Menu

ಇರಾನ್‌-ಅಮೆರಿಕ ಸಂಘರ್ಷ: ಎರಡನೆ ಸುತ್ತು ಮಾತುಕತೆಯೂ ನಿಷ್ಫಲ?

ಪಾಕಿಸ್ತಾನವೀಗ  ಸಂಧಾನದ ಬಾಗಿಲು ತೆರೆದು ಕುಳಿತಿರುವುದು ನೋಡಿದರೆ ಈ ದೇಶದ ಬಳಿ, ಯಾವ ಬಗೆಯ ಸಂಧಾನದ ಸೂತ್ರಗಳಿವೆ ಎಂಬ ಕುತೂಹಲ ಮೂಡಿಸಿದೆ. ಬಿಗಿಪಟ್ಟು ಹಿಡಿದಿರುವ ಇರಾನ್ ದೇಶವನ್ನು ಸಂಧಾನದ ಮಾರ್ಗಕ್ಕೆ ಕರೆದೊಯ್ಯುವ ಜಾಣನಡೆ ಪಾಕ್ ಪಾಲಿಗೆ ಅಷ್ಟೇನೋ ಸುಲಭದ ಕೆಲಸವಲ್ಲ.

ಪಾಕಿಸ್ತಾನದಲ್ಲಿ ಎರಡನೆ ಸುತ್ತಿನ ಶಾಂತಿಸಂಧಾನದ ಮಾತುಕತೆ ಆರಂಭದಲ್ಲಿಯೇ ಎಡವಿದೆ. ಪಾಕ್ ಮಧ್ಯಸ್ತಿಕೆಯಲ್ಲಿ ಈ ಸಂಧಾನಕ್ಕೆ ಇಸ್ಲಾಮಾಬಾದ್ ವೇದಿಕೆಯಾಗಿದ್ದರೂ, ಇರಾನ್ ಇಗ ವಿಧಿಸಿರುವ ಬಿಗಿ ಷರತ್ತು ಪಾಕ್ ಅನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ. ಒಂದು ಕಡೆ ಸಂಧಾನದ ಮಾತುಕತೆಗೆ ಸಜ್ಜಾದ ವೇದಿಕೆ. ಮತ್ತೊಂದು ಕಡೆ ಹರ್ಮೂಜ್ ಜಲಸಂಧಿಯ ಬಳಿ ಉದ್ವಿಗ್ನ ವಾತಾವರಣ. ಭಾರತದ ಹಡಗುಗಳ ಮೇಲೆ ಕೂಡಾ ಇರಾನ್ ಗುಂಡಿನ ದಾಳಿ.

ಇರಾನ್‌ಮೊದಲ ಸುತ್ತಿನ ಮಾತುಕತೆಗೆ ವಿಧಿಸಿದ್ದ ಪ್ರಮುಖ ಷರತ್ತುಗಳನ್ನೆ ಮತ್ತೆ ಒತ್ತಿ ಹೇಳಿದೆ. ಇರಾನ್ ದೇಶದ ಶಾಲಾ ಮಕ್ಕಳ ಘೋರ ಹತ್ಯೆಯನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಅಮೆರಿಕ ಒಪ್ಪಿಕೊಳ್ಳುವುದು, ಕಾಯಂ ಆಗಿ ತಮ್ಮ ದೇಶದ ಮೇಲೆ ಅಕ್ರಮಣ ನಡೆಸದಂತೆ ಒಪ್ಪಂದ ಮಾಡಿಕೊಳ್ಳುವುದು. ಹರ್ಮುಜ್ ಜಲಸಂಧಿ  ಮೇಲೆ ತನಗಿರುವ ಅಧಿಕಾರವನ್ನು (ಟೋಲ್ ಶುಲ್ಕ) ಯಾರೂ ಪ್ರಶ್ನಿಸದಂತಿರುವುದು, ಯುದ್ಧದಿಂದ ತನಗೆ ಇದುವರೆಗೆ ಆಗಿರುವ ಎಲ್ಲ ಬಗೆಯ ನಷ್ಟವನ್ನು ಅಮೆರಿಕ ಪರಿಹಾರ  ನೀಡುವುದು. ಇದಲ್ಲದೆ ತನ್ನ ಬಳಿಯಿರುವ ಯುರೇನಿಯಂ ಅನ್ನು ಅಮೆರಿಕಕ್ಕೆ ಒಪ್ಪಿಸುವ ಪ್ರಮೇಯವೇ ಇಲ್ಲ ಎಂದು ಇರಾನ್ ಹೇಳಿರುವುದು ಅತಿ ಪ್ರಮುಖ . ಇಷ್ಟೆಲ್ಲ ಷರತ್ತು ಅಮೆರಿಕ ಒಪ್ಪುವುದು ಕಷ್ಟ ಎಂಬುದು ಮಧ್ಯಸ್ತಿಕೆ ವಹಿಸಿರುವ ಪಾಕಿಸ್ಥಾನಕ್ಕೂ ಗೊತ್ತಿರುವ ವಿಚಾರ .

ಪಾಕಿಸ್ತಾನವೀಗ ಸಂಧಾನದ ಬಾಗಿಲು ತೆರೆದು ಕುಳಿತಿರುವುದು ನೋಡಿದರೆ ಈ ದೇಶದ ಬಳಿ, ಯಾವ ಬಗೆಯ ಸಂಧಾನದ ಸೂತ್ರಗಳಿವೆ ಎಂಬ ಕುತೂಹಲ ಮೂಡಿಸಿದೆ. ಬಿಗಿಪಟ್ಟು ಹಿಡಿದಿರುವ ಇರಾನ್ ದೇಶವನ್ನು ಸಂಧಾನದ ಮಾರ್ಗಕ್ಕೆ ಕರೆದೊಯ್ಯುವ ಜಾಣನಡೆ ಪಾಕ್ ಪಾಲಿಗೆ ಅಷ್ಟೇನೋ ಸುಲಭವಲ್ಲ ಎಂಬುದು ವಾಸ್ತವ, ಎರಡನೆ ಸುತ್ತು ಮಾತುಕತೆ ಮತ್ತು ಸಂಧಾನ ಸಭೆ ಯಶಸ್ವಿಯಾದರೆ ತಾನೇ ಇಸ್ಲಾಮಾಬಾದ್‌ಗೆ ತೆರಳುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ ಇದು ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತಿದೆ ! ಇಬ್ಬರ ಮಾತುಕತೆಗೇ ಇನ್ನೂ ಸರಿಯಾದ ವೇದಿಕೆಯೇ ಇಲ್ಲದಿರುವಾಗ ಮತ್ತು ಇದಕ್ಕೆ ಸರಿಯಾದ ಚಾಲನೆ ದೊರೆಯದಿರುವಾಗ ಟ್ರಂಪ್ ಆಗಲೇ ಅತಿ ಆತ್ಮವಿಶ್ವಾಸದ ಮಾತುಗಳನ್ನು ಆಡಿರುವುದು ಸೋಜಿಗ.

ಮೊದಲ ಸುತ್ತಿನ ಮಾತುಕತೆಯ ಸಮಯದಲ್ಲಿಯೇ ಇರಾನ್ ಮತ್ತು ಅಮೆರಿಕ ದೇಶಗಳ ಪ್ರತಿನಿಧಿಗಳ ನಡುವೆ ಮುಖಾಮುಖಿ ಸಾಧ್ಯವಾಗಿಲ್ಲ. ಎರಡನೆ ಸುತ್ತಿನ ಮಾತುಕತೆಯಲ್ಲಿ ಸಾಧ್ಯವಾಗುವುದೆಂಬ ನಂಬಿಕೆ ಇಲ್ಲ. ಇದೇ ಪಾಕ್ ಮಧ್ಯವರ್ತಿಗಳ ಮುಂದಿರುವ ಅತಿ ದೊಡ್ಡ ಸವಾಲು. ಯುದ್ದಗಳ ಆರಂಭಕ್ಕೆ ಮುನ್ನ ಅವುಗಳಿಗೆ ಲಂಗೂ ಲಗಾಮು ಇಲ್ಲ. ಆದರೆ ಇದು ಒಮ್ಮೆ ಆರಂಭವಾದ ಮೇಲೆ ವಾಸ್ತವಿಕವಾಗಿ ತಲೆಯೆತ್ತುವ ಸಮಸ್ಯೆಗಳಿಗೆ ಸಮಚಿತ್ತ ಪರಿಹಾರ ಹುಡುಕುವುದು ಅತಿ ಕಷ್ಟಕರವೇ. ಕೆಲವಾದರೂ ಒಪ್ಪಂದ ಪಾಕ್ ನೆಲದಲ್ಲಿ ಉಭಯ ದೇಶಗಳಿಗೆ ಒಪ್ಪಿತವಾದರೆ ಅದೊಂದು ದೊಡ್ಡ ಸಾಧನೆಯೇ ಸರಿ.

Related Posts

Leave a Reply

Your email address will not be published. Required fields are marked *