Saturday, September 19, 2026
Menu

ರಾಜ್ಯದಲ್ಲಿ ಶಾಲೆಗಳಿಗೆ 19 ದಿನ ದಸರಾ ರಜೆ

mysore dasara

ಈ ವರ್ಷದ ದಸರಾ ಹಬ್ಬಕ್ಕೆ 2026-27 ನೇ ಶೈಕ್ಷಣಿಕ ಸಾಲಿನ ಅನ್ವಯ ಒಟ್ಟು ೧೯ ದಿನಗಳ ರಜೆಯನ್ನು ಶಿಕ್ಷಣ ಇಲಾಖೆ ಘೋಷಿಸಿದೆ. ಅಕ್ಟೋಬರ್ ​ಮೂರರಿಂದ ರಜೆ ಆರಂಭವಾಗಲಿದ್ದು, ಅಕ್ಟೋಬರ್​ 22ಕ್ಕೆ ಮುಕ್ತಾಯವಾಗಲಿದೆ.

ಅಕ್ಟೋಬರ್ ​ಮೂರರಿಂದ ರಜೆ ಆರಂಭವಾಗಲಿದ್ದು, ಅಕ್ಟೋಬರ್​ 22ಕ್ಕೆ ಮುಕ್ತಾಯವಾಗಲಿದೆ. 23ರಿಂದ ಶಾಲೆಗಳು ಪುನಾರಂಭವಾಗಲಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಕಡ್ಡಾಯವಾಗಿ ಈ ರಜೆ ಅನ್ವಯವಾಗಲಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಈ ಹಬ್ಬದ ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ರೈಲ್ವೆ ಇಲಾಖೆಗಳು ಹೆಚ್ಚುವರಿ ಬಸ್‌ ಮತ್ತು ರೈಲುಗಳ ವ್ಯವಸ್ಥೆ ಕಲ್ಪಿಸುವ ಸಾಧ್ಯತೆಯಿದೆ. ಸಿಎಂ ಡಿಕೆ ಶಿವಕುಮಾರ್​ ನೇತೃತ್ವದ ಸರ್ಕಾರ ಈ ಬಾರಿ ದಸರಾವನ್ನು ವೈಭವದಿಂದ ಆಚರಿಸಲು ಸಜ್ಜಾಗಿದೆ. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಏರ್​ ಷೋ, ಡ್ರೋನ್ ಷೋ ಆಯೋಜಿಸಲು ಸರ್ಕಾರ ಮುಂದಾಗಿದೆ.

Related Posts

Leave a Reply

Your email address will not be published. Required fields are marked *