Menu

 ಹೊಸ BPL ಕಾರ್ಡ್​​ಗೆ ಅರ್ಜಿ ಹಾಕಲು ಕಾಯ್ತಿರುವವರಿಗೆ ಗುಡ್‌ ನ್ಯೂಸ್‌ ! 

 

 ಹೊಸ BPL ಕಾರ್ಡ್​​ಗೆ ಅರ್ಜಿ ಹಾಕಲು ಕಾಯ್ತಿರುವವರಿಗೆ ಗುಡ್‌ ನ್ಯೂಸ್‌ ! 

ಬಿಪಿಎಲ್​​ ಕಾರ್ಡ್‌ ಪಡೆಯಲು ಅರ್ಹ ಬಡ ಕುಟುಂಬಗಳು ಕಾಯುತ್ತಿದ್ದು, ಆಹಾರ ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಅವರು ಹೊಸ ಬಿಪಿಎಲ್ ಕಾರ್ಡ್‌ಗಳ ಅರ್ಜಿ ಸ್ವೀಕಾರದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ್ದಾರೆ.

ಬೆಂಗಳೂರು: ರೇಷನ್​ ಕಾರ್ಡ್​​ಗಳ ಕೆವೈಸಿ ಪ್ರಕ್ರಿಯೆ ನಡೆಯುತ್ತಿರುವ ಈ ಸಮಯದಲ್ಲಿ ಹೊಸ ಬಿಪಿಎಲ್ ರೇಷನ್ ಕಾರ್ಡ್‌ಗಳಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಅನರ್ಹ ಫಲಾನುಭವಿಗಳ ಕಾರ್ಡ್‌ಗಳನ್ನು ಪರಿಶೀಲಿಸಿ ರದ್ದುಪಡಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದ್ದರಿಂದ ಹೊಸ ಬಿಪಿಎಲ್ ಕಾರ್ಡ್‌ಗಳ ವಿತರಣೆ ಸ್ಥಗಿತಗೊಂಡಿತ್ತು. ಇದೀಗ ಬಿಪಿಎಲ್ ಕಾರ್ಡ್​​ ಪಡೆಯಲು ಕಾಯ್ತಿರುವವರಿಗೆ ಸಚಿವ ರಿಜ್ವಾನ್ ಅರ್ಷದ್​ ಅವರು ಗುಡ್​ ನ್ಯೂಸ್​​ ನೀಡಿದ್ದಾರೆ.

ಬಿಪಿಎಲ್​​ ಕಾರ್ಡ್​​ ಕುರಿತು ಮಹತ್ವದ ಮಾಹಿತಿ
ಬಿಪಿಎಲ್​​ ಕಾರ್ಡ್‌ ಪಡೆಯಲು ಅರ್ಹ ಬಡ ಕುಟುಂಬಗಳು ಕಾಯುತ್ತಿದ್ದು, ಹೊಸ ಬಿಪಿಎಲ್ ಕಾರ್ಡ್‌ಗಳ ಅರ್ಜಿ ಸ್ವೀಕಾರದ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಸ್ಪಷ್ಟನೆ ನೀಡಿದ್ದಾರೆ.

ಶೀಘ್ರವೇ BPL ಕಾರ್ಡ್​​ ಅರ್ಜಿ ಸಲ್ಲಿಕೆಗೆ ಅವಕಾಶ
ಹೊಸ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವ ವಿಚಾರವನ್ನು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಶೀಘ್ರವೇ ಅಧಿಕೃತವಾಗಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವುದಾಗಿ ಸಚಿವ ರಿಜ್ವಾನ್ ಅರ್ಷದ್​​ ಮಾಹಿತಿ ನೀಡಿದ್ದಾರೆ. ಹೀಗಾಗಿ ಅರ್ಹ ಕುಟುಂಬಗಳು ಸರ್ಕಾರದ ಮುಂದಿನ ಅಧಿಕೃತ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

#BPLCard #RationCard #RizwanArshad #KarnatakaGovernment #FoodDepartment #UdayakalaNews #BPLCardApplication #KarnatakaNews

Related Posts

Leave a Reply

Your email address will not be published. Required fields are marked *