ಉದಯಕಾಲ ನ್ಯೂಸ್, ನವದೆಹಲಿ: ಪ್ರಸ್ತುತ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಹಾಗೂ ಖ್ಯಾತ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ (Prashant Bhushan), ದೇಶದಲ್ಲಿ ಖಂಡಿತವಾಗಿಯೂ ಆಡಳಿತ ಬದಲಾವಣೆಯಾಗಲಿದೆ ಎಂದು ದೆಹಲಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರೊಂದಿಗೆ ಜಂಟಿಯಾಗಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಸರ್ಕಾರದ ಜನವಿರೋಧಿ ನೀತಿಗಳಿಂದ ಬೇಸತ್ತಿರುವ ದೇಶದ ಜನತೆ ಬದಲಾವಣೆಯ ನಿರೀಕ್ಷೆಯಲ್ಲಿದ್ದಾರೆ ಎಂದರು.
ಪ್ರಶಾಂತ್ ಭೂಷಣ್ ಪ್ರಮುಖ ನುಡಿಗಳು
ಆಡಳಿತ ಬದಲಾವಣೆ ಪ್ರಜಾಸಭುತ್ವದ ಹಕ್ಕು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಆಡಳಿತ ವ್ಯವಸ್ಥೆ ಅಥವಾ ಸರ್ಕಾರ ಬದಲಾಗಬೇಕು ಎಂದು ಬಯಸುವುದು ಜನರ ಮೂಲಭೂತ ಹಕ್ಕು. ಹಾಗೆ ಆಶಿಸುವುದರಲ್ಲಿ ಅಥವಾ ಬಯಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಬಲವಾಗಿ ಸಮರ್ಥಿಸಿಕೊಂಡರು.
ವ್ಯವಸ್ಥೆಯ ವಿರುದ್ಧ ಅಸಮಾಧಾನ
ದೇಶದಲ್ಲಿ ಬೆಲೆ ಏರಿಕೆ, ಉದ್ಯೋಗ ನಷ್ಟ ಹಾಗೂ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಕುರಿತು ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಪ್ರಶಾಂತ್ ಭೂಷಣ್, ಪ್ರಸ್ತುತ ರಾಜಕೀಯ ನಾಯಕತ್ವದ ವಿರುದ್ಧ ನಾಗರಿಕರು ಧ್ವನಿಯೆತ್ತುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
‘ರೆಜಿಮ್ ಚೇಂಜ್’ ಕುರಿತು ಚರ್ಚೆ
ಅಸ್ತಿತ್ವದಲ್ಲಿರುವ ರಾಜಕೀಯ ಸರ್ಕಾರ ಅಥವಾ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಿ ಹೊಸ ವ್ಯವಸ್ಥೆಯನ್ನು ತರುವುದೇ ರೆಜಿಮ್ ಚೇಂಜ್’. ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶ, ಸಿರಿಯಾ ಹಾಗೂ ವೆನೆಜುವೆಲಾದಂತಹ ದೇಶಗಳಲ್ಲಿ ನಡೆದ ರಾಜಕೀಯ ಪರಿವರ್ತನೆಗಳ ಉದಾಹರಣೆಗಳೊಂದಿಗೆ ಭಾರತದಲ್ಲೂ ಅಂತಹ ಬದಲಾವಣೆಯ ಗಾಳಿ ಬೀಸಲಿದೆ ಎಂಬ ಅರ್ಥದಲ್ಲಿ ಅವರು ನೀಡಿರುವ ಹೇಳಿಕೆ ಇದೀಗ ರಾಷ್ಟ್ರಮಟ್ಟದಲ್ಲಿ ಭಾರೀ ರಾಜಕೀಯ ಚರ್ಚೆಗೆ ಹಾಗೂ ಪರ-ವಿರೋಧ ವಾದಗಳಿಗೆ ಗ್ರಾಸವಾಗಿದೆ.
#PrashantBhushan #RegimeChange #SupremeCourt #CJP #DelhiNews #IndianPolitics #Udayakala #PoliticalNews #LatestUpdates


