kannada news
ಅನುಮತಿಯಿಲ್ಲದೆ ಹರ್ಮುಜ್ ಜಲಸಂಧಿಗೆ ಬರುವ ಹಡಗು ಹೊಡೆದುರುಳಿಸುತ್ತೇವೆ: ಇರಾನ್
ಅಮೆರಿಕ-ಇಸ್ರೇಲ್ ಮತ್ತು ಇರಾನ್ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾದ ಬಳಿಕ ಲೆಬೆನಾನ್ ಮೇಲೆ ಇಸ್ರೇಲ್ ಸೇನೆ 100ಕ್ಕೂ ಕ್ಷಿಪಣಿ ದಾಳಿ ನಡೆಸಿದ್ದು, ಕನಿಷ್ಟ 250 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಮಧ್ಯೆ ಇರಾನ್ ನೌಕಾಪಡೆಯು ಹರ್ಮುಜ್ ಜಲಸಂಧಿಯ ಬಳಿಯ ಹಡಗುಗಳಿಗೆ ಟೆಹ್ರಾನ್‌ನ ಅನುಮತಿ ಅಗತ್ಯವಿದೆ ಎಂದು ಹೇಳುವ ಮೂಲಕ ಎಚ್ಚರಿಕೆ ರವಾನಿಸಿದೆ. ಅನುಮತಿಯಿಲ್ಲದೆ ಹರ್ಮುಜ್ ಜಲಸಂಧಿ ಮೂಲಕ ಹಾದುಹೋಗಲು ಪ್ರಯತ್ನಿಸುವ ಯಾವುದೇ ಹಡಗನ್ನು ಇರಾನ್ ಸೇನೆ ಹೊಡೆದುರುಳಿಸಲಿದೆ
ಕದನ ವಿರಾಮ ಮುರಿಯುವವರೆಗೆ ಮಾತ್ರ ಇರಾನ್ ಸುರಕ್ಷಿತ: ಟ್ರಂಪ್ ವಾರ್ನ್
ಕದನ ವಿರಾಮ ಮುರಿಯುವ ತನಕ ಮಾತ್ರ ಇರಾನ್‍ನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಸುರಕ್ಷಿತವಾಗಿ ಇರಲಿವೆ. ಒಪ್ಪಂದ ಮುರಿದ ಕ್ಷಣದಿಂದಲೇ ದೊಡ್ಡ ದಾಳಿ ನಡೆಯಲಿದೆ. ಆ ದಾಳಿ ಹಿಂದೆಂದಿಗಿಂತಲೂ ಭೀಕರವಾಗಿ ಇರುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಚಾರಣಿಗರಿಗೆ ಟ್ರ್ಯಾಕಿಂಗ್ ಆ್ಯಪ್, ವಿಮೆ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ
ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಚಾರಣಿಗರ ಸುರಕ್ಷತೆ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ, ಈ ಸಂಬಂಧ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಹೊಸ ಮಾರ್ಗಸೂಚಿಗಳನ್ನು ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿ, ಚಾರಣಿಗರ ಮೊಬೈಲ್‌ನಲ್ಲಿ ಕಡ್ಡಾಯವಾಗಿ ಟ್ರ್ಯಾಕಿಂಗ್ ಆ್ಯಪ್ ಅಳವಡಿಕೆ
ತನ್ನ ಮದುವೆಗೆ ಆಹ್ವಾನಿಸಲೆಂದು ಹೋದಾತ ಜಾತ್ರೆಯಲ್ಲಿ ಪಲ್ಲಕ್ಕಿ ಹೊತ್ತ ಟ್ರ್ಯಾಕ್ಟರ್‌ಗೆ ಬಲಿ
ಬೆಂಗಳೂರಿನ ಹುಳಿಮಾವು ಜಾತ್ರೆಯಲ್ಲಿ ಪಲ್ಲಕ್ಕಿ ಹೊತ್ತ ಟ್ರ್ಯಾಕ್ಟರ್ ಹರಿದ ಪರಿಣಾಮ ಯುವಕ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಹುಳಿಮಾವು ಗ್ರಾಮದ ಶ್ರೀ ಕೋದಂಡ ರಾಮಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ನಡೆದಿದ್ದು, ರಾತ್ರಿ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪಲ್ಲಕ್ಕಿಗಳನ್ನು ನೋಡುತ್ತಾ ನಿಂತಿದ್ದ
ಯೋಗೇಶ್ ಗೌಡ ಕೊಲೆ ಕೇಸ್: ಏಪ್ರಿಲ್ 15ಕ್ಕೆ ತೀರ್ಪು ಪ್ರಕಟ
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ಪ್ರಕಟಿಸುವುದನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಏಪ್ರಿಲ್ 15ಕ್ಕೆ ಮುಂದೂಡಿದೆ. ವಿಚಾರಣೆ ನಡೆಸಿದ ನ್ಯಾಯಾಲಯ ಗುರುವಾರ ಆದೇಶ ಪ್ರಕಟಿಸುವುದಾಗಿ ತಿಳಿಸಿತ್ತು. ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ
ಮಗ ಬೆಂಗಳೂರಲ್ಲಿ, ಮಗಳು ದುಬೈನಲ್ಲಿ: ಮೂಡಿಗೆರೆಯಲ್ಲಿ ಪತಿ ಶವದೊಂದಿಗೆ 10 ದಿನ ಕಳೆದ ಅಸ್ವಸ್ಥ ಪತ್ನಿ
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಮಲಗಿದ್ದಲ್ಲೇ ಮೃತಪಟ್ಟಿದ್ದು, ಪತಿಯ ಶವದದೊಂದಿಗೆ ಮಾನಸಿಕ ಅಸ್ವಸ್ಥ ಪತ್ನಿ 10 ದಿನ ಕಳೆದಿದ್ದಾರೆ. ಪತಿ ಸತ್ತಿರುವುದೇ ಪತ್ನಿಗೆ ತಿಳಿದಿಲ್ಲ. 77 ವರ್ಷದ ಸಿರಿಲ್ ಮೋನಿಸ್ ಅನಾರೋಗ್ಯದಿಂದ ಮಲಗಿದ್ದಲ್ಲಿಯೇ ಮೃತಪಟ್ಟಿದ್ದರು. ಮಾನಸಿಕ ಅಸ್ವಸ್ಥ ಪತ್ನಿಯು ಪತಿ
ಬೆಂಗಳೂರಿನ ಮೂವರು ವಿಜಯಪುರ ಕೆರೆಯಲ್ಲಿ ಮುಳುಗಿ ಸಾವು
ಬೆಂಗಳೂರಿನಿಂದ ವಿಜಯಪುರ ಪ್ರವಾಸಕ್ಕೆ ಬಂದಿದ್ದವರಲ್ಲಿ ಮೂವರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಿಜಯಪುರ ನಗರ ಹೊರವಲಯದ ಭೂತನಾಳ ಕೆರೆಯಲ್ಲಿ ಈ ದುರಂತ ಸಂಭವಿಸಿದೆ. ಮೃತರನ್ನು ಬೆಂಗಳೂರಿನ ಆರ್.ಟಿ ನಗರದ ಬಾಲಕ ಮಹಮ್ಮದ್ ಹಯಾತ್, ಅಬ್ದುಲ್ ಖುದ್ದುಸ್ ಹಾಗೂ ಹೈದರ್ ಪಾಶಾ ಎಂದು ಗುರುತಿಸಲಾಗಿದೆ.
ಅಮೆರಿಕ-ಇರಾನ್ ಕದನ ವಿರಾಮ: ಕಚ್ಚಾ ತೈಲ ಬೆಲೆ ಕುಸಿತ
ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ತಾತ್ಕಾಲಿಕವಾಗಿ ವಿರಾಮ ಕಂಡಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿದೆ. ಬ್ಯಾರೆಲ್‌ಗೆ 100 ಡಾಲರ್ ಇಳಿಕೆಯಾಗಿದೆ. ಯುದ್ಧದ ವೇಳೆ ಬ್ಯಾರೆಲ್‌ಗೆ 160 ಡಾಲರ್ ವರೆಗೂ ಏರಿಕೆಯಾಗಿತ್ತು. ಕದನ ವಿರಾಮದಿಂದ
ಶಬರಿಮಲೆಗೆ ಮಹಿಳೆಯರ ನಿರ್ಬಂಧ ಧಾರ್ಮಿಕ ಸಂಪ್ರದಾಯ: ಸುಪ್ರೀಂಗೆ ಕೇಂದ್ರ ಪ್ರತಿಕ್ರಿಯೆ
ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿರ್ಬಂಧವು ಧಾರ್ಮಿಕ ಸಂಪ್ರದಾಯ ಮತ್ತು ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದ್ದು, ಅದು ಲಿಂಗ ತಾರತಮ್ಯವಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿದೆ. 2018ರಲ್ಲಿ ಸುಪ್ರೀಂ ಕೋರ್ಟ್ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ಪ್ರವೇಶ ಅನುಮತಿ
ಯಲಹಂಕ ಹಾಸ್ಟೆಲ್ ಬಳಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ: ಇಬ್ಬರ ಬಂಧನ
ಬೆಂಗಳೂರಿನ ಯಲಹಂಕ ಉಪನಗರದ ಬಾಯ್ಸ್ ಹಾಸ್ಟೆಲ್ ಹಿಂಭಾಗ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಹಮ್ಮದ್ ನಿಶಾದ್ ಹಾಗೂ ಆದೇಶ್ ಬಂಧಿತರು. 10.5 ಲಕ್ಷದ ರೂ. ಮೌಲ್ಯದ 21 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರೂ ಹಾಸ್ಟೆಲ್




