Menu

150 ಬದಲು 15 ಸಾವಿರ ರೂ. ಪಾವತಿ: ಪ್ರಯಾಣಿಕನಿಗೆ ಮರಳಿಸಿದ ಆಟೋ ಚಾಲಕ

ಪ್ರಯಾಣಿಕರನ್ನು ಕಂಡೊಡನೆ ಕಿತ್ತು ತಿನ್ನುವುದನ್ನೇ ವೃತ್ತಿ ಮಾಡಿಕೊಂಡಿರುವ ಆಟೊ ಚಾಲಕರು ಹೆಚ್ಚಾಗಿ ಪ್ರಯಾಣಿಕರಿಗೆ ಕಿರಿಕಿರಿ ಮಾಡುವ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಅಪರೂಪಕ್ಕೊಮ್ಮೆ ಪ್ರಯಾಣಿಕ ಸ್ನೇಹಿಯಾಗಿ, ಮಾನವೀಯವಾಗಿ ಆಟೊ ಚಾಲಕರು ನಡೆದುಕೊಳ್ಳುವ ಘಟನೆಗಳು ವರದಿಯಾಗುತ್ತವೆ.

ಬೆಂಗಳೂರಿನ ಆಟೋ ಚಾಲಕರೊಬ್ಬರು ಪ್ರಯಾಣಿಕನಿಂದ ತಪ್ಪಾಗಿ ತನಗೆ ಪಾವತಿಯಾಗಿದ್ದ ೧೫ ಸಾವಿರ ರೂಪಾಯಿ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಈ ಘಟನೆ ಸಾಮಾಜಿಕ ಮಾಧ್ಯಮಗಳ್ಲಲಿ ವೈರಲ್‌ ಆಗಿದೆ.

ಪ್ರಯಾಣಿಕ 150ರೂ. ಡಿಜಿಟಲ್ ಪಾವತಿ ಬದಲು ತಪ್ಪಿ ೧೫ ಸಾವಿರ ರೂ. ಪಾವತಿಸಿದ್ದು, ಗೊತ್ತಾದ ಬಳಿಕ ಆಟೊ ಚಾಲಕನನ್ನು ಸಂಪರ್ಕಿಸಿದ್ದಾರೆ. ಚಾಲಕ ಹಣವನ್ನು ಪ್ರಾಮಾಣಿಕವಾಗಿ ಪ್ರಯಾಣಿಕನಿಗೆ ಮರಳಿಸಿದ್ದಾನೆ.
ತನ್ನದಲ್ಲದ ಹಣ ತನಗೆ ಬೇಡ ಎಂಬ ಚಾಲಕನ ಈ ನಿರ್ಧಾರ ಮಾದರಿಯಾಗಿದೆ.

ಚಾಲಕನ ಈ ಉದಾತ್ತ ಗುಣದ ಕುರಿತು ಪ್ರಯಾಣಿಕ ಲಿಂಕ್ಡ್‌ಇನ್ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಚಾಲಕನನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ. ತಪ್ರಯಾಣಿಕ ಆಟೋ ಚಾಲಕನ ಪ್ರಾಮಾಣಿಕತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ, ಕೃತಜ್ಞತೆ ಸಲ್ಲಿಸಿದ್ದಾನೆ. ಇಂತಹ ಘಟನೆಗಳು ಮನುಷ್ಯತ್ವದ ಮೇಲಿನ ನಂಬಿಕೆಯನ್ನು ಮತ್ತೆ ಚಿಗುರಿಸುತ್ತವೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

Related Posts

Leave a Reply

Your email address will not be published. Required fields are marked *