಡಿದ್ದಾರೆ. ನಮ್ಮ ತಂದೆ ಕೈ ಹಿಡಿದಿದ್ದ ಜನರು ಈಗ ನಮ್ಮ ಕೈಯನ್ನೂ ಹಿಡಿದಿದ್ದಾರೆ. ಸಿಎಂ, ಸಚಿವರು ಮತ್ತು ಮತದಾರರಿಗೆ ಧನ್ಯವಾದ ಎಂದು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *