Menu

ಸಿಎಂ ಡಿಕೆ ಶಿವಕುಮಾರ್‌ರವರ ಸಾರಥ್ಯದಲ್ಲಿ ಬೃಂದಾವನದಲ್ಲಿ ಇಂದಿನಿಂದ ವಿಜೃಂಭಣೆಯ ‘ಕಾವೇರಿ ಆರತಿ’ ಆರಂಭ

ಉದಯಕಾಲ ನ್ಯೂಸ್, ಮಂಡ್ಯ: ವಾರಣಾಸಿಯ ವಿಶ್ವಪ್ರಸಿದ್ಧ ಗಂಗಾರತಿಯ ಮಾದರಿಯಲ್ಲೇ ಕರ್ನಾಟಕದಲ್ಲೂ ಕಾವೇರಿ ನಡಿಗೆ ಪೂಜೆ ಸಲ್ಲಿಸುವ ಮಹತ್ವಾಕಾಂಕ್ಷೆಯ ‘ಕಾವೇರಿ ಆರತಿ’ (Cauvery Aarathi) ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹೋತ್ಸವದ ಎರಡನೇ ವರ್ಷದ ಸಂಭ್ರಮಕ್ಕೆ  ಅಧಿಕೃತ ಚಾಲನೆ ಸಿಗಲಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರಸಿದ್ಧ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ಬೃಂದಾವನದಲ್ಲಿ ಈ ಅದ್ಧೂರಿ ಕಾರ್ಯಕ್ರಮ ಜರುಗಲಿದೆ.

ಇಂದು ಸಂಜೆ 6 ಗಂಟೆಗೆ ಚಾಲನೆ

ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಈ ವಿಶಿಷ್ಟ ಕಾರ್ಯಕ್ರಮಕ್ಕೆ ಇಂದು ಸಂಜೆ 6 ಗಂಟೆಗೆ ಚಾಲನೆ ನೀಡಲಿದ್ದಾರೆ. ಸ್ವತಃ ಡಿ.ಕೆ. ಶಿವಕುಮಾರ್ ಅವರು ಕಾವೇರಿ ಮಾತೆಗೆ ಪುಷ್ಪಾರ್ಚನೆಗೈದು, ದೀಪ ಬೆಳಗುವ ಮೂಲಕ ಕಾವೇರಿ ಆರತಿ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ. ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಇಲಾಖೆಗಳ ಸಚಿವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ.

ವಿಶೇಷತೆಗಳೇನು?

ಗಂಗಾರತಿಯ ಮಾದರಿಯಂತೆಯೇ, ಪ್ರತ್ಯೇಕ ತರಬೇತಿ ಪಡೆದಿರುವ 12 ರಿಂದ 13 ಜನ ಅನುಭವಿ ವೈದಿಕರ ತಂಡದಿಂದ ಕಾವೇರಿ ನದಿಗೆ ವೈಭವೋಪೇತವಾಗಿ ಆರತಿ ಕಾರ್ಯಕ್ರಮ ನಡೆಯಲಿದೆ.ಇಂದಿನಿಂದ ಅಂದರೆ ಅಕ್ಟೋಬರ್ 16ರಿಂದ ಅಕ್ಟೋಬರ್ 21ರವರೆಗೆ ಮುಂದಿನ 6 ದಿನಗಳ ಕಾಲ ಪ್ರತಿದಿನ ಸಂಜೆ ಈ ಧಾರ್ಮಿಕ ವಿಧಿ-ವಿಧಾನಗಳು ಜರುಗಲಿವೆ. ದಸರಾ ಹಬ್ಬದ ವಿಶೇಷ ಸಂದರ್ಭದಲ್ಲಿ ನಡೆಯುತ್ತಿರುವ ಈ ದಿವ್ಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ವೀಕ್ಷಣೆಗಾಗಿ ಆಸನದ ವ್ಯವಸ್ಥೆ ಹಾಗೂ ವಿದ್ಯುತ್ ದೀಪಗಳಿಂದ ಬೃಂದಾವನವನ್ನು ಅಲಂಕರಿಸಲಾಗಿದೆ.

ನಾಡಿನ ಜೀವಜ್ಯೋತಿ ಕಾವೇರಿ ಮಾತೆಯ ಪಾವಿತ್ರ್ಯತೆ ಮತ್ತು ಸಾಂಸ್ಕೃತಿಕ ಹಿರಿಮೆಯನ್ನು ಬಿಂಬಿಸುವ ಈ ಕಣ್ಣಿಗೆ ಹಬ್ಬ2 ನೀಡುವ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಜಿಲ್ಲಾಡಳಿತ ಕೋರಿದೆ.

#CauveryAarathi #KRSDam #MandyaNews #CMDKShivakumar #MysuruDasara2026 #CauveryRiver #UdayakalaNews #KarnatakaTourism #BrindavanGarden

Related Posts

Leave a Reply

Your email address will not be published. Required fields are marked *