Menu

ಕೆಲಸದ ವೇಳೆ ನಿದ್ದೆ ಮಾಡಿದ್ದಕ್ಕೆ ಅಮಾನತು: ಆದೇಶ ರದ್ದುಗೊಳಿಸಿದ ಹೈಕೋರ್ಟ್‌

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕೊಪ್ಪಳದ ಕುಕನೂರು ಡಿಪೋದಲ್ಲಿ ಕೆಎಸ್‌ಟಿ ಕಾನ್ಸ್‌ಟೆಬಲ್‌ ಚಂದ್ರಶೇಖರ್‌ ಎಂಬವರನ್ನು ಕೆಲಸದ ವೇಳೆ ನಿದ್ರೆ ಮಾಡುತ್ತಿದ್ದರೆಂಬ ಕಾರಣಕ್ಕೆ ಸೇವೆಯಿಂದ ಅಮಾನತುಗೊಳಿಸಿದ್ದ ನಿಗಮದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ. ನಿದ್ರೆ ಮನುಷ್ಯನಿಗೆ ಅತ್ಯಗತ್ಯ. ನಿದ್ರೆ ಮತ್ತು ಕೆಲಸದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಬಿಡುವಿಲ್ಲದೆ 60 ದಿನ ದಿನಕ್ಕೆ 16 ಗಂಟೆ ಕೆಲಸ ಮಾಡಿಸಿದ್ದರಿಂದ ಸಹಜವಾಗಿಯೇ ನಿದ್ರೆ ಮಾಡಿರಬಹುದು. ಅಮಾನತು ಕ್ರಮ ಸರಿಯಲ್ಲ ಎಂದು ಕೋರ್ಟ್‌ ಹೇಳಿದೆ. ಅಮಾನತು ಆದೇಶ

ಎಸ್ಸೆಸ್ಸೆಲ್ಸಿ, ಸೆಕೆಂಡ್‌ ಪಿಯು ಪರೀಕ್ಷಾರ್ಥಿಗಳಿಗೆ ಕೆಎಸ್ಸಾರ್ಟಿಸಿಯಿಂದ ಉಚಿತ ಪ್ರಯಾಣ

ಎಸ್ಸೆಸ್ಸೆಲ್ಸಿ (10ನೇ ತರಗತಿ) ಮತ್ತು ದ್ವಿತೀಯ ಪಿಯುಸಿ (12ನೇ ತರಗತಿ) ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯ ಸಮಯದಲ್ಲಿ ಉಚಿತ ಬಸ್ ಪ್ರಯಾಣವನ್ನು ಒದಗಿಸುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಕಟಿಸಿದೆ. ಎಸ್ಎಸ್ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ

ಯಾದಗಿರಿಯಲ್ಲಿ ಭೀಕರ ಅಪಘಾತ: ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ 5 ಮಂದಿ ಸಾವು

ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 5 ಮಂದಿ ಮೃತಪಟ್ಟ ದಾರುಣ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಸಂಭವಿಸಿದೆ. ಯಾದಗಿರಿ ಜಿಲ್ಲೆಯ ಸುರಪುರ ತಿಂಥಣಿ ಬಳಿ ಬುಧವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದ್ದು, ಆಂಜನೇಯ

ಟ್ರ್ಯಾಕ್ಟರ್ -ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ: ಗರ್ಬಿಣಿ ಸೇರಿ ಇಬ್ಬರ ಸಾವು

ಸಾರಿಗೆ ಬಸ್ ಮತ್ತು ರೈತರ ಟ್ರ್ಯಾಕ್ಟರ್ ನಡುವೆ ಸಂಭವಿಸಿದ  ಡಿಕ್ಕಿಯಲ್ಲಿ ಗರ್ಭಿಣಿ ಸೇರಿ ಇಬ್ಬರು ಸಾವಿಗಿಡಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಸಂಭವಿಸಿದೆ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನಿಗೋಳ ಸಮೀಪ ಗುರುವಾರ ಮುಂಜಾನೆ ಜರುಗಿದ್ದು, ಶ್ರೀದೇವಿ ರಾಮಣ್ಣ (18)

ದಿಲ್ದಾರ ಮಂದಿ ಚರ್ಮದ ಸೈಜ್ ಗೊತ್ತಾಗುದೇ ಇಲ್ಲಿ!

ಇಲ್ಲಿ ಮಂದಿ ?ಲ್ ದಿಲ್ದಾರ ಇವ್ರು?! ತಲೆ ಬಿಸಿ ಅಂಬು ಶಬ್ದಾನೆ ಅವರ ಕುಡೆ ಇಲ್ಲಾ. ಹಂಗಾಗೆ ಅವರು ತಲಿಮ್ಯಾನೆ ಕುಂತಿದ್ದು, ಮಂದಿ ಸೇವೆ ಮಾಡ್ತೆವು ಹೇಳಿಕಂಡ ಜನ ಪ್ರತಿನಿಧಿಗಳು ಮತ್ತ ಸರಕಾರದ ಕೆಲಸ ದೇವರ ಕೆಲಸ ಅಂತೆ ಡೌ ಮಾಡುಕೆ

ಕೆಎಸ್ಆರ್ ಟಿಸಿ ಆರೋಗ್ಯ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ನೌಕರರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆ ಕೆ.ಎಸ್.ಆರ್.ಟಿ.ಸಿ ಆರೋಗ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಈ ಯೋಜನೆಯಡಿ ಒಡಬಂಡಿಕೆ ಮಾಡಿಕೊಂಡಿರುವ ಎಲ್ಲಾ ಆಸ್ಪತ್ರೆಗಳು ಕೆ.ಎಸ್.ಆರ್.ಟಿ.ಸಿ ನೌಕರರು ಮತ್ತು ಕುಟುಂಬದವರು ಚಿಕಿತ್ಸೆಗೆ ಬಂದ ಸಂದರ್ಭದಲ್ಲಿ ಅವರನ್ನು

ಬಸ್‌ ಟಿಕೆಟ್‌ ದರ ಹೆಚ್ಚಳ ವಿರುದ್ಧ ಬಿಜೆಪಿ ಪ್ರತಿಭಟನೆ

ರಾಜ್ಯ ಸರ್ಕಾರ ಬಸ್ ಟಿಕೆಟ್‌  ದರ ಏರಿಕೆ ಮಾಡಿರುವುದರ  ವಿರುದ್ಧ ವಿಧಾನಸಭೆ ಪ್ರತಿಪಕ್ಷದ ನಾಯಕಆರ್. ಅಶೋಕ್ ಹಾಗೂ ಬಿಜೆಪಿ ನಾಯಕರು ಮೆಜೆಸ್ಟಿಕ್‌ನಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಅಶೋಕ್‌ ಅವರು ಪ್ರಯಾಣಿಕರಿಗೆ ಹೂ ನೀಡಿ ರಾಜ್ಯ ಸರ್ಕಾರ ಬಸ್‌ ಟಿಕೆಟ್‌ ದರ

10 ವರ್ಷದ ನಂತರ ಜನತೆಗೆ ಬಸ್ ಪ್ರಯಾಣ ದರ ಏರಿಕೆ ಬಿಸಿ

10 ವರ್ಷಗಳ ಬಳಿಕ ರಾಜ್ಯದಲ್ಲಿ ಬಸ್ ಪ್ರಯಾಣದರವನ್ನು ರಾಜ್ಯ ಸರ್ಕಾರ​ ಹೆಚ್ಚಳ ಮಾಡಿದ್ದು ಜ.5‌ ರ ಭಾನುವಾರದಿಂದಲೇ ಹೆಚ್ಚಳವಾಗಿರುವ ಶೇ 15 ರಷ್ಟು ಟಿಕೆಟ್ ದರವು ಜಾರಿಗೆ ಬರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ಬಸ್

ಬಸ್ ಪ್ರಯಾಣ ದರ ಶೇ.15ರಷ್ಟು ಏರಿಕೆಗೆ ರಾಜ್ಯ ಸಚಿವ ಸಂಪುಟ ಅಸ್ತು

ಸಾರಿಗೆ ನಿಗಮಗಳ ಬಹುದಿನಗಳ ಬೇಡಿಕೆಯಾದ ಬಸ್ ಪ್ರಯಾಣ ದರದಲ್ಲಿ ಶೇ.15ರಷ್ಟು ಏರಿಕೆ ಮಾಡಲು ರಾಜ್ಯ ಸಚಿವ ಸಂಪುಟ ಅನಮೋದನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಶೇ.15ರಷ್ಟು ಬಸ್ ಪ್ರಯಾಣ ದರ ಏರಿಸಲು ತೀರ್ಮಾನಿಸಲಾಯಿತು. ಸಾರಿಗೆ