Saturday, September 05, 2026
Menu

ಸುಪ್ರೀಂ ಆದೇಶದಂತೆ ನೀರು ಬಿಡ್ತಿಲ್ಲ, ಒಂದು ಲಕ್ಷ ಕೋಟಿ ರೂ. ಪರಿಹಾರ ಕೊಡಿ: ರಾಜ್ಯಕ್ಕೆ ತಮಿಳುನಾಡು ರೈತರ ಆಗ್ರಹ

ಸುಪ್ರೀಂ ಕೋರ್ಟ್‌ ಆದೇಶದಂತೆ ಕರ್ನಾಟಕ ಸರ್ಕಾರವು ತಮಿಳುನಾಡಿಗೆ ನೀರು ಹರಿಸುತ್ತಿಲ್ಲ ಎಂದು ಆರೋಪಿಸಿರುವ ದಕ್ಷಿಣ ಭಾರತ ನದಿಗಳ ಜೋಡಣೆ ರೈತ ಸಂಘದ ಅಧ್ಯಕ್ಷ ಪಿ. ಅಯ್ಯಾಕಣ್ಣು, ಕರ್ನಾಟಕದಿಂದ ಒಂದು ಲಕ್ಷ ಕೋಟಿ ರೂ. ಪರಿಹಾರ ಪಡೆಯಲು ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಬೇಕು ಎಂದು ಒತ್ತಾಯಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅಯ್ಯಾಕಣ್ಣು, ಕರ್ನಾಟಕವು ಸುಪ್ರೀಂ ಕೋರ್ಟ್‌ ಆದೇಶಿಸಿರುವಂತೆ ತಮಿಳುನಾಡಿಗೆ ನೀರು ಬಿಟ್ಟಿಲ್ಲ. ತಮಿಳುನಾಡು ಸರ್ಕಾರ ತನ್ನ ರೈತರಿಗೆ ಅಗತ್ಯ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಕರ್ನಾಟಕಅಗತ್ಯವಿರುವ ಕನಿಷ್ಠ 18,000 ಕ್ಯೂಸೆಕ್‌ ಬದಲಿಗೆ 7,000 ಕ್ಯೂಸೆಕ್‌ ನೀರನ್ನು ಮಾತ್ರ ಬಿಡುಗಡೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ತಮಿಳುನಾಡು ರೈತ ಮುಖಂಡರ ಈ ಹೇಳಿಕೆಗೆ ಕರ್ನಾಟಕದ ರೈತ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಹಲವು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಈ ಭಾಗದಲ್ಲಿ ಬೆಳೆಗಳಿಗೆ ನೀರಿನ ಲಭ್ಯತೆಯೇ ಇಲ್ಲ. ಇಂತಹ ಪರಿಸ್ಥಿತಿಯಲ್ಲೂ ಕರ್ನಾಟಕ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *