Thursday, January 30, 2025
Menu

ಅಕ್ರಮ ಪಂಪ್ ಸೆಟ್‌ಗಳನ್ನು ಸಕ್ರಮವೆಂದು ಘೋಷಿಸಿದ ಇಂಧನ ಸಚಿವ ಜಾರ್ಜ್

ರಾಜ್ಯದ ರೈತರಿಗೆ ಸರ್ಕಾರದ ಕಡೆಯಿಂದ ಇದೊಂದು ಸಿಹಿ ಸುದ್ದಿ. 2.5 ಲಕ್ಷ ಅಕ್ರಮ ಪಂಪ್ ಸೆಟ್‌ಗಳನ್ನು ಸಕ್ರಮ ಎಂದು ಇಂಧನ ಇಲಾಖೆ ಘೋಷಿಸಿದೆ. ವಿಜಯಪುರದಲ್ಲಿ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಸಚಿವ ಕೆಜೆ ಜಾರ್ಜ್ ಈ ಮಾಹಿತಿ ನೀಡಿದ್ದಾರೆ.

ಇಂಧನ ಇಲಾಖೆಯಿಂದ 2.5 ಲಕ್ಷ ಅಕ್ರಮ ಪಂಪ್ ಸೆಟ್‌ಗಳನ್ನು ಸಕ್ರಮಗೊಳಿಸಲಾಗಿದ್ದು, ಬಾಕಿ ಇರುವ 2 ಲಕ್ಷ ಪಂಪ್ ಸೆಟ್‌ಗಳು ಇನ್ನೊಂದು ವರ್ಷದಲ್ಲಿ ಸಕ್ರಮಗೊಳ್ಳಲಿದೆ. ಅಕ್ರಮ ಪಂಪ್ ಸೆಟ್‌ಗಳ ಸಕ್ರಮ ಯೋಜನೆ 2004ರಿಂದಲೇ ಜಾರಿಯಲ್ಲಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಯೋಜನೆಯಡಿ 4.5 ಲಕ್ಷ ಅರ್ಜಿ ಬಾಕಿ ಇದ್ದವು. 2.5 ಲಕ್ಷ ಪಂಪ್ ಸೆಟ್‌ಗಳನ್ನು ಸಕ್ರಮಗೊಳಿಸಲಾಗಿದೆ. ಬಾಕಿ ಉಳಿದ ಅರ್ಜಿಗಳನ್ನು ಇತ್ಯರ್ಥಗೊಳಿಸಿದ ಬಳಿಕ ಹೊಸದಾಗಿ ಬಂದ ಅರ್ಜಿಗಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಾರ್ಜ್‌ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *