Menu

ಆ್ಯಪ್ ಮಹಿಳೆ ಹೇಳಿದ್ದಕ್ಕೆ ಬಟ್ಟೆಬಿಚ್ಚಿ ಲಕ್ಷಾಂತರ ರೂ. ಕಳೆದುಕೊಂಡ ಯುವಕ

Cyber fraud

ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಮಹಿಳೆ ವೀಡಿಯೊ ಕಾಲ್ ಮಾಡಿ ಯುವ ಕ್ರಿಕೆಟಿಗನನ್ನು ಬಟ್ಟೆ ಬಿಚ್ಚುವಂತೆ ಪ್ರಚೋದಿಸಿ ಅದನ್ನು ರೆಕಾರ್ಡ್‌ ಮಾಡಿಟ್ಟುಕೊಂಡು ಬಳಿಕ ಬ್ಲ್ಯಾಕ್‌ ಮೇಲ್‌ ಮಾಡಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಹಿಳೆಯು ಇಟ್ಟುಕೊಂಡಿದ್ದ ಯುವಕನ ಬೆತ್ತಲೆ ವೀಡಿಯೊವನ್ನು ವೈರಲ್‌ ಮಾಡುವುದಾಗಿ ಬೆದರಿಸಿ ಹಣ ಪಡೆದು ಮತ್ತೆ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವುದರಿಂದ ಕಂಗೆಟ್ಟ ಸಂತ್ರಸ್ತ ಸೈಬರ್‌ ಪೊಲೀಸರ ಮೊರೆ ಹೋಗಿದ್ದಾನೆ.

ಮಹಾರಾಷ್ಟ್ರದ ಯುವ ಕ್ರಿಕೆಟಿಗ ಬೆಂಗಳೂರಿನ ಉತ್ತರ ಭಾಗದ ಖಾಸಗಿ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ತಂಗಿದ್ದಾಗ ಈ ಘಟನೆ ನಡೆದಿದೆ. ಯುವಕ ಡೇಟಿಂಗ್ ಆ್ಯಪ್‌ನಲ್ಲಿ ಸಂಖ್ಯೆ ನೋಂದಾಯಿಸಿದ್ದ. ಪರಿಚಯವಾದ ಮಹಿಳೆ ವೀಡಿಯೊ ಕರೆ ಮಾಡಿ ಅಶ್ಲೀಲ ವರ್ತನೆ ತೋರಿದು, ಪ್ರಚೋದನೆಗೆ ಒಳಗಾದ ಯುವಕ ಬಟ್ಟೆಬಿಚ್ಚಿದ್ದ. 30 ಸೆಕೆಂಡ್ ಬಳಿಕ ಮಹಿಳೆ ಕರೆ ಕಡಿತಗೊಳಿಸಿದ್ದಳು.

ಸ್ವಲ್ಪ ಸಮಯದ ನಂತರ ಅದೇ ಮಹಿಳೆ ಹಾಗೂ ಆಕೆಯ ಗ್ಯಾಂಗ್, ಕ್ರಿಕೆಟಿಗನ ವೀಡಿಯೊ ಮತ್ತು ಚಿತ್ರಗಳನ್ನು ಕಳುಹಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದೆ. ಮಾನಹಾನಿಯ ಭಯದಿಂದ ಯುವಕ ಹಣ ವರ್ಗಾವಣೆ ಮಾಡಿದ್ದ. ಹಣ ಪಡೆದ ನಂತರವೂ ಮತ್ತಷ್ಟು ಹಣಕ್ಕಾಗಿ ನಿರಂತರವಾಗಿ ಕರೆ ಮಾಡಿ ಕಿರುಕುಳ ನೀಡಿದ್ದಾರೆ.

ಆತಂಕಗೊಂಡ ಯುವಕ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *