ಬೆಳಗಾವಿ ಅಧಿವೇಶನ
23 ವಿಧೇಯಕಗಳಿಗೆ ಅಂಗೀಕಾರ, ಗೃಹಲಕ್ಷ್ಮಿ ಹಣ ಪಾವತಿ ಗದ್ದಲ, ಪವರ್ ಫೈಟ್ ಚರ್ಚೆ!
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ 10 ದಿನಗಳ ಕಾಲ ನಡೆದ ಚಳಿಗಾಲದ ವಿಧಾನಸಭೆ ಅಧಿವೇಶನ ಶುಕ್ರವಾರ(ಡಿ.19) ಮುಕ್ತಾಯವಾಯಿತು. ದ್ವೇಷ ಭಾಷಣ ನಿಯಂತ್ರಣ ಮಸೂದೆ ಸೇರಿ 23 ವಿಧೇಯಕಗಳಿಗೆ ಅಂಗೀಕಾರ, ಉತ್ತರ ಕರ್ನಾಟಕದ ಸಮಸ್ಯೆಗಳು ಮತ್ತು ಅವುಗಳ ಮೇಲಿನ ಚರ್ಚೆಗಳು ನಡೆದರೆ, ಗೃಹಲಕ್ಷ್ಮಿ ಹಣ ಪಾವತಿ ಗದ್ದಲ, ಪವರ್ ಫೈಟ್ ಚರ್ಚೆಗೆ ಇನ್ನಷ್ಟು ಕಿಚ್ಚು ಹಚ್ಚಿಸುವ ವೇದಿಕೆಯಾಗುವುದರೊಂದಿಗೆ ಈ ಬಾರಿಯ ಚಳಿಗಾಲದ ಅಧಿವೇಶನ ಮುಕ್ತಾಯವಾಗಿದೆ. ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕದ ಚರ್ಚೆಗೆ


