ಬಲವಂತದ ಕಾರ್ಮಿಕರ ಶ್ರಮದಿಂದ ಉತ್ಪಾದಿಸಲಾದ ವಸ್ತುಗಳ ಬಳಕೆ ತಡೆ ಉದ್ದೇಶದಿಂದ ಅಮೆರಿಕವು ಭಾರತ ಸೇರಿದಂತೆ 17 ದೇಶಗಳಿಂದ ಆಮದು ಆಗುವ ಸರಕುಗಳ ಮೇಲೆ ಶೇ.10ರ ಸುಂಕ ವಿಧಿಸಿದೆ. 1974ರ ಟ್ರೇಡ್ ಆ್ಯಕ್ಟ್‌ನ ಸೆಕ್ಷನ್ 301 ಅಡಿ ಅಮೆಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಸುಂಕ ಘೋಷಿಸಿದ್ದು, ಮಧ್ಯರಾತ್ರಿ 12.01 ಗಂಟೆಯಿಂದ ಜಾರಿಗೆ ಬಂದಿದೆ.
ಬಲವಂತದ ಕಾರ್ಮಿಕರ ಶ್ರಮದಿಂದ ಉತ್ಪಾದಿಸಲಾದ ಸರಕುಗಳ ಆಮದನ್ನು ನಿಷೇಧಿಸುವ ಕಾನೂನುಗಳ ಜಾರಿ ತರಲು ಮತ್ತು ಪರಿಣಾಮಕಾರಿ ಅನುಷ್ಠಾ ವಿಫಲವಾದ ಕಾರಣ, ಒಟ್ಟು 60 ಆರ್ಥಿಕ ವ್ಯವಸ್ಥೆಗಳ ಮೇಲೆ ಈ
ಸುಂಕ ವಿಧಿಸಿದೆ. ಭಾರತ, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೇರಿದಂತೆ 17 ದೇಶಗಳಿಗೆ ಶೇ.10 ಉಳಿದ 43 ದೇಶಗಳಿಗೆ ಶೇ.12.5 ಸುಂಕ ವಿಧಿಸಲಾಗಿದೆ.
ಅಮೆರಿಕವು ಭಾರತದ ಎರಡನೇ ಅತಿ ದೊಡ್ಡ ವ್ಯಾಪಾರ ಪಾಲುದಾರ ಹಾಗೂ ಅತಿ ದೊಡ್ಡ ರಫ್ತು ಮಾರುಕಟ್ಟೆಯಾಗಿದೆ. ವಾಣಿಜ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, 2025ರಲ್ಲಿ ಉಭಯ ದೇಶಗಳ ನಡುವಿನ ಸರಕು ವ್ಯಾಪಾರದ ಮೌಲ್ಯ 141 ಬಿಲಿಯನ್ ಅಮೆರಿಕ ಡಾಲರ್. ಇದರಲ್ಲಿ ಭಾರತದ ರಫ್ತು 87.3 ಬಿಲಿಯನ್ ಅಮೆರಿಕ ಡಾಲರ್ ಮೌಲ್ಯದ್ದಾಗಿದೆ.
ಡೊನಾಲ್ಡ್ ಟ್ರಂಪ್ ಅಮೆರಿಕದ ಔಷಧ ಉತ್ಪಾದನಾ ವಲಯವನ್ನು ಬಲಪಡಿಸುವ ಉದ್ದೇಶದಿಂದ ಅಮೆರಿಕಕ್ಕೆ ಆಮದು ಆಗುವ ಜೆನೆರಿಕ್ ಔಷಧಗಳ ಮೇಲೆ 2028ರಿಂದ ಸುಂಕ ವಿಧಿಸಲು ಮುಂದಾಗಿದೆ.
ಈ ಕ್ರಮದಿಂದ ಅಮೆರಿಕಕ್ಕೆ ಅತಿ ಹೆಚ್ಚು ಜೆನೆರಿಕ್ ಔಷಧಗಳನ್ನು ರಫ್ತು ಮಾಡುವ ಭಾರತಕ್ಕೆ ದೊಡ್ಡ ಹೊಡೆತ ಬೀಳಲಿದೆ.
2026ರ ಆಗಸ್ಟ್ 1ರಿಂದ ಎರಡು ವರ್ಷ ಜೆನೆರಿಕ್ ಔಷಧಗಳ ಮೇಲೆ ಯಾವುದೇ ಸುಂಕ ವಿಧಿಸಲಾಗುವುದಿಲ್ಲ. 2028ರ ಆಗಸ್ಟ್‌ನಿಂದ ಒಂದು ವರ್ಷದ ಅವಧಿಗೆ ಶೇ.100 ಹಾಗೂ ನಂತರದ ವರ್ಷಗಳಿಂದ ಶೇ.200 ಸುಂಕ ಜಾರಿಗೆ ಬರಲಿದೆ ಎಂದಿದ್ದಾರೆ.
ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕದಲ್ಲೇ ಕಾರ್ಖಾನೆ ಹಾಗೂ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಅವಕಾಶವನ್ನು ಕಂಪನಿಗಳಿಗೆ ನೀಡಲಾಗಿದ್ದು, ಅದನ್ನು ಬಳಸದೇ ವಿದೇಶಗಳಿಂದಲೇ ಔಷಧಗಳನ್ನು ಆಮದು ಮಾಡುವ ಕಂಪನಿಗಳಿಗೆ ಸುಂಕದ ಹೊರೆ ಬೀಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಪೇಟೆಂಟ್ ಹೊಂದಿರುವ, ಬ್ರಾಂಡೆಡ್ ಅಥವಾ ನವೀನ ಔಷಧಗಳಿಗೆ ಈಗಿರುವ ನೀತಿ ಬದಲಾವಣೆ ಮಾಡುವುದಿಲ್ಲ ಎಂದೂ ಟ್ರಂಪ್ ತಿಳಿಸಿದ್ದಾರೆ.


