ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಬೆಳಗಾವಿಯ ಕಪಿಲೇಶ್ವರ ದೇಗುಲದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಭಾನುವಾರ ಪೂಜೆ ಸಲ್ಲಿಸಿದರು.
ಈ ವೇಳೆ ಕ್ಷೀರಾಭಿಷೇಕದ ಭಾಗವಾಗಿ ಕಪಿಲೇಶ್ವರ ದೇವರಿಗೆ 111 ಲೀಟರ್ ಹಾಲು ಸಮರ್ಪಿಸಿದರು. ಪೂಜೆ, ಪ್ರಾರ್ಥನೆ ಮುಗಿಸಿದ ಬಳಿಕ ಡಿಕೆಶಿ ಹನುಮಾನ್ ನಗರದಲ್ಲಿರುವ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಫಿರೋಜ್ ಸೇಠ್ ಅವರ ನಿವಾಸಕ್ಕೆ ತೆರಳಿ ಉಪಾಹಾರ ಸೇವಿಸಿದರು. ಸಚಿವ ಡಾ ಎಂ ಸಿ ಸುಧಾಕರ್, ಶಾಸಕ ಅಸೀಫ್ ಸೇಠ್, ಎಂಎಲ್ಸಿಗಳಾದ ಎಸ್ ರವಿ, ಚನ್ನರಾಜ ಹಟ್ಟಿಹೊಳಿ ಹಾಗೂ ದುಂತೂರು ವಿಶ್ವನಾಥ್, ಮೃಣಾಳ್ ಹೆಬ್ಬಾಳ್ಕರ್ ಈ ವೇಳೆ ಜತೆಗಿದ್ದರು.
ಬೆಳಗಾವಿಯಲ್ಲಿ ಜನವರಿ 21ರಂದು ಗಾಂಧಿಜಿ ಹಾಗೂ ಅಂಬೇಡ್ಕರ್ ಅವರ ಸ್ಮರಣೆ ಹಾಗೂ ಸಂವಿಧಾನದ ರಕ್ಷಣೆಯ ಉದ್ದೇಶದಿಂದ ಎಐಸಿಸಿ ಹಮ್ಮಿಕೊಂಡಿರುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದ ಸಿದ್ಧತೆ ಕುರಿತು ಡಿಸಿಎಂ ಶಿವಕುಮಾರ್ ಖುದ್ದಾಗಿ ಪರಿಶೀಲನೆ ನಡೆಸುತ್ತಿದ್ದಾರೆ.