Thursday, September 17, 2026
Menu

ಎಂಜಿನಿಯರಿಂಗ್‌ ಸೀಟ್‌ಗೆ ಬೇಡಿಕೆ ಇಲ್ಲ, ಕಾಲೇಜುಗಳ ಸಂಖ್ಯೆ ಮಾತ್ರ ಇಳಿದಿಲ್ಲ

ರಾಜ್ಯದಲ್ಲಿ ೩೦೦ಕ್ಕೂ ಹೆಚ್ಚು ಎಂಜಿನಿಯರಿಂಗ್‌ ಕಾಲೇಜುಗಳಿವೆ.ರಾಜ್ಯ ಸರ್ಕಾರ ಎಂಜಿನಿಯರಿಂಗ್‌ ಕಾಲೇಜು ಬೇಡ ಎಂದು ಕೇಂದ್ರಕ್ಕೆ ಬರೆದರೂ ಖಾಸಗಿ ಕಾಲೇಜುಗಳ ಬೇಡಿಕೆ ಇಳಿಮುಖಗೊಂಡಿಲ್ಲ. ಒಟ್ಟು ೧.೫೦ಲಕ್ಷ ಸೀಟುಗಳಿವೆ. ಇದರಲ್ಲಿ ೩೦ ಸಾವಿರಕ್ಕೂ ಹೆಚ್ಚು ಸೀಟುಗಳು ಖಾಲಿ ಬಿದ್ದಿವೆ. ಈ ಬಾರಿ ಕಂಪ್ಯೂಟರ್ ವಿಜ್ಞಾನದ ಸೀಟುಗಳೇ ಭರ್ತಿಯಾಗಿಲ್ಲ. ಸರ್ಕಾರಿ ಕಾಲೇಜಿನಿಂದ ಹಿಡಿದು ಖಾಸಗಿ ಕಾಲೇಜು ವರೆಗೆ ಶಿಕ್ಷಣ ಶುಲ್ಕ ೩೦ ಸಾವಿರರೂಗಳಿಂದ ಹಿಡಿದು ೧೨ ಲಕ್ಷ ರೂ. ವರೆಗೆ ವ್ಯತ್ಯಾಸಗೊಳ್ಳುತ್ತದೆ. ಆದರೂ ವಿದ್ಯಾರ್ಥಿಗಳ ಸಂಖ್ಯೆ ಏನೂ ಕಡಿಮೆಯಾಗಿಲ್ಲ.

ಬೆಂಗಳೂರು ನಗರ ಸುತ್ತಮುತ್ತ ೧೦೦ ಕಾಲೇಜುಗಳಿವೆ. ಉಳಿದ ನಗರಗಳಲ್ಲಿ ಇರುವ ಕಾಲೇಜುಗಳಲ್ಲಿ ಕೆಲವು ಸಂಸ್ಥೆಗಳಿಗೆ ಮಾತ್ರ ಬೇಡಿಕೆ ಇದೆ. ಉಳಿದ ಕಾಲೇಜುಗಳನ್ನು ಕೇಳುವವರಿಲ್ಲ. ಕಳೆದ ೩ ವರ್ಷಗಳಿಂದ ಎಂಜಿನಿಯರಿಂಗ್‌ ಸೇರುವ ಮಕ್ಕಳ ಸಂಖ್ಯೆ ಇಳಿಮುಖಗೊಳ್ಳುತ್ತಿದೆ. ಎಂಜಿನಿಯರಿಂಗ್‌ ರೀತಿ ಮೆಡಿಕಲ್ ಕಾಲೇಜುಗಳ ಸಂಖ್ಯೆ ಅಧಿಕಗೊಳ್ಳುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಹೆಚ್ಚು ಹಣ ಬೇಕು. ಅಲ್ಲದೆ ತನ್ನದೇ ಆದ ಆಸ್ಪತ್ರೆ ಹೊಂದಿರಬೇಕು.

ಬೆಂಗಳೂರಿನಲ್ಲಿ ಐಟಿ ಬಿಟಿ ಇರುವುದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ.ಆದರೂ ಈಗ ಎಐ ಮತ್ತು ಸೈಬರ್ ತಂತ್ರಜ್ಞಾನ ಅಭಿವೃದ್ಧಿಗೊಂಡಂತೆ  ಹೊಸದಾಗಿ ಕೆಲಸ ಬರುವ ಯುವಕ ಯುವತಿಯರ ಜ್ಞಾನ ಅಧುನಿಕತೆ ಹೊಂದಿಕೊಳ್ಳುವಂತೆ ಇರಬೇಕು. ಕೆಲವು ಕಾಲೇಜು ಅಪ್‌ಡೇಟ್ ಮಾಹಿತಿ ಒದಗಿಸುವುದರಲ್ಲಿ ಹಿಂದೆ ಬೀಳುತ್ತಿವೆ. ಇಂದಿನ ತಂತ್ರಜ್ಞಾನದಲ್ಲಿ ಪುಸ್ತಕ ಜ್ಞಾನ ವೊಂದೇ ಸಾಲುವುದಿಲ್ಲ. ಇಂದಿನ ಸಂಶೋಧನೆ ಮತ್ತು ಬೆಳವಣಿಗೆಗಳ ಮಾಹಿತಿ ಇರಬೇಕು. ಇದು ಈಗ ಪ್ರಮುಖ ಸಮಸ್ಯೆಯಾಗಿದೆ. ಇದಕ್ಕೆ ತಕ್ಕಂತೆ ಅಧ್ಯಾಪಕರ ಕೊರತೆ ಅಧಿಕಗೊಳ್ಳುತ್ತಿದೆ. ಹೀಗಾಗಿ ಐಟಿಬಿಟಿ ಯಲ್ಲಿ ಕೆಲಸ ಮಾಡಿ ಹೊರಬಂದ ಹಿರಿಯರನ್ನು ಗೌರವ ಅಧ್ಯಾಪಕರಾಗಿ ನೇಮಿಸಿಕೊಳ್ಳುವ ಕೆಲಸ ನಡೆಯುತ್ತಿದೆ.

ಕಾಲೇಜಿನ ಕ್ಯಾಂಪಸ್ ಇಂಟರ್‌ವೂನಲ್ಲಿ ಎಷ್ಟು ಜನ ಆಯ್ಕೆಗೊಂಡಿದ್ದಾರೆ ಎಂಬುದರ ಮೇಲೆ ಕಾಲೇಜಿಗೆ ಬಂದು ಸೇರುವವರ ಸಂಖ್ಯೆ ನಿರ್ಧಾರವಾಗುತ್ತಿದೆ. ಇದರಿಂದ ಸರ್ಕಾರಿ ಕಾಲೇಜುಗಳು ಉಳಿಯುವುದು ಕಷ್ಟವಾಗಿದೆ. ಖಾಸಗಿ ಕಾಲೇಜು ನೀಡುವ ಸೌಲಭ್ಯವನ್ನು ಇತರರು ನೀಡುವುದು ಕಷ್ಟ. ಕಾಲೇಜಿನ ಶುಲ್ಕ ಅಧಿಕಗೊಳ್ಳುತ್ತಿರುವುದರಿಂದ ಬಡವರ ಮಕ್ಕಳು ದುಬಾರಿ ಶಿಕ್ಷಣ ಪಡೆಯುವುದು ಕಷ್ಟ. ಸುದೈವದಿಂದ ಮೆರಿಟ್ ವಿದ್ಯಾರ್ಥಿಗಳಿಗೆ ಸೀಟು ಸಿಗುತ್ತದೆ. ಮೆಡಿಕಲ್ ಸೀಟಿನಲ್ಲಿ ಮೆರಿಟ್ ಸೀಟು ಬಹಳ ಕಡಿಮೆ ಇದೆ. ಆ ಸಮಸ್ಯೆ ಎಂಜಿನಿಯರಿAಗ್‌ಗೆ ಇಲ್ಲ. ರೀಜಿನಲ್ ಕಾಲೇಜಿನಲ್ಲಿ ಸೀಟು ಸಿಕ್ಕರೆ ಫೀಜು ಕಡಿಮೆ. ಕೆಲಸ ಗ್ಯಾರಂಟಿ. ಉನ್ನತ ವ್ಯಾಸಂಗಕ್ಕೆ ಅನುಕೂಲ. ಎಂಜಿನಿಯರಿಂಗ್‌ ಕಾಲೇಜುಗಳ ಶಿಕ್ಷಣ ಮಟ್ಟವನ್ನು ಎಐಸಿಟಿಇ ಪರಿಶೀಲಿಸಬೇಕು. ಅದು ಸಮರ್ಪಕವಾಗಿ ನಡೆಯುತ್ತಿಲ್ಲ.

ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಅಧ್ಯಾಪಕರಿಗೆ ಸಾಕಷ್ಟು ಸಂಬಳ ಇದ್ದರೂ ಅದು ಉದ್ಯಮದಲ್ಲಿ ದೊರಕುವ ಸಂಬಳಕ್ಕೆ ಸರಿಸಮಾನವಾಗಿಲ್ಲ. ಅದರಿಂದ ಅಧ್ಯಾಪಕರಾಗಿ ಬರಲು ಬಹಳ ಜನ ಬಯಸುವುದಿಲ್ಲ. ಇದರ ಬದಲು ಪ್ರತಿಷ್ಠಿತ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ರಜೆ ಕೊಟ್ಟು ಕಾಲೇಜಿನಲ್ಲಿ ಕೆಲಸ ಮಾಡುವಂತೆ ವ್ಯವಸ್ಥೆ ಮಾಡಬೇಕು. ಆಗ ವಿದ್ಯಾರ್ಥಿಗಳ ಗುಣಮಟ್ಟ ಉತ್ತಮಗೊಳ್ಳುತ್ತದೆ. ಉದ್ಯಮಕ್ಕೆ ಬೇಕಾಗುವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಬಹುದು. ಉನ್ನತ ಶಿಕ್ಷಣಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದು ಹೆಚ್ಚಿನ ಬಂಡವಾಳ ಬೇಡುತ್ತದೆ. ಅಲ್ಲದೆ ಕಾಲೇಜುಗಳು ಮತ್ತು ಉದ್ಯಮದ ನಡುವೆ ಅಂತರ ಅಧಿಕಗೊಳ್ಳುತ್ತ ಹೋಗುತ್ತದೆ. ತಾಂತ್ರಿಕ ವಿವಿ ಈ ವಿಷಯದಲ್ಲಿ ಪ್ರಮುಖ ಪಾತ್ರವಹಿಸಬೇಕಿದೆ. ಅಖಿಲ ಭಾರತ ಮಟ್ಟದಲ್ಲಿ ಇದರ ಚಿಂತನೆ ನಡೆಯಬೇಕಿದೆ.

Related Posts

Leave a Reply

Your email address will not be published. Required fields are marked *