Menu

ಡಿಕೆ ಶಿವಕುಮಾರ್‌ ಸಂಪುಟ ವಿಸ್ತರಣೆ: ಪ್ರಮಾಣವಚ ಸ್ವೀಕರಿಸಿದ 17 ಅನುಭವಿಗಳು

ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಲ್ಲಿ ಅನುಭವಿಗಳಿಗೆ ಮತ್ತು ಹಿರಿಯರಿಗೆ ಆದ್ಯತೆ ನೀಡಲಾಗಿದೆ, ಹೊಸ ಮುಖಗಳಿಗೆ ಅವಕಾಶ ಸಿಗಬಹುದು ಎಂಬ ಹೆಚ್ಚಿನ ನಿರೀಕ್ಷೆ ಸುಳ್ಳಾಗಿದೆ.

ಸಚಿವ ಸಂಪುಟದ ಸದಸ್ಯರ ಸರಾಸರಿ ವಯಸ್ಸು 55 ಮೀರಿದ್ದು, ಬಹುತೇಕ ಸಚಿವರು 50 ವರ್ಷ ದಾಟಿದವರು. ಗೃಹ ಸಚಿವ ಪ್ರಿಯಾಂಕ್ ಖರ್ಗೆ (48), ರಿಜ್ವಾನ್ ಅರ್ಷದ್ (47) ಹಾಗೂ ಯತೀಂದ್ರ ಸಿದ್ದರಾಮಯ್ಯ (46) ವರ್ಷದವರು.

ಕೆ.ಹೆಚ್. ಮುನಿಯಪ್ಪ (78) ಸಂಪುಟದ ಹಿರಿಯ ಸಚಿವ.ಕೆ.ಜೆ. ಜಾರ್ಜ್ (77), ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ (75), ರಾಮಲಿಂಗಾರೆಡ್ಡಿ (73), ಪುಟ್ಟರಂಗ ಶೆಟ್ಟಿ (72) ಹಾಗೂ ಬಸವರಾಜ ರಾಯರೆಡ್ಡಿ (70) ಹಿರಿಯ ಸಚಿವರ ಪಟ್ಟಿಯಲ್ಲಿದ್ದಾರೆ.ಕೆ.ಎಂ. ಶಿವಲಿಂಗೇಗೌಡ (64), ರುದ್ರಪ್ಪ ಲಮಾಣಿ (64), ಈಶ್ವರ ಖಂಡ್ರೆ (64), ಸತೀಶ್ ಜಾರಕಿಹೊಳಿ (64), ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (64), ಪಿ.ಎಂ. ನರೇಂದ್ರಸ್ವಾಮಿ (63), ಟಿ. ರಘುಮೂರ್ತಿ (63), ಎಂ.ಬಿ. ಪಾಟೀಲ್ (62), ಎಚ್.ಸಿ. ಬಾಲಕೃಷ್ಣ (61), ಜಮೀರ್ ಅಹ್ಮದ್ ಖಾನ್ (60) ಹಾಗೂ ಮಧು ಬಂಗಾರಪ್ಪ (60).

ಎಸ್.ಎಸ್. ಮಲ್ಲಿಕಾರ್ಜುನ (59), ಶರಣಪ್ರಕಾಶ ಪಾಟೀಲ್ (59), ಯು.ಟಿ. ಖಾದರ್ (57), ಕೆ.ಎಸ್. ಬಸಂತಪ್ಪ (57), ಲಕ್ಷ್ಮಣ ಸವದಿ (56), ಶಿವರಾಜ ತಂಗಡಗಿ (55), ಬಿ. ನಾಗೇಂದ್ರ (55), ವಿಜಯಾನಂದ ಕಾಶಪ್ಪನವರ್ (54), ಬೈರತಿ ಸುರೇಶ್ (54), ಕೃಷ್ಣ ಬೈರೇಗೌಡ (53), ಅಜಯ್ ಸಿಂಗ್ (52) ಹಾಗೂ ಸಂತೋಷ್ ಲಾಡ್ (52), ಮುಖ್ಯಮಂತ್ರಿ ಶಿವಕುಮಾರ್ ನೇತೃತ್ವದ ವಿಸ್ತರಿತ ಸಂಪುಟದಲ್ಲಿ ರಾಜ್ಯದ 31 ಜಿಲ್ಲೆಗಳ ಲ್ಲಿ23 ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರೆತಿದ್ದು, ಎಂಟು ಜಿಲ್ಲೆಗಳಿಗೆ ಅವಕಾಶ ನೀಡಲ್ಲ ಎಂಬ ಕೂರು ಕೇಳಿ ಬಂದಿದೆ.

ಬೆಂಗಳೂರು ನಗರ ಜಿಲ್ಲೆಗೆ ಅತಿ ಹೆಚ್ಚು ಆರು ಸಚಿವರು ಸ್ಥಾನಗಳು ಸಿಕ್ಕಿದ್ದರೆ, ಕಲಬುರಗಿಯಿಂದ ಮೂವರು ಆಯ್ಕೆಯಾಗಿದ್ದಾರೆ. ಬೆಳಗಾವಿ, ಕೊಪ್ಪಳ, ಮಂಡ್ಯ ಹಾಗೂ ರಾಮನಗರ ಜಿಲ್ಲೆಗಳಿಗೆ ತಲಾ ಎರಡು ಸಚಿವ ಸ್ಥಾನಗಳಿವೆ. ಬಾಗಲಕೋಟೆ, ಹಾಸನ, ಬಳ್ಳಾರಿ, ಬೀದರ್, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಹಾವೇರಿ, ಮೈಸೂರು, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ ಹಾಗೂ ವಿಜಯಪುರ ಜಿಲ್ಲೆಗಳಿಗೆ ತಲಾ ಒಂದು ಸಚಿವ ಸ್ಥಾನ ಸಿಕ್ಕಿದೆ.

ಯಾದಗಿರಿ, ರಾಯಚೂರು, ಗದಗ, ವಿಜಯನಗರ, ಕೊಡಗು, ಕೋಲಾರ, ಉಡುಪಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆತಿಲ್ಲ. ಕಾಂಗ್ರೆಸ್ ಹೈಕಮಾಂಡ್ 20 ನೂತನ ಸಚಿವರ ಹೆಸರನ್ನು ಪ್ರಕಟಿಸಿದ್ದರೂ ಕೊನೆ ಕ್ಷಣದಲ್ಲಿ 19 ಮಂದಿ ಮಾತ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ 19 ಸಚಿವರಿಗೆಪ್ರತಿಜ್ಞಾವಿಧಿ ಬೋಧಿಸಿದರು.
ಅಂತಿಮ ಪಟ್ಟಿಯಲ್ಲಿದ್ದ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಸ್ವೀಕರಿಸಲಿಲ್ಲ. ಮಹಿಳಾ ಶಾಸಕರ ನಡುವಿನ ತೀವ್ರ ಪೈಪೋಟಿಯೇ ಇದಕ್ಕೆ ಕಾರಣ ಎನ್ನಲಾಗಿದೆ.

Related Posts

Leave a Reply

Your email address will not be published. Required fields are marked *