kannada news
ಪ್ರಧಾನಿ ಮೋದಿಯನ್ನು ಸ್ವಾಗತಿಸಿ ಪ್ರಮುಖ ಬೇಡಿಕೆಗಳ ಮನವಿ ಸಲ್ಲಿಸಿದ ಸಿಎಂ
ಮಂಡ್ಯದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿಯವರನ್ನು ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿ, ರಾಜ್ಯದ ಪ್ರಮುಖ ಸಮಸ್ಯೆಗಳು ಹಾಗೂ ಅಭಿವೃದ್ಧಿ ಯೋಜನೆಗಳ ಕುರಿತಾದ 18 ಪ್ರಮುಖ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಮಾಹಿತಿ ತಂತ್ರಜ್ಞಾನ, ಉತ್ಪಾದನೆ, ಕೃಷಿ ಹಾಗೂ ಸೇವಾ ಕ್ಷೇತ್ರಗಳಲ್ಲಿ ಕರ್ನಾಟಕದ ರಾಷ್ಟ್ರೀಯ ಆರ್ಥಿಕತೆಗೆ ನೀಡಿರುವ ಕೊಡುಗೆಯನ್ನು ಉಲ್ಲೇಖಿಸಿದರು. ದೇಶದ ಖಜಾನೆಗೆ ಮಹತ್ತರ ಕೊಡುಗೆ ನೀಡುತ್ತಿದ್ದರೂ, ರಾಜ್ಯಕ್ಕೆ ಸಂಬಂಧಿಸಿದ ಹಲವಾರು ಬಾಕಿ
“ಟೆರಿಯಾ ಬೈ ವಂಡರ್‌ಲಾ” ರೆಸಾರ್ಟ್ ಅನಾವರಣ
ಭಾರತದ ಅತಿದೊಡ್ಡ ಅಮ್ಯೂಸ್ಮೆಂಟ್ ಪಾರ್ಕ್ ನಿರ್ವಹಣಾ ಸಂಸ್ಥೆಯಾದ ವಂಡರ್‌ಲಾ ಹಾಲಿಡೇಸ್ ಬೆಂಗಳೂರಿನ ವಂಡರ್ಲಾ ಪಾರ್ಕ್ ಪಕ್ಕದಲ್ಲೇ ‘ಟೆರಿಯಾ ಬೈ ವಂಡರ್‌ಲಾ’ ಎಂಬ ಹೊಸ ರೆಸಾರ್ಟ್ ಪ್ರಾರಂಭಿಸಿದೆ. ಇದು ಪ್ರಕೃತಿ ಮತ್ತು ಭೂಮಿಯಿಂದ ಪ್ರೇರಿತವಾದ ವಿನ್ಯಾಸವನ್ನು ಹೊಂದಿರುವ ಅತ್ಯಾಧುನಿಕ ಅರ್ಬನ್ ರೆಸಾರ್ಟ್ ಆಗಿದೆ.
ಆದಿಚುಂಚನಗಿರಿ ಮಠದಲ್ಲಿ ‘ಶ್ರೀ ಗುರು ಭೈರವೈಕ್ಯ ಮಂದಿರ’ ಉದ್ಘಾಟಿಸಿದ ಪ್ರಧಾನಿ ಮೋದಿ
ಮಂಡ್ಯ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಿರ್ಮಾಣಗೊಂಡಿರುವ ‘ಶ್ರೀ ಗುರು ಭೈರವೈಕ್ಯ ಮಂದಿರ’ವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಕೇಂದ್ರ ಸಚಿವರಾದ ಎಚ್‌ಡಿ ಕುಮಾರಸ್ವಾಮಿ, ಸಚಿವೆ ಶೋಭಾ ಕರಂದ್ಲಾಜೆ, ನಿರ್ಮಲಾನಂದ ಸ್ವಾಮೀಜಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮಾಜಿ ಪ್ರಧಾನಿ ದೇವೇಗೌಡ, ಸಚಿವ
ಡಿಎಂಕೆ ಹಾಗೂ ಮಿತ್ರಪಕ್ಷಗಳಿಗೆ ಮೂರನೇ ಎರಡರಷ್ಟು ಸ್ಥಾನಗಳ ಸುಲಭ ಬಹುಮತ
“ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಹಾಗೂ ಮಿತ್ರಪಕ್ಷಗಳು ಸುಲಭವಾಗಿ ಮೂರನೇ ಎರಡರಷ್ಟು ಸ್ಥಾನಗಳ ಬಹುಮತ ಗಳಿಸಲಿವೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಹಾಗೂ ಡಿಎಂಕೆ ಮೈತ್ರಿಗೆ ದೊಡ್ಡ ಇತಿಹಾಸವೇ ಇದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ
ಹುಕ್ಕೇರಿಯಲ್ಲಿ ಪತಿಯ ತೊರೆದು ಪ್ರಿಯಕರನ ಜೊತೆ ಹೋದ ತಂಗಿಗೆ ವಿಷವಿಕ್ಕಿ ಹತ್ಯೆ
ಪತಿಯನ್ನು ಬಿಟ್ಟು ಪ್ರಿಯಕರನೊಂದಿಗೆ ತೆರಳಿದ್ದ ಯುವತಿಗೆ ಸೋದರ ಸೇರಿದಂತೆ ಕುಟುಂಬದವರು ವಿಷವಿಕ್ಕಿ ಸಾಯಿಸಿ ಸಾಕ್ಷಿ ನಾಶಪಡಿಸಲು ಶವವನ್ನು ಸುಟ್ಟು ಹಾಕಿರುವ ಘಟನೆ ಬೆಳಗಾವಿಯ ಹುಕ್ಕೇರಿ ನದಿಗುಡಿ ಪ್ರದೇಶದಲ್ಲಿ ನಡೆದಿದೆ. ಸತ್ತೆವ್ವಾ ಹೆಳವರ್ (25) ಎಂಬ ಯುವತಿಯನ್ನು ಕುಟುಂಬಸ್ಥರೇ ವಿಷ ನೀಡಿ ಹತ್ಯೆ
ವಿಜಯಪುರದಲ್ಲಿ ಗುಂಡಿಕ್ಕಿ ರಿಯಲ್ ಎಸ್ಟೇಟ್ ಉದ್ಯಮಿಯ ಹತ್ಯೆ
ವಿಜಯಪುರ ಹೊರವಲಯದ ಅಲಿಯಾಬಾದ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಜೊತೆಗೆ ಕೃಷಿಕನಾಗಿದ್ದ ವ್ಯಕ್ತಿಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ನಡೆದಿದೆ. ರಾಜು ಕಡೆ ಗುಂಡಿನ ದಾಳಿಗೆ ಬಲಿಯಾದ ವ್ಯಕ್ತಿ. ಆತ ಕಾರಿನಲ್ಲಿ ವಿಜಯಪುರದತ್ತ ಬರುತ್ತಿರುವಾಗ ಹಂತಕರು ಎದುರಿನಿಂದ ಟಿಪ್ಪರ್ ಗುದ್ದಿಸಿದ್ದಾರೆ. ಕಾರಿನ ಡೋರ್
ಬೆಂಗಳೂರಿನಲ್ಲಿ 14 ವರ್ಷದ ಮಗಳ ಸಾಯಿಸಿ ತಾಯಿ ಆತ್ಮಹತ್ಯೆ
ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿಯಲ್ಲಿ ಮಹಿಳೆಯೊಬ್ಬರು 14 ವರ್ಷದ ಮಗಳನ್ನು ಉಸಿರುಗಟ್ಟಿಸಿ ಸಾಯಿಸಿದ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 40 ವರ್ಷದ ಸುವರ್ಣ ಆತ್ಮಹತ್ಯೆ ಮಾಡಿಕೊಂಡವರು, 14 ವರ್ಷದ ಮಗಳು ಕಾರುಣ್ಯ ಕೊಲೆಯಾದವಳು. ಸುವರ್ಣ ಮೊದಲು
ಹರ್ಮುಜ್ ಜಲಸಂಧಿ ತೆರೆಯಲು ಜಾಗತಿಕ ಒತ್ತಡ ಅಗತ್ಯ
ಹರ್ಮುಜ್ ಜಲಸಂಧಿ ಇರಾನ್ ಹಿಡಿತದಲ್ಲಿದ್ದರೂ ಜಾಗತಿಕ ಮಟ್ಟದಲ್ಲಿ ಆರ್ಥಿಕ ಸಂದಿಗ್ದತೆಗೆ ಕಾರಣವಾಗಿರುವುದರಿಂದ ತೈಲ ಪಡೆಯುವ ಎಲ್ಲ ದೇಶಗಳು ಒಂದುಗೂಡಿ ಅಮೆರಿಕ- ಇರಾನ್ ಮೇಲೆ ಒತ್ತಡ ಹೇರಿ ಜಲಸಂಧಿಯನ್ನು ತೆರವುಗೊಳಿಸುವಂತೆ ಮಾಡುವುದು ಇಂದಿನ ಅಗತ್ಯ. ಇಲ್ಲದಿದ್ದಲ್ಲಿ ಬಹುತೇಕ ದೇಶಗಳು ತೈಲದ ಕೊರತೆಯಿಂದ ಆರ್ಥಿಕ
ಸಂವಿಧಾನವೇ ನಮ್ಮ ದೇಶದ ಭಗವದ್ಗೀತೆ, ಕುರಾನ್, ಬೈಬಲ್: ಡಿಕೆ ಶಿವಕುಮಾರ್
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮುಂದಾಳತ್ವದಲ್ಲಿ ರಚನೆಯಾದ ಸಂವಿಧಾನವೇ ನಮ್ಮ ದೇಶದ ಭಗವದ್ಗೀತೆ, ಕುರಾನ್, ಬೈಬಲ್ ಎಂದು ನಾವು ಪೂಜಿಸಿ ಬದುಕುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್
ಜಮೀನು ದಾರಿಗಾಗಿ ಜಗಳದಲ್ಲಿ ಒಬ್ಬನ ಕೊಲೆ: ಪ್ರತೀಕಾರವಾಗಿ ಮನೆಗೆ ಬೆಂಕಿ
ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ಎರಡು ಎಕರೆ ಜಮೀನಿಗೆ ದಾರಿಗಾಗಿ ಶುರುವಾದ ಜಗಳ ತೀವ್ರಗೊಂಡು ಒಬ್ಬನ ಕೊಲೆಯಾಗಿದೆ. ಈ ಕೊಲೆಗೆ ಪ್ರತೀಕಾರವಾಗಿ ಕೊಲೆ ಮಾಡಿದವರ ಮನೆಗೆ ಕೊಲೆಯಾದವನ ಸೋದರ ಬೆಂಕಿ ಹಚ್ಚಿ ಜೈಲು ಸೇರಿದ್ದಾನೆ. ಮಲ್ಲಪ್ಪ ಮತ್ತು ಅವರ ಅಣ್ಣ ಹನುಮಂತರಾಯನ




