Tuesday, September 29, 2026
Menu

ಅಕ್ರಮ ಬಂದೂಕು ಶಸ್ತ್ರಾಸ್ತ್ರಗಳನ್ನು ನವೆಂಬರ್ 1ರೊಳಗೆ ಸರ್ಕಾರಕ್ಕೆ ಒಪ್ಪಿಸಿ: ಸಿಎಂ

ನವೆಂಬರ್ 1ನೇ ತಾರೀಕಿನೊಳಗೆ ಪರವಾನಗಿ‌ ಇಲ್ಲದ ಅಕ್ರಮ ಬಂದೂಕು ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು. ಇಲ್ಲದಿದ್ದರೇ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ. ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಶಿವಕುಮಾರ್  ಮಾತನಾಡಿದರು. ಅಕ್ರಮ ಶಸ್ತ್ರಾಸ್ತ್ರಗಳನ್ನು ತಾವಾಗಿಯೇ ಒಪ್ಪಿಸಿದರೆ ಯಾವುದೇ ಪ್ರಕರಣ ದಾಖಲಿಸುವುದಿಲ್ಲ. ಹೆಚ್ಚಿನ ಅರಣ್ಯ ಇಲಾಖೆ ಸಿಬ್ಬಂದಿಗಳು ಪರವಾನಗಿ ಇಲ್ಲದೇ ಇರುವ ಬಂದೂಕುಗಳಿಂದಲೇ ಜೀವ ಕಳೆದುಕೊಂಡಿದ್ದಾರೆ. ನೀವು ನಿಮ್ಮ ಹಾಗೂ ನಿಮ್ಮ

ನ್ಯಾಯಾಲಯಕ್ಕೆ ನಕಲಿ ಆಧಾರ್‌ ಕಾರ್ಡ್‌ ಸಲ್ಲಿಸಿದ್ದ ಯುವಕರಿಬ್ಬರ ಬಂಧನ

ಪ್ರಕರಣವೊಂದರ ಆರೋಪಿಗೆ ಜಾಮೀನು ಪಡೆದುಕೊಳ್ಳಲು ನ್ಯಾಯಾಲಯಕ್ಕೆ ನಕಲಿ ಆಧಾರ್‌ ಕಾರ್ಡ್‌ ಸಲ್ಲಿಸಿರುವ ಆರೋಪದಡಿ ಉಡುಪಿ ಪೊಲೀಸರು ಯುವಕರಿಬ್ಬರನ್ನು ಬಂಧಿಸಿದ್ದಾರೆ. ಬಂಟ್ವಾಳದ ಉಮರ್ ಫಾರೂಕ್ (32) ಹಾಗೂ ಮಂಗಳೂರಿನ ನಿಶಾಂತ್ ಕುಮಾರ್ (24) ಬಂಧಿತ ಆರೋಪಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಉಡುಪಿ

ಮಹಾರಾಷ್ಟ್ರದಲ್ಲಿ ರಸ್ತೆ ಅಪಘಾತಕ್ಕೆ ಎಂಟು ಮಂದಿ ಬಲಿ

ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ನಾಗಪುರ- ರಾಯ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್‌ ಮತ್ತು ಪಿಕಪ್‌ ವಾಹನ ನಡುವೆ ಅಪಘಾತ ಸಂಭವಿಸಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ. ಪಿಂಪಲ್‌ಗಾಂವ್ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ಅಪಘಾತ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇತರ ಮೂವರನ್ನು ತಕ್ಷಣವೇ ಸಕೋಲಿಯ ಆಸ್ಪತ್ರೆಗೆ

ಗಣೇಶ ಮೂರ್ತಿ ಒಯ್ಯುವಾಗ ವಿದ್ಯುತ್‌ ತಂತಿ ತಗುಲಿ ಯುವಕ ಸಾವು

ರಾಯಚೂರಿನ ಸಿರವಾರ ತಾಲೂಕಿನಲ್ಲಿರುವ ಅತ್ತನೂರು ಗ್ರಾಮದಲ್ಲಿ ವಿದ್ಯುತ್‌ ತಂತಿ ತಗುಲಿ ಪ್ರತಿಷ್ಠಾಪನೆಗಾಗಿ ತರುತ್ತಿದ್ದ ಗಣೇಶ ಮೂರ್ತಿ ಉರುಳಿ ಬಿದ್ದು, ಯುವಕ ಮೃತಪಟ್ಟಿದ್ದಾನೆ. ೨೭ ವರ್ಷದ ಪ್ರೇಮ್‌ ಕುಮಾರ್‌ ಮೃತಪಟ್ಟ ಯುವಕ. ಪ್ರತಿಷ್ಠಪನೆಗಾಗಿ ಗಣೇಶ ಮೂರ್ತಿ ಕೊಂಡೊಯ್ಯುತ್ತಿದ್ದಾಗ ವಿದ್ಯುತ್ ತಂತಿ ತಾಗಿ ಮೂರ್ತಿ

ವಾಟ್ಸಾಪ್‌ ಮೂಲಕ ಕೆಎಸ್ಸಾರ್ಟಿಸಿ ಟಿಕೆಟ್‌ ಬುಕಿಂಗ್‌

ಕರ್ನಾಟಕದ ನಾಗರಿಕರು ಇನ್ನು ಮುಂದೆ ಕೆಎಸ್ಸಾರ್ಟಿಸಿ ಟಿಕೆಟ್‌ಗಳನ್ನು ನೇರವಾಗಿ ವಾಟ್ಸಾಪ್‌ ಮೂಲಕ ಬುಕ್‌ ಮಾಡುವ ಅತ್ಯಾಧುನಿಕ ಡಿಜಿಟಲ್‌ ಸೌಲಭ್ಯಕ್ಕೆ ಚಾಲನೆ ನೀಡಲಾಗಿದೆ. ರಾಜ್ಯ ಸರ್ಕಾರವು ‘ಒನ್ ಕರ್ನಾಟಕ ಮೊಬಿಲಿಟಿ ಆ್ಯಪ್’ ಬಿಡುಗಡೆ ಮಾಡಿದ್ದು, ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಸೇವೆಗಳನ್ನು

‘ಡಾನ್ಸ್ ಕರ್ನಾಟಕ ಡಾನ್ಸ್– ಸೂಪರ್ ಮಾಮ್’ ಶೋ ಸೆ. 12 ರಂದು 

‘ಜೀ ಕನ್ನಡ’ ವಾಹಿನಿ ಕರ್ನಾಟಕದ ತಾಯಂದಿರ ನೃತ್ಯ ಪ್ರತಿಭೆ ಮತ್ತು ಕನಸುಗಳಿಗೆ ಹೊಸ ರೆಕ್ಕೆ ನೀಡಲು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್’ ರಿಯಾಲಿಟಿ ಶೋನೊಂದಿಗೆ ಮತ್ತೊಮ್ಮೆ ವೀಕ್ಷಕರ ಮನೆಮನ ತಲುಪಲು ಸಜ್ಜಾಗಿದೆ. ಸೆಪ್ಟೆಂಬರ್ 12ರಿಂದ ಪ್ರತಿ ಶನಿವಾರ ಮತ್ತು

ಸರ್ಕಾರ ಜನರಿಗೆ ಉತ್ತರದಾಯಿ, ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲಾ ಭರವಸೆ ಈಡೇರಿಸಿ: ಮಾಜಿ ಸಿಎಂ ಸಿದ್ದರಾಮಯ್ಯ

ಯಾವುದೇ ಸರ್ಕಾರ ಜನರಿಗೆ ಉತ್ತರದಾಯಿಯಾಗಿ ನಡೆದುಕೊಳ್ಳಬೇಕು. ಅದು ಸರ್ಕಾರದ ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಮೂಲ ಆಶಯ. ಡಿಕೆ ಶಿವಕುಮಾರ್‌  ನೇತೃತ್ವದ ಸರ್ಕಾರವು  100 ದಿನಗಳನ್ನು ಪೂರೈಸಿದೆ. ಅದರ ಜ್ಞಾಪಕಾರ್ಥವಾಗಿ ಸರ್ಕಾರ ಈ ಆಚರಣೆಯನ್ನು ಮಾಡುತ್ತಿದೆ. 100 ದಿನಗಳು, ಇದೊಂದು ಸಂಭ್ರಮಾಚರಣೆಯಲ್ಲ,  ಈ

ದೃಢ ಕರ್ನಾಟಕದ ಸಂಕಲ್ಪ: ಫಲಾನುಭವಿಗಳಿಂದಲೇ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಡಿಕೆ ಶಿವಕುಮಾರ್‌

ಆರೋಗ್ಯ, ಶಿಕ್ಷಣ, ಜಲ ಭದ್ರತೆ, ಹೂಡಿಕೆ ಮತ್ತು ಆರ್ಥಿಕ ಬಲ, ಬೆಂಗಳೂರು ಅಭಿವೃದ್ಧಿ, ಪ್ರದೇಶಿಕ ಸಮತೋಲನ, ಸಾಮಾಜಿಕ ನ್ಯಾಯ, ಬಂಡವಾಳ ಹೂಡಿಕೆ, ಉದ್ಯೋಗಕ್ಕೆ ಆದ್ಯತೆ ನೀಡುವ ಧ್ಯೇಯದೊಂದಿಗೆ  100 ದಿನಗಳ ದೃಢ ಕರ್ನಾಟಕದ ಸಂಕಲ್ಪ ಸಮಾರಂಭವನ್ನು  ಫಲಾನುಭವಿಗಳಿಂದಲೇ  ಸಿಎಂ ಡಿಕೆ ಶಿವಕುಮಾರ್‌ ಉದ್ಘಾಟಿಸಿದರು.

ರಾಜ್ಯದ ಹಿತಕ್ಕಾಗಿ ಮುಖ್ಯಮಂತ್ರಿಯಾಗಿ ಡಿಕೆಶಿ ಹೋರಾಟಗಳು

 ರಾಜ್ಯದ ಸಮಗ್ರ ಹಿತರಕ್ಷಣೆಗಾಗಿ ಮುಖ್ಯಮಂತ್ರಿಯಾದ ಬಳಿಕ ಡಿಕೆ ಶಿವಕುಮಾರ್‌ ಹಲವು ಪರಿಣಾಮಕಾರಿ ಕ್ರಮಗಳೊಂದಿಗೆ ಹೋರಾಟ ನಡೆಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಹೀಗಿವೆ, ದೆಹಲಿಯಲ್ಲಿ ನಿವೃತ್ತ ಐಎಎಸ್,ಐಪಿಎಸ್ ಅಧಿಕಾರಿಗಳ ತಂಡ ರಚನೆಗೆ ನಿರ್ಧಾರ. ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯಕ್ಕೆ ಸಂಬಂಧಿಸಿದ ವಿವಿಧ ಪ್ರಕರಣಗಳ ನಿರ್ವಹಣೆ

ಪ್ಲೈಓವರ್ ಬೈಕ್- ಆಟೋ ಸಂಚಾರ ನಿಷೇಧ ಸರಿಯೇ ?

ಬೆಂಗಳೂರಿನ ಮೇಲು ಸೇತುವೆಗಳನ್ನು ಬರೀ ಕಾರುಗಳ ಓಡಾಟಕ್ಕೆ ಸೀಮಿತಗೊಳಿಸಿ, ಬೈಕು ಹಾಗು ಆಟೋ ಸಂಚಾರವನ್ನು ನಿಷೇಧಿಸುವುದು ವಾಹನ ಸವಾರನ ಸಹಜ ನ್ಯಾಯದ ಸಿದ್ದಾಂತಕ್ಕೆ ವಿರುದ್ಧ. ನೆಗಡಿ ಬಂದಿದೆ ಎಂದು ಮೂಗನ್ನೇ ಕತ್ತರಿಸುವ ಆಲೋಚನೆ ಸರಿಯೇ ? ಇಂದು ಬೆಂಗಳೂರಿನ ಮಧ್ಯಮ ವರ್ಗದ