kannada news
ಪತಿ ಮಗುವನ್ನು ಅಪಹರಿಸಿರುವುದಾಗಿ ಪತ್ನಿ ದೂರು
ನನ್ನ ಪತಿಯೇ ಐದು ವರ್ಷದ ಮಗನನ್ನು ಕಿಡ್ನಾಪ್ ಮಾಡಿದ್ದಾನೆ, ದಯವಿಟ್ಟು ನನ್ನ ಮಗನನ್ನು ಹುಡುಕಿಕೊಡಿ ಎಂದು ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಪ್ರಕರಣ ಮಡಿಕೇರಿ ತಾಲೂಕಿನ ಕಾಂತೂರು ಮೂರ್ನಾಡುವಿನಲ್ಲಿ ನಡೆದಿದೆ. ಮೂರ್ನಾಡು ಗ್ರಾಮದ ನಿವಾಸಿ ಭವ್ಯ ಮಹಿಳೆ ಆರು ತಿಂಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಮಗುವಿನೊಂದಿಗೆ ತಾಯಿಯ ಮನೆಯಲ್ಲಿ ವಾಸವಿದ್ದಾರೆ. ತಾನು ವಾಸವಿರುವ ಮನೆಗೆ ಬಂದ ಪತಿ ತಿಮ್ಮಯ್ಯ , ಮಗುವನ್ನು ಕರೆದುಕೊಂಡು ಪರಾರಿಯಾಗಿದ್ದಾನೆ ಎಂದು ಮಹಿಳೆ
ಜಾಗತಿಕ ತೈಲ ಬೆಲೆ ಗಣನೀಯ ಕುಸಿತ, ಪೆಟ್ರೋಲ್, ಡಿಸೇಲ್ ದರ ಇಳಿಕೆ?
ಯುದ್ಧ ವಿರಾಮ ಘೋಷಣೆಯೊಂದಿಗೆ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದ ಜಾರಿ ನೀರಿಕ್ಷೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಶಮನದ ಹಾದಿಯಲ್ಲಿದೆ, ಈ ಹಿನ್ನೆಲೆ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಬ್ರೆಂಟ್ ಕ್ರೂಡ್ ಬೆಲೆ ಒಂದೇ ದಿನದಲ್ಲಿ
ಪ್ರತಿಪಕ್ಷಗಳ ವದಂತಿಗಳಿಗೆ ಕಿವಿಗೊಡಬೇಡಿ, ಯಾವುದೇ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ: ಸಿಎಂ
ಕಾಂಗ್ರೆಸ್ ಸರಕಾರದ ಹೆಮ್ಮೆಯ ಗ್ಯಾರಂಟಿ ಯೋಜನೆಗಳಾದ “ಗೃಹಲಕ್ಷ್ಮಿ” ಮತ್ತು “ಗೃಹಜ್ಯೋತಿ” ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಈ ಬಗ್ಗೆ ವಿರೋಧ ಪಕ್ಷಗಳು ಹಬ್ಬಿಸುತ್ತಿರುವ ಸುಳ್ಳು ಸುದ್ದಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಲವರು ಸತ್ತವರ
ಶಿವಮೊಗ್ಗದಲ್ಲಿ ರೌಡಿಶೀಟರ್ ಮುಖ ಗುರುತು ಸಿಗದಂತೆ ಕೊಚ್ಚಿ ಕೊಲೆಗೈದ ಐವರ ಬಂಧನ
ಶಿವಮೊಗ್ಗ ನಗರದ ಗಾಂಧಿ ಬಜಾರ್ 1ನೇ ಕ್ರಾಸ್‌ನ ಕರಿದೇವರ ಕೇರಿಯಲ್ಲಿ ರೌಡಿಶೀಟರ್ ನರಸಿಂಹ (39) ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಪ್ರಕರಣ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಅಂಬು ಅನಿಲ್, ಮಧು, ರವಿ, ಹಾಗೂ ಕತ್ತೆ ಕಾರ್ತಿಕ್,
ಬಾಲಕಿಯ ಅತ್ಯಾಚಾರವೆಸಗಿ ವೀಡಿಯೊ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಫುಟ್ಬಾಲ್ ಕೋಚ್
ಫುಟ್ಬಾಲ್ ಪಟುವಾಗಿರುವ ಬಾಲಕಿಯ ಮೇಲೆ ತರಬೇತುದಾರ ಮೂರು ವರ್ಷ ಅತ್ಯಾಚಾರ ಎಸಗಿದ್ದಲ್ಲದೆ, ವೀಡಿಯೊ ಮಾಡಿ ಬ್ಲ್ಯಾಕ್ ಮೇಲ್ ಮಾಡಿರುವ ಪ್ರಕರಣವೊಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಯಾಗಿರುವ ಖಾಸಗಿ ಫುಟ್‌ಬಾಲ್ ತರಬೇತುದಾರ 36 ವರ್ಷದ ಅಭಿಜಿತ್ ಮೆಂಡಲ್ ಎಂಬಾತನನ್ನು ಪೊಲೀಸರು
ಭಾರತದ ಸೇನಾ ಮುಖ್ಯಸ್ಥರಾಗಿ ಲೆ.ಜ ಧೀರಜ್ ಸೇಠ್
ಭಾರತದ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನು ನೇಮಕಗೊಳಿಸಿ ಕೇಂದ್ರ ಸರ್ಕಾರ ದೇಶ ಪ್ರಕಟಿಸಿದೆ. ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ನಿವೃತ್ತಿ ಬಳಿಕ ಧೀರಜ್ ಸೇಠ್ ಜೂನ್ 30 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಧೀರಜ್ ಸೇಠ್ ಸೇನಾ
ರೈತರ ಆಕ್ರೋಶಕ್ಕೆ ಕಾಂಗ್ರೆಸ್ ಸರ್ಕಾರ ಭಸ್ಮವಾಗಲಿದೆ: ಆರ್ ಅಶೋಕ
ರೈತರ ಜಮೀನಿನ ಮೇಲೆ ಬುಲ್ಡೋಜರ್ ಓಡಿಸಿ, ರಿಯಲ್ ಎಸ್ಟೇಟ್ ಸಾಮ್ರಾಜ್ಯ ಕಟ್ಟಲು ಹೊರಟಿರುವ Commission Minister @DKShivakumar ಅವರೇ, ಅನ್ನದಾತರ ಆಕ್ರೋಶದ ಜ್ವಾಲೆಯಲ್ಲಿ ಕಾಂಗ್ರೆಸ್ ಸರ್ಕಾರ ಭಸ್ಮವಾಗಬೇಕಾಗುತ್ತದೆ, ಎಚ್ಚರಿಕೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಜಮೀನಿನ
ಕಾಲೇಜು ಫೀಸ್ ಹಣವನ್ನು ಸಾಲ ನೀಡಿದ ವಿದ್ಯಾರ್ಥಿನಿ ವಾಪಸ್ ಸಿಗದೆ ಆತ್ಮಹತ್ಯೆ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದಲ್ಲಿ ಕಾಲೇಜು ಶುಲ್ಕ ಕಟ್ಟಲು ತಂದೆ ನೀಡಿದ್ದ ಹಣವನ್ನು ಪರಿಚಯಸ್ಥನಿಗೆ ಸಾಲವಾಗಿ ನೀಡಿದ್ದ ವಿದ್ಯಾರ್ಥಿನಿ, ಆ ಹಣ ಮರಳಿ ಸಿಗದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಭಟ್ಕಳದಲ್ಲಿ ಬಿಸಿಎ ವ್ಯಾಸಂಗ
ಮನೆಯೊಳಗೆ ನುಗ್ಗಿ ಯೂಟ್ಯೂಬರ್‌ನ ಹತ್ಯೆ
ಯೂಟ್ಯೂಬರ್ ಒಬ್ಬರನ್ನು ಮನೆಯೊಳಗೆ ಕೊಲೆ ಮಾಡಿರುವ ಘಟನೆ ಹೈದರಾಬಾದ್‌ನ ಗೋಲ್ಕೊಂಡ ಪ್ರದೇಶದಲ್ಲಿ ನಡೆದಿದೆ. ಶೈಕ್ ಮಹಬೂಬ್ ಅಲಿಯಾಸ್ ಚಾಂಡಿ ಮಸೂದ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಗೋಲ್ಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ಕುಮಾರ್‌ವಾಡಿಯಲ್ಲಿ ಕೃತ್ಯ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಸೂದ್ ಮಸೀದಿಯಿಂದ
ನಿಪಾ ವೈರಸ್: ಕೇರಳ, ತಮಿಳುನಾಡು, ಕರ್ನಾಟಕ ಗಡಿಗಳಲ್ಲಿ ಅಲರ್ಟ್
ಕೇರಳದ ಕೋಝಿಕ್ಕೋಡ್‌ನಲ್ಲಿ ವ್ಯಕ್ತಿಗೆ ನಿಪಾ ವೈರಸ್ ತಗುಲಿರುವುದು ದೃಢಪಟ್ಟ ಬಳಿಕ ಕೇರಳ- ತಮಿಳುನಾಡು ಗಡಿಯಲ್ಲಿ ಆರೋಗ್ಯಾಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದು, ಕರ್ನಾಟಕದ ಗಡಿಯಲ್ಲೂ ಹೆಚ್ಚಿನ ಅಲರ್ಟ್ ಕೈಗೊಳ್ಳಲಾಗಿದೆ. ಕೇರಳದಿಂದ ಬರುವ ಜನರಿಗೆ ಪರೀಕ್ಷೆ ನಡೆಸಿದ ನಂತರವೇ ತಮಿಳುನಾಡಿಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ. ಕೇರಳದೊಂದಿಗೆ




