ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಸ್ರೋ 100ನೇ ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇಂದು ಬೆಳಗ್ಗೆ 6:23ಕ್ಕೆ ಜಿಎಸ್‌ಎಲ್‌ವಿ-ಎಫ್ 15 ರಾಕೆಟ್ ಮೂಲಕ ಎನ್‌ವಿಎಸ್-02 ಉಪಗ್ರಹವನ್ನು ಉಡಾವಣೆ ಮಾಡಿದೆ.
ಸ್ವದೇಶಿ ನಿರ್ಮಿತ ಕ್ರಯೋಜನಿಕ್ ಎಂಜಿನ್ ಹೊಂದಿರುವ ಜಿಯೋಸಿಂಕ್ರೋನಸ್ ಉಪಗ್ರಹ ಉಡ್ಡಯನ ವಾಹನ(ಜಿಎಸ್‌ಎಲ್‌ವಿ)ದ 17ನೇ ಉಡ್ಡಯನ ಇದಾಗಿದೆ. ಈ ಉಪಗ್ರಹವು ನ್ಯಾವಿಗೇಷನ್ ಸೆಟಲೈಟ್ ಎನ್‌ವಿಎಸ್-02ವನ್ನು ನಭಕ್ಕೆ ಹೊತ್ತೊಯ್ದಿದೆ.
ಈ ಎನ್‌ವಿಎಸ್ ಸ್ಯಾಟಲೈಟ್ ಭಾರತದ ನ್ಯಾವಿಗೇಷನ್(ಸ್ವದೇಶಿ ಜಿಪಿಎಸ್) ಉಪಗ್ರಹಗಳ ಜಾಲದ ಎರಡನೇ ತಲೆಮಾರಿನ ಉಪಗ್ರಹ. ಇದು ಭಾರತೀಯ ಉಪಖಂಡ(ಜತೆಗೆ ಅದರಾಚೆಗಿನ 1500 ಕಿ.ಮೀ. ದೂರದವರೆಗೆ)ದ ಬಳಕೆದಾರರಿಗೆ ನಿಖರ ಸಮಯ, ಸ್ಥಾನ ಮತ್ತು ವೇಗವನ್ನು ನೀಡುವ ಗುರಿ ಒಳಗೊಂಡಿದೆ.
ಈ ಎನ್‌ವಿಎಸ್-02 ಉಪಗ್ರಹವನ್ನು ಯು.ಆರ್.ಸ್ಯಾಟಲೈಟ್ ಸೆಂಟರ್ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಿದೆ. 2,250 ಕೆ.ಜಿ.ಭಾರವಿದ್ದು, ಎಲ್1, ಎಲ್5 ನ್ಯಾವಿಗೇಷನ್ ಪೇ ಲೋಡ್ ಮತ್ತು ಸಿ ಬ್ಯಾಂಡ್ ಜೊತೆಗೆ ಹೆಚ್ಚುವರಿಯಾಗಿ ಎಸ್ ಬ್ಯಾಂಡ್‌ಗಳನ್ನು ಹೊಂದಿದೆ. ಈ ಉಪಗ್ರಹವು ಭೂಮಿ, ವಾಯು ಮತ್ತು ಸಾಗರ ಸಂಚಾರ, ಕೃಷಿ, ನೌಕೆಗಳ ನಿರ್ವಹಣೆ, ಮೊಬೈಲ್ ಲೊಕೇಷನ್ ಆಧಾರಿತ ಸೇವೆಗಳು, ಸ್ಯಾಟಲೈಟ್‌ಗಳ ಕಕ್ಷೆಯ ನಿರ್ಧಾರ, ಇಂಟರ್ನೆಟ್ ಆಫ್ ಥಿಂಗ್ಸ್ ಆಧಾರಿತ ಅಪ್ಲಿಕೇಷನ್‌ಗಳು, ತುರ್ತು ಮತ್ತು ಸಮಯಾಧಾರಿತ ಸೇವೆಗಳಿಗೆ ನೆರವು ನೀಡಲಿದೆ.