Menu

ಗಂಡನ ಕೊಲೆಗೈದು ಆತನ ಜೇಬಲ್ಲಿಟ್ಟಳು ವಯಾಗ್ರ ಪ್ಯಾಕ್‌

ಕಾನ್ಪುರದಲ್ಲಿ ಮಹಿಳೆಯೊಬ್ಬಳು ಪ್ರಿಯಕರನ ಸಹಾಯದಿಂದ ಗಂಡನನ್ನು ಕೊಲೆ ಮಾಡಿ, ಗಂಡನ ಶರ್ಟ್‌ ಜೇಬಿನಲ್ಲಿ 8 ವಯಾಗ್ರ ಪ್ಯಾಕ್​ಗಳನ್ನು ಇಟ್ಟು, ಈ ಮಾತ್ರೆಗಳ ಮಿತಿಮೀರಿದ ಸೇವನೆಯಿಂದ ಸತ್ತಿದ್ದಾನೆ ಎಂದು ಬಿಂಬಿಸಿದ್ದಳು. ಪೊಲೀಸರು ಸತ್ಯ ಎಂದು ನಂಬಿದ್ದರು. ಶವಪರೀಕ್ಷೆಯ ವರದಿ ಬಂದಾಗ ಆತ ಸತ್ತಿದ್ದು ಕತ್ತು ಹಿಚುಕಿದ್ದರಿಂದ ಎಂಬುದು ಬಯಲಾಗಿದೆ.

ಅಬಿದ್ ಅಲಿ ಎಂಬಾತ ಪತ್ನಿ ಶಬಾನಾ ಮತ್ತು ಮಗನೊಂದಿಗೆ ಕಾನ್ಪುರದಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಶಬಾನಾ ಪೊಲೀಸ್ ಠಾಣೆಗೆ ಹೋಗಿ ಪತಿ ವಯಾಗ್ರದ ಮಿತಿಮೀರಿದ ಸೇವನೆಯಿಂದ ಸತ್ತಿದ್ದಾಗಿ ಪೊಲೀಸರಿಗೆ ತಿಳಿಸಿದ್ದಳು. ಪೊಲೀಸರು ಪರಿಶೀಲಿಸಿದಾಗ ಮೃತ ಅಬಿದ್‌ನ ಜೇಬಿನಲ್ಲಿ 8 ಪ್ಯಾಕೆಟ್ ವಯಾಗ್ರ ಮಾತ್ರೆಗಳು ಕಂಡುಬಂದವು. ಅಬಿದ್‌ನ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡುಬಂದಿರಲಿಲ್ಲ. ಶಬಾನಾ ಸತ್ಯವನ್ನು ಹೇಳುತ್ತಿದ್ದಾಳೆ ಎಂದು ಪೊಲೀಸರು ಭಾವಿಸಿದ್ದರು.

ಶವಪರೀಕ್ಷೆಯ ವರದಿ ಬಂದಾಗ, ಅಬಿದ್‌ನ ಸಾವಿಗೆ ಕಾರಣ ಕತ್ತು ಹಿಸುಕಿರುವುದು ಎಂದು ತಿಳಿದುಬಂದಿದೆ. ಪೊಲೀಸರು ತನಿಖೆ ಪ್ರಾರಂಭಿಸಿ ಶಬಾನಾಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲು ಪ್ರಾರಂಭಿಸಿ ಆಕೆಯ ಫೋನ್ ಕಾಲ್ ದಾಖಲೆಗಳನ್ನು ಪರಿಶೀಲಿಸಿದರು. ಅವಳು ರೆಹಾನ್ ಎಂಬ ಯುವಕನೊಂದಿಗೆ ಮಾತನಾಡಿದ್ದಾಳೆಂದು ಪೊಲೀಸರಿಗೆ ತಿಳಿದುಬಂದಿತು. ಅಬಿದ್ ಸತ್ತಾಗಲೂ ಇಬ್ಬರೂ ಮಾತನಾಡಿದ್ದರು. ನಂತರ ಪೊಲೀಸರು ರೆಹಾನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಇಬ್ಬರೂ ಸೇರಿ ಅಬಿದ್ ನನ್ನು ಕೊಂದಿದ್ದಾಗಿ ಒಪ್ಪಿಕೊಂಡರು. ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಶಬಾನಾ ಮತ್ತು ರೆಹಾನ್ದ 1 ವರ್ಷದಿಂದ ಸಾಮಾಜಿಕ ಮಾಧ್ಯಮದಲ್ಲಿ ಸ್ನೇಹಿತರಾಗಿದ್ದರು. ರೆಹಾನ್ ಉನ್ನಾವೊದ ಬಂಗಾರಮೌ ನಿವಾಸಿ. ಇಬ್ಬರೂ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದರು. ಈ ಬಗ್ಗೆ ಅಬಿದ್ ಮತ್ತು ಶಬಾನಾ ನಡುವೆ ವಾದ ಪ್ರಾರಂಭವಾಯಿತು. ಬೇಸತ್ತ ಶಬಾನಾ ಮತ್ತು ರೆಹಾನ್ ಅಬಿದ್​ನನ್ನು ಕೊಲೆ ಮಾಡಲು ಸಂಚು ರೂಪಿಸಿದರು. ಅಬಿದ್ ಕೊಲೆಯಾದ ದಿನ ಶಬಾನಾ ರೆಹಾನ್ ಮತ್ತು ಅವನ ಇನ್ನೊಬ್ಬ ಸ್ನೇಹಿತ ವಿಕಾಸ್​ನನ್ನು ಮನೆಗೆ ಕರೆಸಿದ್ದಳು. ಆ ಮೂವರು ಸೇರಿ ಅಬಿದ್ ನನ್ನು ಕತ್ತು ಹಿಸುಕಿ ಕೊಂದರು. ನಂತರ ಶಬಾನಾ ಅಬಿದ್​ನ ಜೇಬಿನಲ್ಲಿ ವಯಾಗ್ರ ಮಾತ್ರೆಗಳ ಪ್ಯಾಕೆಟ್​ಗಳನ್ನು ಇಟ್ಟು ಅತಿಯಾದ ಮಾತ್ರೆಗಳ ಸೇವನೆಯಿಂದ ನಡೆದ ಆಕಸ್ಮಿಕ ಸಾವು ಎಂದು ನಂಬಿಸಿದ್ದಳು.

Related Posts

Leave a Reply

Your email address will not be published. Required fields are marked *