Thursday, January 30, 2025
Menu

ಪತ್ನಿಯ ಕಿರುಕುಳಕ್ಕೆ ಬೇಸತ್ತು ಗಂಡ ಆತ್ಮಹತ್ಯೆ

ಧಾರವಾಡದ ಬೇಲೂರು ಗ್ರಾಮದಲ್ಲಿ ಪತ್ನಿಯ ಕಿರುಕುಳದಿಂದ ಬೇಸತ್ತು ಗಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶಿವರಾಜ್ ಎತ್ತಿನಗುಡ್ಡ (35) ಆತ್ಮಹತ್ಯೆ ಮಾಡಿಕೊಂಡವರು. ಶಿವರಾಜ್ ಎತ್ತಿನಗುಡ್ಡ ಕಳೆದ ನವೆಂಬರ್ ನಲ್ಲಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ  ಮಾಡಿಕೊಂಡಿದ್ದರು.

ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಡೆತ್‌ನೋಟ್ ಶಿವರಾಜನೇ ಬರೆದಿದ್ದು ಎಂದು ಎಫ್‌ಎಸ್‌ಎಲ್‌ ವರದಿ ಬಂದ ಹಿನ್ನೆಲೆಯಲ್ಲಿ ಪತ್ನಿಯೇ ಸಾವಿಗೆ ಕಾರಣ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಿವರಾಜ್ ಎತ್ತಿನಗುಡ್ಡ 2024 ರ ಜುಲೈನಲ್ಲಿ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಹೈಸ್ಕೂಲ್ ಶಿಕ್ಷಕಿ ಯಲ್ಲವ್ವ ಬೆಂಗೇರಿ ಎಂಬವರನ್ನು ಮದುವೆಯಾಗಿದ್ದರು. ಮದುವೆಯಾದ 15 ದಿನದಲ್ಲೇ ಯಲ್ಲವ್ವ ಶಿವರಾಜ್‌ನನ್ನ ಬಿಟ್ಟು ಪೋಷಕರ ಮನೆಗೆ ಹೋಗಿದ್ದರು. ಆಸ್ತಿಗಾಗಿ ನನ್ನ ಸಹೋದರನಿಗೆ‌ ಯಲ್ಲವ್ವ ಬೆಂಗೇರಿ ಮಾನಸಿಕ‌ ಹಿಂಸೆ ನೀಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಿವರಾಜ್ ಸಹೋದರಿಯರು ಆರೋಪಿಸಿದ್ದರು.

ಶಿವರಾಜ್ ಪತ್ನಿಗೆ ಮನೆಗೆ ಕರೆ ತರಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಧಾರವಾಡದಲ್ಲಿ ಬೇರೆ ಮನೆ ಮಾಡಿದರೆ ಮಾತ್ರ ನಾನು ವಾಪಸ್ ಬರುತ್ತೇನೆ ಎಂದು ಯಲ್ಲವ್ವ ಹೇಳಿದ್ದರು. ಮನೆ ಬೇರೆ ಮಾಡಿದರೂ ಬರಲೇ‌‌ ಇಲ್ಲ. ಹೀಗಾಗಿ ನನ್ನ ಸಾವಿಗೆ ಪತ್ನಿ ಕಾರಣ, ನನ್ನ ಸಾವಿನ ನಂತರ ಆಕೆಗೆ ಶಿಕ್ಷೆಯಾಗಲಿ ಎಂದು ಶಿವರಾಜ್ ಡೆತ್ ನೋಟ್ ಬರೆದಿಟ್ಟಿದ್ದರು. ಶಿಕ್ಷಕಿಯಾಗಿರುವ ಯಲ್ಲವ್ವರನ್ನು ಅಮಾನತು ಮಾಡುವಂತೆ ಶಿಕ್ಷಣ ಇಲಾಖೆಗೆ ಶಿವರಾಜ್ ಸಹೋದರಿಯರು ಒತ್ತಾಯಿಸಿದ್ದಾರೆ.

Related Posts

Leave a Reply

Your email address will not be published. Required fields are marked *