ಏ.22, 23, 24ರಂದು ನಡೆದಿದ್ದ 2026ರ ಯುಜಿ ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಇಂಜಿನಿಯರಿಂಗ್ ವಿಭಾಗದಲ್ಲಿ ಮೊದಲನೇ ರ್ಯಾಂಕ್ನ್ನು ಬೆಂಗಳೂರಿನ ತನಿಶಾ ಕಾರ್ತಿಕ್ ಗಳಿಸಿದ್ದಾರೆ. ದ್ವಿತೀಯ ಸ್ಥಾನವನ್ನು ಸೃಜನ್ ಹಾಗೂ ತೃತೀಯ ಸ್ಥಾನವನ್ನು ನಿನಾದ್ ತಮ್ಮದಾಗಿಸಿಕೊಂಡಿದ್ದಾರೆ.
ಕೃಷಿ ವಿಭಾಗದಲ್ಲಿ ಆರ್.ವಿ ಪಿಯು ಕಾಲೇಜ್ನ ವಿದ್ಯಾರ್ಥಿ ನಿನಾದ್ ಪ್ರಥಮ ಸ್ಥಾನ ಪಡೆದಿದ್ದು, ದ್ವಿತೀಯ ಸ್ಥಾನವನ್ನು ಧಾರವಾಡದ ಅರ್ಜುನ್ ಸೈನ್ಸ್ ಕಾಲೇಜಿನ ಅನ್ಮೊಲ್ ಪಡೆದಿದ್ದಾರೆ. ಮಂಗಳೂರು ಎಕ್ಸ್ಪರ್ಟ್ ಪಿಯು ಕಾಲೇಜಿನ ಸಮಯ್ ಎ.ಎಸ್ ತೃತೀಯ ಸ್ಥಾನ ಗಳಿಸಿದ್ದಾರೆ.
ಯೋಗ ಮತ್ತು ನ್ಯಾಚುರೋಪಥಿ ಕೋರ್ಸ್ನಲ್ಲಿ ಬೆಂಗಳೂರಿನ ಬೇಸ್ ಪಿಯು ಕಾಲೇಜಿನ ನಯನ ಗೋಪಿ ಪ್ರಥಮ ಸ್ಥಾನ ಪಡೆದಿದ್ದಾರೆ. ದಾವಣಗೆರೆಯ ಸರ್ ಎಂವಿ ಪಿಯು ಕಾಲೇಜಿನ ಅಮೂಲ್ಯ ದ್ವಿತೀಯ ಸ್ಥಾನ ಹಾಗೂ ದಾವಣಗೆರೆಯ ಶ್ರೀ ಚೈತನ್ಯ ಪಿಯು ಕಾಲೇಜಿನ ಸುಚಿತಾ ತೃತೀಯ ಸ್ಥಾನ ಗಳಿಸಿದ್ದಾರೆ.
ಡಿ-ಫಾರ್ಮ (D-Pharm) ವಿಭಾಗದಲ್ಲಿ ನಯನ ಗೋಪಿ ಪ್ರಥಮ, ಅಮೂಲ್ಯ ದ್ವಿತೀಯ, ಸುಚಿತಾ ತೃತೀಯ ಸ್ಥಾನ ಪಡೆದಿದ್ದಾರೆ. ರಾಜ್ಯಾದ್ಯಂತ ಒಟ್ಟು 745 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆದಿತ್ತು. 1,86,099 ವಿದ್ಯಾರ್ಥಿನಿಯರು ಹಾಗೂ 1,44,380 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.


