kannada news
ಹಣ ಕೊಡದಿದ್ದರೆ ಸುಸೈಡ್: ತಾಯಿಯ ಬೆದರಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ
ಕುಡಿದ ಮತ್ತಿನಲ್ಲಿದ್ದ ಯುವಕನೊಬ್ಬ ಹಣ ಕೊಡದಿದರೆ ಆತ್ಮಹತ್ಯೆ ಮಾಡಿಕೊಳ್ಳುವೆನೆಂದು ತಾಯಿಯನ್ನು ಬೆದರಿಸಲು ಹೋಗಿ ಆಕಸ್ಮಿಕವಾಗಿ ಮೃತಪಟ್ಟಿರುವ ಘಟನೆ ನೆಲಮಂಗಲದ ರೋಹಿತ್ ನಗರದಲ್ಲಿ ನಡೆದಿದೆ. ವಿಜಯಕುಮಾರ್(28) ಮೃತ ಯುವಕ, ಹುಚ್ಚಾದಿಂದ ಈತ ಪ್ರಾಣ ಕಲೆದುಕೊಂಡಿದ್ದು, ತಾಯಿ ಹಾಗೂ ಕುಟುಂಬ ಕಣ್ಣೀರಿಡುವಂತಾಗಿದೆ. \ಸಂಜೆ ಮದ್ಯ ಸೇವಿಸಿ ಮನೆಗೆ ತೆರಳಿದ್ದ ವಿಜಯ್ ಕುಮಾರ್ ತಾಯಿ ಬಳಿ ಖರ್ಚಿಗೆ ಹಣ ಕೊಡುವಂತೆ ಕೇಳಿದ್ದ, ಆಕೆ ಕೊಡುವುದಿಲ್ಲ ಎಂದಾಗ, ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಬೆದರಿಕೆ ಹಾಕಿ ನೇಣಿನ
ಕೋಗಿಲು ಅಕ್ರಮ ನಿವಾಸಿಗಳ ಪೌರತ್ವ ಎನ್‌ಐಎ ತನಿಖೆಗೆ ವಹಿಸಿ: ಆರ್ ಅಶೋಕ ಆಗ್ರಹ
ಕೋಗಿಲು ಕ್ರಾಸ್‌ನ ಫಕೀರ್ ಬಡಾವಣೆ ಕ್ರಮೇಣ ಸ್ಲೀಪರ್ ಸೆಲ್‌ಗಳ ಕೇಂದ್ರವಾಗುವ ಅಪಾಯವಿದೆ. ಆದ್ದರಿಂದ ಅಕ್ರಮ ನಿವಾಸಿಗಳ ಪೌರತ್ವವನ್ನು ಸರ್ಕಾರ ಪರಿಶೀಲಿಸಬೇಕು. ಇದನ್ನು ಎನ್‌ಐಎ ತನಿಖೆಗೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಆಗ್ರಹಿಸಿದ್ದಾರೆ. ಕೋಗಿಲು ಕ್ರಾಸ್‌ನಲ್ಲಿ ಒತ್ತುವರಿ ತೆರವು ಮಾಡಿದ
ಮಾಟ ಮಂತ್ರ ಮಾಡ್ತಾರೆಂದು ಗಂಡ ಹೆಂಡತಿಯ ಜೀವಂತ ಸುಟ್ಟ ಗ್ರಾಮಸ್ಥರು
ದಂಪತಿ ಮಾಟ ಮಂತ್ರ ಮಾಡುತ್ತಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಗಂಡ ಹೆಂಡತಿಯನ್ನು ಜೀವಂತವಾಗಿ ಸುಟ್ಟು ಹಾಕಿರುವ ಹೃದಯವಿರಾವಕ ಘಟನೆ ಅಸ್ಸಾಂನ ರ್ಬಿ ಆಂಗ್ಲಾಂಗ್ ಜಿಲ್ಲೆಯ ಬೆಲೋಗುರಿ ಮುಂಡಾ ಗ್ರಾಮದಲ್ಲಿ ನಡೆದಿದೆ. ಮುಂಡಾ ಗ್ರಾಮದಲ್ಲಿ ದಂಪತಿ ಮಾಟಮಂತ್ರದಲ್ಲಿ ತೊಡಗಿದ್ದಾರೆ, ಇದರಿಂದಾಗಿ ಊರಿನಲ್ಲಿ ಅನಾರೋಗ್ಯ ಉಂಟಾಗಿದೆ
ಸಾಕ್ಷಿ ನಾಶ, ರೇಪಿಸ್ಟ್‌ಗಳ ರಕ್ಷಣೆಗೆ ಯತ್ನ ಆರೋಪ: ಯಲಬುರ್ಗ ವೈದ್ಯಾಧಿಕಾರಿ ವಿರುದ್ಧ ಎಫ್‌ಐಆರ್
ಯಲಬುರ್ಗದ ಮದ್ಲೂರಿನಲ್ಲಿ ನವೆಂಬರ್ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ವೈದ್ಯಾಧಿಕಾರಿ ವಿರುದ್ಧವೂ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಗ್ಯಾಂಗ್ ರೇಪ್ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ತಾಲೂಕು ವೈದ್ಯಾಧಿಕಾರಿ ಶಿವಕುಮಾರ್ ಅತ್ಯಾಚಾರಿಗಳನ್ನು ರಕ್ಷಿಸಲು ಪ್ರಯತ್ನಿಸಿ ಸಾಕ್ಷಿ ನಾಶಪಡಿಸಿರುವ
6,322 ಪರಿಶಿಷ್ಟ ಕುಟುಂಬಗಳಿಗೆ ಕೊಳವೆಬಾವಿ ಭಾಗ್ಯ: ಕಾಮಗಾರಿ ಚುರುಕುಗೊಳಿಸಲು ಸಚಿವ ಎನ್.ಎಸ್. ಭೋಸರಾಜು ಖಡಕ್ ಸೂಚನೆ
ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 2025-26ನೇ ಸಾಲಿನಲ್ಲಿ ಮಂಜೂರಾಗಿರುವ ಕಾಮಗಾರಿಗಳನ್ನು ವಿಳಂಬವಿಲ್ಲದೆ ಚುರುಕುಗೊಳಿಸಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದು
ಪಡಿಕ್ಕಲ್, ಮಯಾಂಕ್ ಶತಕ: ಪುದುಚೇರಿ ಮಣಿಸಿದ ಕರ್ನಾಟಕ
ಆರಂಭಿಕರಾದ ನಾಯಕ ಮಯಾಂಕ್ ಅಗರ್ವಾಲ್ ಮತ್ತು ದೇವದತ್ ಪಡಿಕ್ಕಲ್ ಸಿಡಿಸಿದ ಶತಕಗಳ ನೆರವಿನಿಂದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಪಂದ್ಯದಲ್ಲಿ ಪುದುಚೇರಿ ತಂಡವನ್ನು 67 ರನ್ ಗಳಿಂದ ಮಣಿಸಿದೆ. ಜೈಪುರದಲ್ಲಿ ಬುಧವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಮೊದಲು
ಚಲಿಸುವ ವಾಹನದಲ್ಲಿ ಮಹಿಳೆ ಮೇಲೆ 2 ಗಂಟೆ ಅತ್ಯಾಚಾರ ಎಸಗಿ ರಸ್ತೆಯಲ್ಲಿ ಎಸೆದು ಹೋದ ಕಿಡಿಗೇಡಿಗಳು!
ಚಲಿಸುವ ವ್ಯಾನ್ ನಲ್ಲಿ 28 ವರ್ಷದ ಮಹಿಳೆ ಮೇಲೆ 2 ಗಂಟೆಗಳ ನಿರಂತರ ಸಾಮೂಹಿಕ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು ನಂತರ ರಸ್ತೆಯಲ್ಲಿ ಬಿಸಾಕಿ ಹೋದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಫರೀದಾಬಾದ್ ನಲ್ಲಿ ನಡೆದಿದೆ. ಸೋಮವಾರ ಮತ್ತು ಮಂಗಳವಾರದ ನಡುವೆ ರಾತ್ರಿ
ಕೋಗಿಲು ಪ್ರಕರಣ: ಹೊರ ರಾಜ್ಯದವರಿಗೆ ಮನೆ ಕೊಟ್ಟರೆ ಸಹಿಸಲ್ಲವೆಂದು ಎಚ್ಚರಿಕೆ ನೀಡಿದ ಕರವೇ
ಕೋಗಿಲು ಲೇಔಟ್ ಹಾಗೂ ಫಕೀರ್ ಕಾಲೊನಿಯಲ್ಲಿ ಅಕ್ರಮವಾಗಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದವರನ್ನು ತೆರವುಗೊಳಿಸಿರುವ ಪ್ರಕರಣ ಸಂಬಂಧ ಹೊರ ರಾಜ್ಯದವರಿಗೆ ಫ್ಲ್ಯಾಟ್ ಕೊಟ್ಟರೆ ಸಹಿಸುವುದಿಲ್ಲ, ಹೋರಾಟ ಮಾಡುತ್ತೇವೆ, ಮೂಲ ಕನ್ನಡಿಗರಿಗೆ ಮನೆಗಳನ್ನು ಕೊಡಿ ಎಂದು ಕರವೇ ರಾಜಾಧ್ಯಕ್ಷ ಪ್ರವೀಣ್ ಶೆಟ್ಟಿ ಆಗ್ರಹಿಸಿದ್ದಾರೆ.
ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾವೆಂದ ಚೀನಾ: ಮೂರನೆಯವರು ಭಾಗಿಯಾಗಿಲ್ಲವೆಂದ ಭಾರತ
ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧ ನಿಲ್ಲಿಸುವ ಸಂಧಾನ ಮಾಡಿದ್ದು ನಾವು ಎಂಬ ಚೀನಾದ ಹೇಳಿಕೆಯನ್ನು ಭಾರತ ತಿರಸ್ಕರಿಸಿದ್ದು, ಕದನ ವಿರಾಮ ನಿರ್ಧಾರದಲ್ಲಿ ಮೂರನೆಯವರು ಭಾಗಿಯಾಗಿಲ್ಲ ಎಂದು ಹೇಳಿದೆ. ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾನವು ಕದನ ವಿರಾಮಕ್ಕಾಗಿ ಭಾರತದ ಡಿಜಿಎಂಒ ಅವರನ್ನು
ಪೊಲೀಸ್ ವಿರುದ್ಧ ವಿಜಯಲಕ್ಷ್ಮೀ ಆರೋಪ: ಆಯುಕ್ತರು ಹೇಳಿದ್ದೇನು
“ಪೊಲೀಸರು ಕೇವಲ ಕೆಲವರಿಗಲ್ಲ, ಎಲ್ಲರಿಗಾಗಿಯೂ ಇದ್ದಾರೆ” ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ವಿರುದ್ಧ ಮಾಡಿದ್ದ ಆರೋಪಕ್ಕೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣದ ಗಂಭೀರತೆಯನ್ನು




