ಶಿವರಾಜ ತಂಗಡಗಿ
8 ರಿಂದ ಟಿಬಿ ಡ್ಯಾಂ 32 ಗೇಟ್ ಬದಲಾವಣೆ ಕಾರ್ಯಾರಂಭ: ಸಚಿವ ಶಿವರಾಜ ತಂಗಡಗಿ
ಕೊಪ್ಪಳ: ಡಿಸೆಂಬರ್ 8 ರಿಂದ ಜಿಲ್ಲೆಯ ಮುನಿರಾಬಾದ್ನಲ್ಲಿರುವ ತುಂಗಭದ್ರಾ ಜಲಾಶಯದ 32 (ಈಗಾಗಲೇ ಒಂದು ಗೇಟ್ ಬದಲಿಸಲಾಗಿದೆ.) ಕ್ರಸ್ಟ್ಗೇಟ್ಗಳನ್ನು ಬದಲಾಯಿಸುವ ಕಾರ್ಯ ಆರಂಭವಾಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಕರ್ನಾಟಕ ನೀರಾವರಿ ನಿಗಮದ ಮುನಿರಾಬಾದ್ನ ಸಿಇ ಕಚೇರಿಯಲ್ಲಿ ಶನಿವಾರ ಜಲಾಶಯದ ಬೋರ್ಡ್ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪಶ್ಚಿಮ ಬಂಗಾಲದ ಪಾರಕ್


