kannada news
ಹಿಂದುಳಿದ ವರ್ಗಗಳಿಗೂ ರಾಜಕೀಯ ಮೀಸಲಾತಿ ಕೊಡಿ: ಸಂತೋಷ್ ಲಾಡ್
ದೇಶದಲ್ಲಿರುವ ಎಲ್ಲ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿಯನ್ನೂ ನೀಡಬೇಕು ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ನಡೆದ ‘ರಜತ ಮಹೋತ್ಸವ ಹಾಗೂ ಹಿಂದುಳಿದ ಜಾತಿಗಳ ಬೃಹತ್ ಜನಜಾಗೃತಿ ಸಮಾವೇಶ’ ದಲ್ಲಿ ಅವರು ಮಾತನಾಡಿದರು. ದೇಶಾದ್ಯಂತ ಹಿಂದುಳಿದ ವರ್ಗಗಳ ಜನ ಸಂಖ್ಯೆ 65 ಕೋಟಿಗೂ ಹೆಚ್ಚಾಗಿದೆ. ಇದು ದೇಶದ ಒಟ್ಟು ಜನಸಂಖ್ಯೆಯ ಶೇಕಡಾ
ರಾಜ್ಯದಲ್ಲಿ 582ಕ್ಕೂ ಹೆಚ್ಚು ನಕಲಿ ವೈದ್ಯರು ಪತ್ತೆ
ರಾಜ್ಯದಲ್ಲಿ 582ಕ್ಕೂ ಹೆಚ್ಚು ನಕಲಿ ವೈದ್ಯರನ್ನು ಪತ್ತೆ ಹಚ್ಚಿ ಆರೋಗ್ಯ ಇಲಾಖೆಯು ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಹೈಕೋರ್ಟ್ ಆದೇಶದ ಬಳಿಕ 2025 ರಲ್ಲಿ ನಕಲಿ ವೈದ್ಯರ ಪತ್ತೆ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ನಕಲಿ ಔಷಧ ಜಾಲ ಹಾಗೂ ನಕಲಿ ವೈದ್ಯರ
ಪಾದಯಾತ್ರೆಯಿಂದ ಅಧಿಕಾರವೆಂಬ ಭ್ರಮೆ ಬಿಜೆಪಿಯದು: ಸಚಿವ ಜಾರ್ಜ್
ಪಾದಯಾತ್ರೆಯಿಂದ ಅಧಿಕಾರಕ್ಕೆ ಬರಬಹುದು ಎಂಬ ಭ್ರಮೆಯಲ್ಲಿ ಬಿಜೆಪಿಯವರಿದ್ದಾರೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಟೀಕಿಸಿದರು. ಮಡಿಕೇರಿಯಲ್ಲಿ ಬಿಜೆಪಿಯ ಪಾದಯಾತ್ರೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಈ ಹಿಂದೆ ನನ್ನ ಮೇಲೆ ಸಾಕಷ್ಟು ಆರೋಪ ಮಾಡಿದ್ದಾರೆ. ಜಿಲ್ಲಾಧಿಕಾರಿಯಾಗಿದ್ದ ಡಿಕೆರವಿ ಪ್ರಕರಣ, ಡಿವೈಎಸ್ಪಿ ಗಣಪತಿ
ದೆಹಲಿಯಲ್ಲಿ ಪಿಜಿ ಕುಸಿದು ಆರು ವಿದ್ಯಾರ್ಥಿಗಳ ಸಾವು
ದೆಹಲಿಯ ಸತ್ಯನಿಕೇತನ್ ಪ್ರದೇಶದಲ್ಲಿ ಭಾನುವಾರ ಯುವಕರ ಪಿಜಿ ಕಟ್ಟವೊಂದು ಕುಸಿದು ಆರು ಮಂದಿ ಮೃತಪಟ್ಟಿದ್ದಾರೆ. ಹನ್ನೊಂದು ಮಂದಿಯನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿದೆ. ದೆಹಲಿ ವಿಶ್ವವಿದ್ಯಾಲಯದ ಸೌತ್ ಕ್ಯಾಂಪಸ್ ಸಮೀಪ ದುರಸ್ತಿ ಕಾಮಗಾರಿ ನಡೆಯುತ್ತಿದ್ದಾಗ ಬಾಲಕರ ಪಿಜಿ ವಸತಿ ಕಟ್ಟಡ ಕುಸಿದು ಈ ದುರಂತ
ಸರ್ವರಿಗೂ ನ್ಯಾಯ, ಸಮಾನ ಅವಕಾಶ ಸಿಗೋವರೆಗೆ ನಿಮ್ಮೊಂದಿಗೆ ಹೋರಾಡುವೆ: ಮಾಜಿ ಸಿಎಂ ಸಿದ್ದರಾಮಯ್ಯ
ಸರ್ವರಿಗೆ ನ್ಯಾಯ ಸಿಗುವವರೆಗೆ , ಸಮಾನ ಅವಕಾಶ ಸಿಗುವವರೆಗೆ, ಸಮಾಜದಲ್ಲಿ ಜಾತಿ ವ್ಯವಸ್ಥೆ ತೊಲಗುವವರೆಗೆ ನಿಮ್ಮೊಂದಿಗೆ ಇದ್ದು, ಹೋರಾಟ ಮಾಡುತ್ತೇನೆ. ಹೀಗಾಗಿ ನೀವ್ಯಾರೂ ಆತಂಕಕ್ಕೆ ಒಳಪಡುವ ಅವಶ್ಯಕತೆಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಚುನಾವಣಾ ರಾಜಕೀಯದಿಂದ ಮಾತ್ರ ನಾನು ಹಿಂದೆ ಸರಿದಿದ್ದೇನೆ.
ಭಾರತ-ಅಮೆರಿಕ ನಡುವೆ ಎಲ್ಲ ಕ್ಷೇತ್ರಗಳ ಸಹಯೋಗಕ್ಕೆ ಬೆಂಗಳೂರಿನಿಂದ ಪ್ರಬಲ ತಾಂತ್ರಿಕ ಆಯಾಮ: ಸಿಎಂ
ಭಾರತ-ಅಮೆರಿಕ ನಡುವೆ ತಂತ್ರಜ್ಞಾನ, ಶಿಕ್ಷಣ, ನಾವೀನ್ಯತೆ, ಸಂಶೋಧನೆ, ಹೂಡಿಕೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಗಾಢ ಸಹಯೋಗ ಅಗತ್ಯವಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಅಮೆರಿಕ ಸ್ವಾತಂತ್ರ್ಯದ 250ನೇ ವಾರ್ಷಿಕೋತ್ಸವದ ನೆನಪಿನಲ್ಲಿ ಖಾಸಗಿ ಹೊಟೇಲ್ ನಲ್ಲಿ ಭಾರತದಲ್ಲಿನ ಅಮೆರಿಕದ ರಾಯಭಾರಿ ಸರ್ಜಿಯೋ
ಪ್ರಚಾರಕ್ಕಾಗಿ ಬಿಜೆಪಿ ಆಯೋಜಿಸಿದ್ದ ಬಳ್ಳಾರಿ ಚಲೋ ವಿಫಲ: ಯತೀಂದ್ರ ಸಿದ್ದರಾಮಯ್ಯ
ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ನಡೆಸಲಾಗುತ್ತಿದ್ದು, ಜನಬೆಂಬಲವಿಲ್ಲದೆ ವಿಫಲವಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಟೀಕಿಸಿದರು. ರಾಯಚೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಉದ್ದೇಶದಿಂದ
ಶಿಕ್ಷಕರಿಗೆ ಗೌರವ ನೀಡಲು ವೃತ್ತಿಯ ಬಿರುದಾಗಿ Tr ಬಳಸಲು ತೀರ್ಮಾನ: ಸಿಎಂ
ಇಂದು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನ ಆಚರಿಸುತ್ತಿದ್ದೇವೆ. ಬೇರೆ ವೃತ್ತಿಪರರಿಗೆ ವೃತ್ತಿ ಆಧಾರಿತ ಗೌರವ ಸಿಗುತ್ತದೆ. ಅದೇ ರೀತಿ ಶಿಕ್ಷಕರಿಗೆ ವೃತ್ತಿ ಆಧಾರಿತ ಗೌರವ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ವಿಜಯನಗರ
ಸುಪ್ರೀಂ ಆದೇಶದಂತೆ ನೀರು ಬಿಡ್ತಿಲ್ಲ, ಒಂದು ಲಕ್ಷ ಕೋಟಿ ರೂ. ಪರಿಹಾರ ಕೊಡಿ: ರಾಜ್ಯಕ್ಕೆ ತಮಿಳುನಾಡು ರೈತರ ಆಗ್ರಹ
ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ಸರ್ಕಾರವು ತಮಿಳುನಾಡಿಗೆ ನೀರು ಹರಿಸುತ್ತಿಲ್ಲ ಎಂದು ಆರೋಪಿಸಿರುವ ದಕ್ಷಿಣ ಭಾರತ ನದಿಗಳ ಜೋಡಣೆ ರೈತ ಸಂಘದ ಅಧ್ಯಕ್ಷ ಪಿ. ಅಯ್ಯಾಕಣ್ಣು, ಕರ್ನಾಟಕದಿಂದ ಒಂದು ಲಕ್ಷ ಕೋಟಿ ರೂ. ಪರಿಹಾರ ಪಡೆಯಲು ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೊರೆ
ಗದಗ ಮೀಟರ್ ಬಡ್ಡಿ ದಂಧೆ: 12 ಲಕ್ಷ ರೂ. ಸಾಲಕ್ಕೆ 1.5 ಕೋಟಿಯ ಆಸ್ತಿ ಜಪ್ತಿ, ಕುಟುಂಬ ಬೀದಿಗೆ
ಗದಗ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆ ಮಿತಿ ಮೀರಿದ್ದು, ಸಾಲ ಪಡೆದವರ ಕೋಟ್ಯಾಂತರ ರೂ. ಮೌಲ್ಯದ ಆಸ್ತಿಗಳನ್ನು ಸಾಲ ನೀಡಿದವರು ದರೋಡೆ ಮಾಡುತ್ತಿದ್ದಾರೆ. ಬಡ್ಡಿ ರಾಕ್ಷಸರು 12 ಲಕ್ಷ ರೂ. ಸಾಲಕ್ಕೆ 1.5 ಕೋಟಿಯ ಆಸ್ತಿ ಜಪ್ತಿ ಮಾಡಿದ್ದು, ಕಟುಂಬ ಮನೆ




