Menu

ಇಂದಿನಿಂದ ಲಾಲ್‌ಬಾಗ್‌ ನಲ್ಲಿ ವೈಭವದ ಫಲ ಪುಷ್ಪ ಪ್ರದರ್ಶನ

76ನೇ ಗಣರಾಜ್ಯೋತ್ಸವ ಅಂಗವಾಗಿ ನಗರದ ಲಾಲ್​ಬಾಗ್​ನ ಗಾಜಿನ ಮನೆಯಲ್ಲಿ ರಾಮಾಯಣ ಕರ್ತೃಆದಿಕವಿ ಮಹರ್ಷಿ ವಾಲ್ಮೀಕಿ ವಿಷಯಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಸಕಲ ಸಿದ್ಧತೆ ನಡೆದಿದೆ. ಇದೇ ಮೊದಲ ಬಾರಿಗೆ ಕ್ಯೂಆರ್​ ಕೋಡ್​ನ ಮೂಲಕ ಟಿಕೆಟ್​ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ.

ಇಂದಿನಿಂದ (ಜ.16) ನಡೆಯುವ 217ನೇ ಫಲಪುಷ್ಪ ಪ್ರದರ್ಶನ ವೀಕ್ಷಣೆಗಾಗಿ ನಗರದ ಬಸ್​ ನಿಲ್ದಾಣಗಳು, ಮೆಟ್ರೋ ರೈಲು ನಿಲ್ದಾಣ ಸೇರಿದಂತೆ ವಿವಿಧ ಭಾಗಗಳಲ್ಲಿ ಕ್ಯೂ.ಆರ್​.ಕೋಡ್​ ಸ್ಟಿಕ್ಕರ್ ಅಂಟಿಸುವ ಮೂಲಕ ಟಿಕೆಟ್​ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ನಿರ್ದೇಶಕ ಡಿ.ಎಸ್​.ರಮೇಶ್ ಮಾಹಿತಿ ನೀಡಿದ್ದಾರೆ.

ಮುಂಗಡ ಟಿಕೆಟ್ ಬುಕ್ ಮಾಡಲು https://hasiru.karnataka.gov.in/floweshow/login.aspx ವೆಬ್​ಸೈಟ್​ಗೆ ಭೇಟಿ ಕೊಡಬೇಕು. ಈ ವೆಬ್​ಸೈಟ್ ಮೂಲಕ ಟಿಕೆಟ್ ಬುಕ್ ಮಾಡುವುದಕ್ಕಾಗಿ ಈ ಲಿಂಕ್​ನಲ್ಲಿ ಕ್ಯೂಆರ್ ಕೋಡ್​ ಲಭ್ಯವಿದೆ. ಈ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಬಹುದಾಗಿದೆ. ದ್ವಾರದಲ್ಲಿ ತೋರಿಸಿ ಸುಲಭವಾಗಿ ಪ್ರವೇಶ ಮಾಡಬಹುದು.

ಇಂಡೋ ಅಮೇರಿಕನ್​ ಹೈ-ಬ್ರೀಡ್​ ಸೀಡ್ಸ್​ ಕಂಪೆನಿಯ ಆಕರ್ಷಕ ಹೂವುಗಳ ಜೋಡಣೆ ಮತ್ತು ವಾಲ್ಮೀಕಿ ಪುತ್ಥಳಿಯನ್ನು ಅನಾವರಣ ಮಾಡಲಾಗುತ್ತಿದೆ. ವೈವಿಧ್ಯಮಯ 1.75 ಲಕ್ಷ ಹೂವುಗಳು ಮತ್ತು ಎಲೆ ಜಾತಿಯ ಗಿಡಗಳ ಪ್ರದರ್ಶನವೂ ಇರಲಿದೆ. ಗಾಜಿನ ಮನೆಯ ಮಧ್ಯಭಾಗದಲ್ಲಿ 1.5 ಲಕ್ಷ ಹೂವುಗಳಿಂದ ಬೃಹತ್​ ಹುತ್ತವನ್ನು ಅನಾವರಣ ಮಾಡಲಾಗಿದೆ. ಎಡಬದಿಯಲ್ಲಿ ವಾಲ್ಮೀಕಿ ಆಶ್ರಮ ಮತ್ತು ರಾಮಾಯಣ ರಚನೆಗೆ ಮೂಲ ಕಾರಣವಾದ ಸನ್ನಿವೇಶದ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ರಾಮಾಯಣದ ಚಟುವಟಿಕೆಯನ್ನು ಬಿಂಬಿಸುವ 3ಡಿ ಕಲಾಕೃತಿ ಹಾಗೂ ರಾಮಾಯಣದ ಸಾಂದರ್ಭಿಕ ಚಿತ್ರಗಳ ಅನಾವರಣವಿರಲಿದೆ. ಒಳಾಂಗಣದಲ್ಲಿ ಸೂಕ್ತ ಸ್ಥಳದಲ್ಲಿ ರಾಮಾಯಣ ಮಹಾಕಾವ್ಯದ ಓಲೆಗರಿ ಹಸ್ತಪ್ರತಿಗಳನ್ನು ಪ್ರದರ್ಶನ ಮಾಡಲಾಗುವುದು. ಹೊರಾಂಗಣದಲ್ಲಿ ಪುಷ್ಪಗಳಿಂದ ನರ್ತಿಸುವ ನವಿಲು, ಹೃದಯಾಕಾರದ ಹೂವಿನ ಕಮಾನುಗಳು, ಮೆಗಾ ಫ್ಲೋರಲ್​ ಫ್ಲೋ, ತೂಗುವ ಹೂವುಗಳು, ಸಸ್ಯ ಸಂತೆ ಮತ್ತು ವಿಶೇಷಗಳು ಇರಲಿವೆ.

ಪ್ರದರ್ಶನಕ್ಕೆ ಆಗಮಿಸುವವರಿಗೆ ಶಾಂತಿ ನಗರ ಬಹುಮಹಡಿ ಕಟ್ಟ, ಹಾಪ್​ ಕಾಮ್ಸ್​ ಆವರಣ, ಆಲ್​ ಅಮೀನ್​ ಕಾಲೇಜು ಆವರಣದಲ್ಲಿ ನಿಲುಗಡೆಗೆ ವ್ಯವಸ್ಥೆ ಇರಲಿದೆ.

Related Posts

Leave a Reply

Your email address will not be published. Required fields are marked *