Menu

ಹೊಸ ಸಿಮ್‌ ಖರೀದಿಗೆ ಗಿಫ್ಟ್‌ ಆಗಿ ಮೊಬೈಲ್‌ ಕಳಿಸಿ 2.80 ಕೋಟಿ ರೂ. ಎಗರಿಸಿದ್ರು

ಬೆಂಗಳೂರಿನ ಟೆಕ್ಕಿ‌ಯೊಬ್ಬರಿಗೆ ಸೈಬರ್‌ ವಂಚಕರು ನೀವು ಹೊಸ ಸಿಮ್ ಖರೀದಿ ಮಾಡಿದ್ದೀರಿ, ಅದಕ್ಕೆ ಗಿಫ್ಟ್ ಎಂದು ಹೊಸ ಮೊಬೈಲ್ ಕಳಿಸಿ 2.80 ಕೋಟಿ ರೂ. ದೋಚಿದ್ದಾರೆ.  ಗಿಫ್ಟ್​​ ಸ್ವೀಕರಿಸಿದ ಟೆಕ್ಕಿ ಸಿಮ್​ ಅನ್ನು ಮೊಬೈಲ್​​ನಲ್ಲಿ ಹಾಕಿದ್ದಾರೆ. ಸಿಮ್​ ಹಾಕಿದ ಕೆಲವೇ ಗಂಟೆಗಳಲ್ಲಿ ಟೆಕ್ಕಿ ಖಾತೆಯಲ್ಲಿದ್ದ 2.80 ಕೋಟಿ ರೂ. ಸೈಬರ್​ ವಂಚಕೆರ ಖಾತೆಗೆ ಜಮೆಯಾಗಿದೆ.

ಸೈಬರ್​ ಖದೀಮರು ಮೊಬೈಲ್​ನಲ್ಲಿ ಮೊದಲೇ ಕೆಲವು ಆ್ಯಪ್​ಗಳನ್ನು ಇನ್​ಸ್ಟಾಲ್​ ಮಾಡಿದ್ದರು.  ಸಂದೇಶಗಳು ಮತ್ತು ಒಟಿಪಿ ಮೂಲಕ ಟೆಕ್ಕಿಯ ಬ್ಯಾಂಕ್​ ಖಾತೆಯ ಮಾಹಿತಿ ಪಡೆದಿದ್ದಾರೆ. ಬ್ಯಾಂಕ್ ಎಫ್​ಡಿಯಲ್ಲಿ ಇಟ್ಟಿದ್ದ 2.80 ಕೋಟಿ ರೂ. ಖದೀಮರು ಎಗರಿಸಿದ್ದಾರೆ. ವೈಟ್​ಫೀಲ್ಡ್ ಸೆನ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಟೆಕ್ಕಿಗೆ 11 ಕೋಟಿ ರೂ. ವಂಚಿಸಿದ್ದ ಆರೋಪಿಗಳನ್ನು ಬೆಂಗಳೂರು ಈಶಾನ್ಯ ವಿಭಾಗದ ಸಿಇಎನ್​ ಪೊಲೀಸರು ಬಂಧಿಸಿದ್ದಾರೆ.

ಕರಣ್, ತರುಣ್ ನಟಾನಿ, ಧವಲ್ ಷಾ ಬಂಧಿತರು. ವಂಚಕರು ಟೆಕ್ಕಿ ವಿಜಯ್ ಕುಮಾರ್​ ಅವರನ್ನು ಡಿಜಿಟಲ್ ಅರೆಸ್ಟ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹೆದರಿದ ಟೆಕ್ಕಿ, ನನ್ನ ಖಾತೆಯಲ್ಲಿ 2 ಲಕ್ಷ ರೂ. ಇದೆ ಕೊಡುತ್ತೇನೆ ಎಂದು ಹೇಳಿ ವಂಚಕರು ಹೇಳಿದ್ದ ಅಕೌಂಟ್​ಗೆ 2 ಲಕ್ಷ ವರ್ಗಾವಣೆ ಮಾಡಿದ್ದರು. ಮತ್ತೆ ಹಣಕ್ಕಾಗಿ ವಿಜಯ್ ಕುಮಾರ್​ಗೆ ವಂಚಕರು ಧಮ್ಕಿ ಹಾಕುತ್ತಿದ್ದರು.

ವಿಜಯ್ ಕುಮಾರ್ ಕೆಲಸ ಮಾಡುತ್ತಿದ್ದ ಕಂಪನಿಯ ಅಮೆರಿಕದಲ್ಲಿನ ಷೇರಿನ ಬಗ್ಗೆ ವಂಚಕರಿಗೆ ಮಾಹಿತಿ ನೀಡಿದ್ದರು. ಬಳಿಕ ವಂಚಕರು  ತಾವು ಅಧಿಕಾರಿಗಳೆಂದು ಬೆದರಿಕೆ ಹಾಕಲು ಆರಂಭಿಸಿದ್ದಾರೆ. ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಟೆಕ್ಕಿಗೆ ನಿರಂತರ ಕರೆಮಾಡಿ, ತಾವು ಕಳಿಸುವ ಸರ್ಕಾರಿ ಅಕೌಂಟ್​​ಗೆ ಹಣ ಹಾಕುವಂತೆ ಸೂಚಿಸಿದ್ದರು.  9 ಖಾತೆಗಳ ನಂಬರ್ ನೀಡಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಸೈಬರ್ ವಂಚಕರು  ಒಂದು ತಿಂಗಳು ಪೀಡಿಸಿದ್ದರು. ಬಳಿಕ ವಿಜಯ್​ ಕುಮಾರ್ ದೂರು ನೀಡಿದ್ದಾರೆ. ಸೈಬರ್ ಪೊಲೀಸರು ಟೆಕ್ಕಿ ಅಕೌಂಟ್ ಜಾಡು ಹಿಡಿದು ತನಿಖೆ ನಡೆಸಿದ ತನಿಖೆಗೆ ಇಳಿದಾಗ ಅಲಹಾಬಾದ್​ನ ಒಂದು ಖಾತೆಗೆ 7.5 ಕೋಟಿ ಹೋಗಿರುವುದು ತಿಳಿದಿದೆ. ಕೊನೆಗೂ ಪೊಲೀಸರು ಆರೋಪಿಗಳನ್ನುಬಂಧಿಸಿದ್ದಾರೆ.

Related Posts

Leave a Reply

Your email address will not be published. Required fields are marked *